ಅಕ್ಕಿ ಬಳಿಕ ಕರ್ನಾಟಕದಲ್ಲಿ ತೊಗರಿಬೇಳೆ ಬೆಲೆ ಭಾರೀ ಏರಿಕೆ: ಕೆಜಿಗೆ ₹200 ದಾಟುವ ಸಾಧ್ಯತೆ
ಬೆಂಗಳೂರು, ಆಗಸ್ಟ್ 23: ಚಿಲ್ಲರೆ ಮಾರುಕಟ್ಟೆಯಲ್ಲಿ ಈಗಾಗಲೇ ಒಂದು ಕಿಲೋ ತೊಗರಿ ಬೇಳೆಗೆ ₹ 170 ರಿಂದ ₹ 180 ರೂಪಾಯಿ ಆಗಿದೆ. ಇದು ಶೀಘ್ರದಲ್ಲೇ ₹ 200 ರ ಗಡಿ ದಾಟುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ತೊಗರಿ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪೂರೈಕೆಯು ಭಾರೀ ಕುಸಿತ ಕಂಡಿದೆ. ಇದು ಕಳೆದ ಎರಡು ತಿಂಗಳಿನಿಂದ ಬೆಲೆಯನ್ನು ಹೆಚ್ಚಿಸಿದೆ.
ಈ ಕುರಿತು ' ದಿ ಹಿಂದೂ ' ಪತ್ರಿಕೆಗೆ ಮಾತನಾಡಿರುವ ಆಹಾರ ಧಾನ್ಯಗಳ ವ್ಯಾಪಾರಿ ರಮೇಶ್ ಚಂದ್ರ ಲಾಹೋಟಿ, 'ಈಗ ನಮಗೆ ಸಿಗತ್ತಿರುವ ತೊಗರಿ ಆಫ್ರಿಕಾದಿಂದ ಆಮದು ಮಾಡಿಕೊಂಡಿರುವುದು. ಆ ದೇಶಗಳು ರಫ್ತಿನ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿವೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ' ಎಂದು ತಿಳಿಸಿದ್ದಾರೆ.

ಈ ಹಿಂದೆ ತೊಗರಿಬೇಳೆಯನ್ನು ಪ್ರತಿ ಟನ್‌ಗೆ 350 ಡಾಲರ್‌ಗೆ ಆಮದು ಮಾಡಿಕೊಳ್ಳುಲಾಗುತ್ತಿತ್ತು. ಈಗ ಟನ್‌ಗೆ 800 ಡಾಲರ್‌ನಿಂದ 900 ಡಾಲರ್‌ಗೆ ಏರಿಕೆಯಾಗಿದೆ. ಆದಾಗ್ಯೂ, ಆಮದು ಮಾಡಿದ ತೊಗರಿಬೇಳೆ ವೆಚ್ಚವು ಸ್ಥಳೀಯ ತಳಿಗಿಂತ ಇನ್ನೂ ಕಡಿಮೆಯಾಗಿದೆ' ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಒಂದು ಕಿಲೋ ಆಮದು ಮಾಡಿಕೊಂಡ ತೊಗರಿ ಸಗಟು ಮಾರುಕಟ್ಟೆಯಲ್ಲಿ ₹ 140 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಸ್ಥಳೀಯ ತಳಿಗಳು ಕಿಲೋಗೆ ₹ 145- ₹ 165 ರ ವ್ಯಾಪ್ತಿಯಲ್ಲಿ ವ್ಯಾಪಾರವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಡಿಸೆಂಬರ್-ಜನವರಿಯಲ್ಲಿ ಮುಂದಿನ ಬೆಳೆ ಕಟಾವಿನ ನಂತರ ಮಾತ್ರ ಪರಿಸ್ಥಿತಿಯು ನಿಯಂತ್ರಣವಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಕರಿಬೇವಿನ ಬೆಲೆ ಕನಿಷ್ಠ ಶೇ 20 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಹಿಂದಿನ ಹಂಗಾಮಿಗೆ ಹೋಲಿಸಿದರೆ, ಕಲಬುರಗಿ-ಮರಾಠವಾಡ ( ಮಹಾರಾಷ್ಟ್ರ ) ಪ್ರದೇಶದಲ್ಲಿ ಬಿತ್ತನೆ ಹೆಚ್ಚಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ನಮಗೆ ಮಳೆಯ ಅಗತ್ಯವಿದೆ. ಒಂದು ವೇಳೆ, ಮಳೆಯಾದರೆ ಇದು ಉತ್ತಮ ಬೆಳೆಗೆ ಕಾರಣವಾಗುತ್ತದೆ. ಆದರೆ, ಮಳೆ ಆಗದಿದ್ದರೆ ಈ ಬೆಳೆ ಕೂಡ ಹಾನಿಗೊಳಗಾಗುತ್ತದೆ. ಮಾರುಕಟ್ಟೆಯಲ್ಲಿ ಅನಿಶ್ಚಿತತೆಯು 2024 ರ ವರೆಗೆ ಮುಂದುವರಿಯುತ್ತದೆ ಎಂದು ಲಾಹೋಟಿ ಹೇಳಿದ್ದಾರೆ.












Click it and Unblock the Notifications