• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಲ್‌ಮಾರ್ಕ್ ಕಡ್ಡಾಯ ವಿರೋಧಿಸಿ ಬೆಂಗಳೂರು ಚಿನ್ನಾಭರಣ ವ್ಯಾಪಾರಿಗಳ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 23: ಹಾಲ್‌ಮಾರ್ಕ್ ಕಡ್ಡಾಯ ನಿಯಮ ವಿರೋಧಿಸಿ ಬೆಂಗಳೂರು ಚಿನ್ನಾಭರಣ ವ್ಯಾಪಾರಿಗಳು ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

ಹಾಲ್‌ಮಾರ್ಕ್ ಕಡ್ಡಾಯ ಎಂಬ ನಿಯಮವು ಜೂನ್ 16ರಿಂದ ಹಂತ ಹಂತವಾಗಿ ಜಾರಿಗೆ ಬಂದಿದೆ, ಈ ಮೊದಲು ಹಾಲ್‌ಮಾರ್ಕ್ ಹಾಕುವುದು ಐಚ್ಛಿಕವಾಗಿತ್ತು, ಹಾಲ್‌ಮಾರ್ಕ್ ಹಾಕುವುದು ತೀರಾ ಹೆಚ್ಚು ಸಮಯ ಹಿಡಿಯುತ್ತದೆ, ಈ ವರ್ಷ ತಯಾರಾಗುವ ಚಿನ್ನಾಭರಣಗಳಿಗೆ ಈಗಿರುವ ಸಾಂರ್ಥ್ಯದ ಪ್ರಕಾರ ಹಾಲ್‌ಮಾರ್ಕ್ ಹಾಕಲು ಇನ್ನೂ ಮೂರರಿಂದ ನಾಲ್ಕು ವರ್ಷಗಳು ಬೇಕಾಗುತ್ತದೆ ಎಂದು ಜಿಜೆಸಿ ನಿರ್ದೇಶಕ ದಿನೇಶ್ ಜೈನ್ ಹೇಳಿದ್ದಾರೆ.

ಹಾಲ್‌ಮಾರ್ಕ್ ಹಾಕುವ ವ್ಯವಸ್ಥೆಯು ಲೋಪರಹಿತವಲ್ಲ, ಒಂದೇ ಚಿನ್ನಾಭರಣಕ್ಕೆ ಎರಡೆರೆಡು ಹಾಲ್‌ಮಾರ್ಕ್ ಹಾಕಿರುವ ಒಂದೇ ಹಾಲ್‌ಮಾರ್ಕ್ ಅನ್ನು ಬೇರೆ ಬೇರೆ ಆಭರಣಗಳಿಗೆ ಹಾಕಿರುವ ನಿದರ್ಶನಗಳು ಕೂಡ ಇವೆ ಎಂದು ಹೇಳಲಾಗಿದೆ.

ದೇಶದ ನಾಲ್ಕೂ ವಲಯಗಳ ಮತ್ತು ಆಭರಣ ಉದ್ಯಮದ 350ಕ್ಕೂ ಹೆಚ್ಚಿನ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ಚಿನ್ನದ ಆಭರಣಗಳ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಜೂನ್ 16 ರಿಂದ ಹಾಲ್‌ಮಾರ್ಕ್‌ ಕಡ್ಡಾಯವಾಗಿದ್ದರೂ ಅವರಿಗೆ ಸಾಕಷ್ಟು ಸಮಯ ನೀಡುವ ಸಲುವಾಗಿ ಆಗಸ್ಟ್ ಅಂತ್ಯದವರೆಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಇನ್ನು, ಹಳೆಯ ಆಭರಣಗಳನ್ನು ಸಹ ಆಭರಣಕಾರರಿಂದ ಸಾಧ್ಯವಾದರೆ ಹಾಲ್‌ಮಾರ್ಕ್‌ ಮಾಡಬಹುದು. ಅಥವಾ ಕರಗಿಸಿ ಹೊಸ ಆಭರಣಗಳನ್ನು ಮಾಡಿದ ನಂತರ ಹಾಲ್‌ಮಾರ್ಕ್‌ ಗುರುತು ಮಾಡಬಹುದು ಎಂದು ಸಹ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿದೆ.

ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಹೊರಹೊಮ್ಮಬಹುದಾದ ಸಮಸ್ಯೆಗಳನ್ನು ಪರಿಶೀಲಿಸಲು ಎಲ್ಲಾ ಪಾಲುದಾರರು, ಕಂದಾಯ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಲೋಹ ಪರೀಕ್ಷೆ ಕೇಂದ್ರಗಳನ್ನು ಹೊಂದಿರುವ ದೇಶದ 256 ಜಿಲ್ಲೆಗಳಲ್ಲಿ ಆರಂಭದಲ್ಲಿ ಹಾಲ್‌ಮಾರ್ಕಿಂಗ್ ಕಡ್ಡಾಯ ಪ್ರಾರಂಭವಾಗಲಿದೆ. ಆದರೆ, 40 ಲಕ್ಷ ರೂ. ಗೂ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಆಭರಣ ವ್ಯಾಪಾರಿಗಳಿಗೆ ಕಡ್ಡಾಯ ಹಾಲ್ ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗುವುದು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ, ಭಾರತ ಸರ್ಕಾರದ ವ್ಯಾಪಾರ ನೀತಿಯ ಪ್ರಕಾರ ಆಭರಣಗಳ ರಫ್ತು ಮತ್ತು ಮರು ಆಮದು - ಅಂತಾರಾಷ್ಟ್ರೀಯ ಪ್ರದರ್ಶನಗಳಿಗೆ ಆಭರಣ, ಸರ್ಕಾರ ಅನುಮೋದಿತ ಬಿ 2 ಬಿ ದೇಶೀಯ ಪ್ರದರ್ಶನಗಳಿಗೆ ಆಭರಣಗಳನ್ನು ಸಹ ಕಡ್ಡಾಯ ಹಾಲ್‌ಮಾರ್ಕ್‌ ಗುರುತಿನಿಂದ ವಿನಾಯಿತಿ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇನ್ನು, 20, 23 ಮತ್ತು 24 ಕ್ಯಾರೆಟ್‌ ಚಿನ್ನವನ್ನು ಹೆಚ್ಚುವರಿಯಾಗಿ ಹಾಲ್ ಮಾರ್ಕಿಂಗ್‌ಗೆ ಅನುಮತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಕೈಗಡಿಯಾರಗಳು, ಫೌಂಟೇನ್‌ ಪೆನ್ನುಗಳು ಮತ್ತು ವಿಶೇಷ ರೀತಿಯ ಆಭರಣಗಳಾದ ಕುಂದನ್, ಪೋಲ್ಕಿ ಮತ್ತು ಜಾದೌ ಅನ್ನು ಹಾಲ್ ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಅತ್ಯಲ್ಪ ಅವಧಿಯಲ್ಲಿಯೇ 1 ಕೋಟಿಗೂ ಹೆಚ್ಚು ಆಭರಣಗಳಿಗೆ ಹಾಲ್‌ಮಾರ್ಕ್ ಹಾಕುವ ಮೂಲಕ ಹಾಲ್‌ಮಾರ್ಕಿಂಗ್ ಯೋಜನೆಯು ಭಾರೀ ಯಶಸ್ಸು ಗಳಿಸಿದೆ ಎಂದು ಬಿಐಎಸ್ ಮಹಾನಿರ್ದೇಶಕರು ಹೇಳಿದ್ದಾರೆ. ಭಾರತದಲ್ಲಿ ಹಾಲ್‌ಮಾರ್ಕಿಂಗ್‌ ಪ್ರಗತಿಯ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದೇ ಸಮಯದಲ್ಲಿ 90,000 ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

   ಕಾಂಗ್ರೆಸ್ ಯೋಗ್ಯತೆ ಬಗ್ಗೆ ಮಾತನಾಡಿದ ಬಿಜೆಪಿ ಕಟೀಲ್! | Oneindia Kannada

   ಆಭರಣ ವ್ಯಾಪಾರಿಗಳ ಬೆಂಬಲ ಮತ್ತು ಸಹಕಾರದಿಂದಾಗಿ ಈ ಯೋಜನೆಯು ಭರ್ಜರಿ ಯಶಸ್ಸನ್ನು ಸಾಧಿಸಿದೆ ಎಂದು ಅವರು ಹೇಳಿದರು. ನೋಂದಾಯಿತ ಆಭರಣಕಾರರ ಸಂಖ್ಯೆ 91,603 ಕ್ಕೆ ಹೆಚ್ಚಾಗಿದೆ ಮತ್ತು ಹಾಲ್‌ಮಾರ್ಕಿಂಗ್‌ಗಾಗಿ 1 ಜುಲೈ, 2021 ರಿಂದ ಆಗಸ್ಟ್ 20 ರವರೆಗೆ ಒಂದು ಕೋಟಿ ಹದಿನೇಳು ಲಕ್ಷ ಆಭರಣಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ ಒಂದು ಕೋಟಿ ಎರಡು ಲಕ್ಷ ಆಭರಣಗಳಿಗೆ ಹಾಲ್‌ಮಾರ್ಕ್ ಮಾಡಲಾಗಿದೆ.

   ವ್ಯಾಪಾರಿಗಳು ಹಾಲ್‌ಮಾರ್ಕಿಂಗ್‌ಗಾಗಿ ತಮ್ಮ ಆಭರಣಗಳನ್ನು ಕಳುಹಿಸಿದ ಸಂಖ್ಯೆಯು ಜುಲೈ 15 ರಿಂದ ಜುಲೈ 15 ರ ವರೆಗೆ 5145 ಇತ್ತು. ಆಗಸ್ಟ್ 1 ರಿಂದ ಆಗಸ್ಟ್ 15, 2021 ರವರೆಗೆ 14,349 ಕ್ಕೆ ಹೆಚ್ಚಾಗಿದೆ; ಮತ್ತು 861 ಎಎಚ್‌ಸಿಗಳು ಹೆಚ್ ಯು ಐ ಡಿ ಆಧಾರಿತ ವ್ಯವಸ್ಥೆಯ ಪ್ರಕಾರ ಹಾಲ್‌ಮಾರ್ಕಿಂಗ್ ಅನ್ನು ಪ್ರಾರಂಭಿಸಿವೆ ಎಂದರು.

   English summary
   Bengaluru gold jewellers go on strike against new hallmarking rules.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X