IPS: ಯುವ ಐಪಿಎಸ್ ಹರ್ಷವರ್ಧನ್ ಅವರ ಸಾವಿಗೆ ಇದೇ ಕಾರಣನಾ ?
ಕರ್ನಾಟಕದಲ್ಲಿ ಸಂಭವಿಸಿರುವ ದುರಂತಕ್ಕೆ ಇಡೀ ದೇಶವೇ ಮರುಗಿದೆ. ಪ್ರೊಬೇಷನರಿ ಐಪಿಎಸ್ ಅಧಿಕಾರಿಯಾಗಿದ್ದ ಹರ್ಷವರ್ಧನ್ ಅವರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದು. ಅವರ ಸಾವಿನ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಇದೀಗ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹರ್ಷವರ್ಧನ್ ಅವರ ಸಾವು ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ. ರಾಜ್ಯದಲ್ಲಿ ಅಧಿಕಾರ ಸ್ವೀಕಾರ ಮಾಡುವ ಹಂತದಲ್ಲೇ ಯುವ ಐಪಿಎಸ್ ( IPS) ಅಧಿಕಾರಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಇದಕ್ಕೆ ಕಾರಣವೇನು ಎನ್ನುವುದು ಈಗ ಚರ್ಚೆಯಾಗುತ್ತಿದೆ.
ಜೀಪ್‌ನಲ್ಲಿ ಸುರಕ್ಷಾ ಕ್ರಮಗಳು ಇರಲಿಲ್ಲವೇ. ಇದೇ ಕಾರಣಕ್ಕೆ ಯುವ ಅಧಿಕಾರಿಯೊಬ್ಬರು ಸಾವನ್ನಪ್ಪಬೇಕಾಯಿತೇ ಎನ್ನುವ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿನ ನಿವೃತ್ತ ಪೊಲೀಸ್ ಕಮಿಷನರ್ ಹಾಗೂ ರಾಜಕಾರಣಿಯಾಗಿರುವ ಭಾಸ್ಕರ್ ರಾವ್ ಅವರ ಒಂದು ಟ್ವೀಟ್. ಭಾಸ್ಕರ್ ರಾವ್ ಅವರ ಟ್ವೀಟ್ ಇದೀಗ ಭಾರೀ ಸಂಚಲನಕ್ಕೆ ಹಾಗೂ ಪ್ರಶ್ನೆಗಳಿಗೆ ಎಡೆಮಾಡಿ ಕೊಟ್ಟಿದೆ.

ಕರ್ನಾಟಕದ ಯುವ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಅವರು, ಐಜಿ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಮೈಸೂರಿಗೆ ಹೋಗಿದ್ದರು. ಹಾಸನದ ಕಡೆ ಬರುವಾಗ ಈ ದುರಂತ ಸಂಭವಿಸಿತ್ತು. ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ಇದ್ದ ವಾಹನ ಅಪಘಾತಕ್ಕೆ ಈಡಾಗಿತ್ತು. ಈ ಅಪಘಾತದಲ್ಲಿ ತೀವ್ರ ಗಾಯಗೊಂಡ ಹರ್ಷಬರ್ಧನ್ ಅವರನ್ನು ಹಾಸನದಿಂದ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಸಹ ಸಾಧ್ಯವಾಗಿರಲಿಲ್ಲ ಎನ್ನಲಾಗಿತ್ತು.
ಈ ದುರಂತರದ ಬೆನ್ನಲ್ಲೇ ಭಾಸ್ಕರ್ ರಾವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ರಸ್ತೆಗಳಲ್ಲಿ ಪೊಲೀಸರ ಸಂಚಾರವು ಯಾವಾಗಲೂ ಒತ್ತಡದಿಂದಲೇ ಕೂಡಿರುತ್ತವೆ. ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಸಿದ್ಧವಾಗಿದ್ದ ಯುವ ಐಪಿಎಸ್ ಅಧಿಕಾರಿ ದುರಂತ ಅಂತ್ಯ ಕಂಡಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮುಂದುವರಿದು ಭಾರತೀಯ ಪೊಲೀಸರು ಮಹೀಂದ್ರಾ ಜೀಪುಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ವರ್ಷಗಳಲ್ಲಿ ಬೊಲೆರೊ ಸಾಕಷ್ಟು ಸುಧಾರಿಸಿದೆ. ಆದರೆ ತುರ್ತು ಸುರಕ್ಷತಾ ಸಾಧನಗಳನ್ನು ಉತ್ತೀಕರಿಸುವ ಅವಶ್ಯಕತೆ ಇದೆ. ಆನಂದ ಮಹೀಂದ್ರ ಅವರ ತಂಡದಿಂದ ವೈಯಕ್ತಿಕವಾಗಿ ಕರ್ನಾಟಕ ಬೊಲೆರೋಗಳನ್ನು ಪರಿಶೀಲನೆ ಮಾಡುವ ಅವಶ್ಯಕತೆ ಇದೆ.
Police movements on road are always stressful . The tragic death of a young IPS Officer who was all set to start his career is last straw on camel’s back. Indian Police heavily relies on Mahindra Jeeps. Over the years, the Bolero has improved but terribly falls short of what an… pic.twitter.com/Y9Yo5OqXuL
— Bhaskar Rao (@Nimmabhaskar22) December 2, 2024
ಅಲ್ಲದೇ, ಮಹಿಂದ್ರಾ ಜೀಪ್ ಅನ್ನು ಸಾಮಾನ್ಯವಾಗಿ ಜ್ಯೂನಿಯರ್ ಆಫೀಸರ್‌ಗಳ ಪ್ರಯಾಣಕ್ಕೆಂದು ಬಳಸಲಾಗುತ್ತದೆ. ಇದನ್ನೇ ವಿವಿಐಪಿ ವಾಹನಗಳ ಪೈಲಟ್ ಹಾಗೂ ಎಸ್ಕಾರ್ಟ್‌ಗಳನ್ನಾಗಿಯೂ ಬಳಸಲಾಗುತ್ತದೆ. ಭದ್ರತೆಗೆಂದು ನಿಯೋಜನೆ ಮಾಡುವ ಸಂದರ್ಭದಲ್ಲಿ ಈ ವಾಹನಗಳು ಗಂಟೆಗೆ 120 ಕಿ ವೇಗದಲ್ಲಿ ಸಂಚರಿಸುತ್ತಿರುತ್ತವೆ (ಚಲಾಯಿಸಲಾಗುತ್ತದೆ) ಎಂದಿದ್ದಾರೆ.
ಈ ಅಪಘಾತದ ಬಗ್ಗೆ ತನಿಖೆ ಮಾಡುವ ಅವಶ್ಯಕತೆ ಇದೆ. ಹಿರಿಯ ಅಧಿಕಾರಿಗಳು ಈ ವಾಹನದಲ್ಲಿ ಪ್ರಯಾಣಿಸದೇ ಇರುವುದು, ಕಿರಿಯ ಅಧಿಕಾರಿಗಳ ಬಳಕೆಗಾಗಿ ಅವುಗಳನ್ನು ಖರೀದಿಸುವಾಗ ಸುರಕ್ಷತೆ ಆದ್ಯತೆ ಕೊಡದೆ ಇರುವ ಸಾಧ್ಯತೆಯೂ ಇದೆ. ಅಲ್ಲದೇ ಈ ವಾಹನಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ನ್ಯೂನ್ಯತೆಗಳು ಇವೆ. ಸೇಫ್ಟಿ ಸ್ಟಾಂಡರ್ಡ್ ಕಳಪೆಯಾಗಿದ್ದು, ಸೀಟ್ ಬೆಲ್ಟ್ ವಾರ್ನಿಂಗ್ ಇದರಲ್ಲಿ ಇಲ್ಲ. ಅಪಘಾತದಲ್ಲಿ ಜೀವ ರಕ್ಷಿಸುವ ಏರ್ ಬ್ಯಾಗ್ ಇಲ್ಲ. ಲೆಗ್ ರೂಮ್ ಸಹ ಕಳಪೆಯಾಗಿದೆ. ಇನ್ನು ಡಿಕ್ಕಿ ತಡೆಗೆ ವಾರ್ನಿಂಗ್ ವ್ಯವಸ್ಥೆ ಎನ್ನುವುದು ಇಲ್ಲ. ಪೊಲೀಸ್ ಜೀಪ್‌ಗಳಲ್ಲಿನ ಕಬ್ಬಿಣದಿಂದ ಗಾಯಗಳಾಗುವುದು ಇದೆ. ಇನ್ನು ಏರ್ ಕಂಡೀಷನ್ ಹಾಗೂ ಸೀಟ್ ಅಡ್ಜೆಸ್ಟಮೆಂಟ್ ಇದರಲ್ಲಿ ಸಮರ್ಪಕವಾಗಿ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಆನಂದ ಮಹೀಂದ್ರ ಅವರು ಗಮನಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications