ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕ್ ಮೇಲೆ ಶಾಕ್; ಶೇ.10ರಷ್ಟು ಪ್ರವಾಸಿ ಟ್ಯಾಕ್ಸಿ ಪ್ರಯಾಣ ದರ ಏರಿಕೆಗೆ ಚಿಂತನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 5: ರಾಜ್ಯದಲ್ಲಿ ವಿದ್ಯುತ್ ದರ, ಹೋಟೆಲ್ ಊಟ- ತಿಂಡಿ ಬೆಲೆಗಳ ಹೆಚ್ಚಳದ ಬೆನ್ನಲ್ಲೇ ಇದೀಗ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ಖಾಸಗಿ ಬಸ್ ಟಿಕೆಟ್ ದರ ಹಾಗೂ ಪ್ರವಾಸಿ ಟ್ಯಾಕ್ಸಿ ವಾಹನಗಳ ಬಾಡಿಗೆ ಹೆಚ್ಚಳ ಮಾಡಲು ಚಿಂತನೆ ನಡೆದಿದೆ.

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶೇ.10ರಷ್ಟು ಖಾಸಗಿ ಬಸ್ ಪ್ರಯಾಣ ದರ ಏರಿಕೆ ಮಾಡಲು ಖಾಸಗಿ ವಾಹನ ಸಂಘಟನೆಗಳು ಚಿಂತನೆ ನಡೆಸಿವೆ. ಈ ಬಗ್ಗೆ ಸಭೆ ನಡೆಸಿ ಶೇ.10 ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲು ನಿರ್ಧರಿಸಿವೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು; ಹೋಟೆಲ್‌ಗಳಲ್ಲಿ ಶೇ 10ರಷ್ಟು ದರ ಏರಿಕೆ ಘೋಷಣೆಬೆಂಗಳೂರು; ಹೋಟೆಲ್‌ಗಳಲ್ಲಿ ಶೇ 10ರಷ್ಟು ದರ ಏರಿಕೆ ಘೋಷಣೆ

ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಖಾಸಗಿ ಪ್ರವಾಸಿ ಟ್ಯಾಕ್ಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, "ದೇಶದಲ್ಲಿ ಕಳೆದ 10 ದಿನಗಳಲ್ಲಿ ಡಿಸೇಲ್ ಬೆಲೆ 10 ರೂ. ಹೆಚ್ಚಳವಾಗಿದೆ. ಜೊತೆಗೆ ಬೇರೆ ಬೇರೆ ವಲಯದಲ್ಲೂ ಬೆಲೆ ಏರಿಕೆಯಾಗುತ್ತಿದೆ. ಟೋಲ್ ದರವೂ ಸಹ ಹೆಚ್ಚಾಗಿದೆ. ಹೀಗಾಗಿ ಪ್ರವಾಸಿ ಟ್ಯಾಕ್ಸಿ ವಾಹನಗಳ ಬಾಡಿಗೆ ಪ್ರಯಾಣ ದರ ಹೆಚ್ಚಳ ಮಾಡಲಾಗುವುದು," ಎಂದು ಹೇಳಿದ್ದಾರೆ.

Tourist Taxi Travel Fare Likely to Increase by 10% in Karnataka Soon

"ಕೊರೊನಾ ಹಾಗೂ ಲಾಕ್‌ಡೌನ್ ವೇಳೆಯಲ್ಲಿ ಪ್ರವಾಸಿ ಟ್ಯಾಕ್ಸಿ ವಾಹನ ಮಾಲೀಕರಿಗೆ ಆರ್ಥಿಕ ಹೊಡೆತ ಬಿದ್ದಿದ್ದು, ಅದರ ನಡುವೆ ಇಂಧನ ದರ ಮತ್ತು ಅಗತ್ಯ ವಸ್ತುಗಳ ದರ ಏರಿಕೆಯಿಂದ ಮಾಲೀಕರು ಮತ್ತು ಚಾಲಕರ ಜೀವನ ದುಸ್ತರವಾಗಿದೆ. ಅದ್ದರಿಂದ ಶೀಘ್ರದಲ್ಲೇ ಸಂಘದ ಸದಸ್ಯರೊಂದಿಗೆ ಮಾತನಾಡಿ, ಪ್ರಯಾಣ ದರ ಪರಿಷ್ಕರಣೆ ಮಾಡಲಾಗುವುದು," ಎಂದು 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

ವಿದ್ಯುತ್ ದರ ಹೆಚ್ಚಳ
ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆಯಾಗಿದ್ದು, ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಹೊಸ ದರಗಳು ಜಾರಿಗೆ ಬರಲಿವೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹಂಗಾಮಿ ಅಧ್ಯಕ್ಷ ಮಂಜುನಾಥ್ ದರ ಏರಿಕೆಯ ವಿವರಗಳನ್ನು ಪ್ರಕಟಿಸಿದರು. ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೂ ಅನ್ವಯವಾಗುವಂತೆ ಸರಾಸರಿ 35 ಪೈಸೆ ಹೆಚ್ಚಳವಾಗಿದೆ.

Tourist Taxi Travel Fare Likely to Increase by 10% in Karnataka Soon

ಎಲ್ಲಾ ಎಸ್ಕಾಂಗಳು ಪ್ರತಿ ಯೂನಿಟ್‌ಗೆ ಸರಾಸರಿ 1.85 ರೂ. ಹೆಚ್ಚಳ ಮಾಡಲು ಮನವಿ ಮಾಡಿದ್ದವು. ಕೆಇಆರ್‌ಸಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಜನರ ಅಭಿಪ್ರಾಯ, ಎಸ್ಕಾಂಗಳ ಪ್ರಸ್ತಾವನೆ, ಹಿಂದಿನ ವರ್ಷದ ನಷ್ಟ ಮುಂತಾದವುಗಳನ್ನು ಪರಿಗಣಿಸಿ ಪ್ರತಿ ಯೂನಿಟ್‌ಗೆ 35 ಪೈಸೆ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ.

ಪ್ರತಿ ಯೂನಿಟ್‌ಗೆ 5 ಪೈಸೆಗಳ ಇಂಧನ ಶುಲ್ಕ ಹಾಗೂ ಪ್ರತಿ ಹೆಚ್.ಪಿ/ ಕಿ. ವಾ/ ಕೆ. ವಿ. ಎ.ಗೆ 10 ರಿಂದ 30 ರೂ. ತನಕ ನಿಗದಿತ ಶುಲ್ಕಗಳನ್ನು ಹೆಚ್ಚಳ ಮಾಡಲು ಅನುಮೋದಿಸಲಾಗಿದೆ. ಇದರಿಂದಾಗಿ ಶೇ 4.33ರಷ್ಟು ದರ ಏಕೆಯಾಗಿದೆ ಎಂದು ಕೆಇಆರ್‌ಸಿ ಹೇಳಿದೆ.

ಹೋಟೆಲ್ ಊಟ, ತಿಂಡಿ ದರ ಹೆಚ್ಚಳ
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ಬೆಂಗಳೂರು ನಗರದ ಹೋಟೆಲ್‌ಗಳಲ್ಲಿ ಊಟ, ತಿಂಡಿ, ಕಾಫಿ, ಟೀ ದರಗಳು ಏರಿಕೆಯಾಗಲಿವೆ. ಯುಗಾದಿ ಹಬ್ಬದ ಮುಗಿದ ಒಂದು ವಾರದಲ್ಲಿ ದರಗಳು ಏರಿಕೆಯಾಗಲಿವೆ.

ಸೋಮವಾರ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಮಹತ್ವದ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಪಿ. ಸಿ. ರಾವ್, "ಇನ್ನೊಂದು ವಾರದಲ್ಲಿ ಹೋಟೆಲ್‌ನಲ್ಲಿ ಬೆಲೆ ಏರಿಕೆ ಮಾಡಲಾಗುವುದು," ಎಂದರು.

"ಆಯಾ ಹೋಟೆಲ್‌ನವರು ದರ ಏರಿಕೆ ಮಾಡಲಿದ್ದಾರೆ. ಕನಿಷ್ಟ ಶೇ.10ರಷ್ಟು ದರ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಯಾವ-ಯಾವ ತಿನಿಸುಗಳ ದರ ಏರಿಕೆ ಮಾಡಬೇಕು ಎಂಬುದು ಆಯಾ ಹೋಟೆಲ್‌ನವರಿಗೆ ಬಿಟ್ಟದ್ದು," ಎಂದು ಸ್ಪಷ್ಟಪಡಿಸಿದರು.

English summary
Private Bus Operators planning to hike bus ticket prices and taxi fares by 10 percent in Karnataka soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X