ಕೋವಿಡ್ ಪರೀಕ್ಷೆಗೆ ಹೋಗುವ ಜನರಿಗೆ ಸಲಹೆಗಳು

ಬೆಂಗಳೂರು, ಜುಲೈ 16 : ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಗುರುವಾರ ಒಂದೇ ದಿನ 4169 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿದೆ.

Recommended Video

      ಕೋಟಿ ಬೆಲೆಯ ಕಾರುಗಳನ್ನು ಬಿಟ್ಟು ಟ್ರ್ಯಾಕ್ಟರ್ ಏರಿದ ಡಿ ಬಾಸ್.

      ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ -19 ಪರೀಕ್ಷೆಗೆ ಹೋಗುವ ಜನರಿಗೆ ಹಲವು ಸಲಹೆಗಳನ್ನು ನೀಡಿದೆ. ಯಾವುದೇ ಕಾರಣಕ್ಕೂ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ.

      ಕೋವಿಡ್ - 19 ಪರೀಕ್ಷೆ ಮಾಡಿಸಿಕೊಂಡ ಬಳಿಕ ಜನರು ಏನು ಮಾಡಬೇಕು?, ಸೋಂಕು ಇಲ್ಲವೆಂದು ವರದಿ ಬಂದರೆ ಏನು ಮಾಡಬೇಕು? ಎಂದು ಇಲಾಖೆ ಜನರಿಗೆ ಮಾಹಿತಿ ನೀಡಿದೆ.

      Tpis For The People Who Go For Coronavirus Test

      ಸೋಂಕು ಇಲ್ಲದ ವ್ಯಕ್ತಿಗಳು

      * ಜ್ವರ, ಕೆಮ್ಮುಅಥವ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂದಲ್ಲಿ ಉಚಿತ ಸಹಾಯವಾಣಿ ಆಪ್ತಮಿತ್ರ 14410 ನಂಬರ್‌ಗೆ ಕರೆ ಮಾಡುವುದು.

      * ಅತ್ಯಾವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಹೊರ ಹೋಗುವುದನ್ನು ನಿಲ್ಲಿಸಿ

      * ಹೊರ ಹೋಗುವಾಗ ಮಾಸ್ಕ್‌ ಧರಿಸಿರಿ

      * ಸುರಕ್ಷಿತವಾಗಿರಿ, ಆರೋಗ್ಯವಾಗಿರಿ

      ಸೋಂಕಿತ ವ್ಯಕ್ತಿಗಳು

      * ಉಸಿರಾಟದ ತೊಂದರೆ ಲಕ್ಷಣಗಳು ಇದ್ದಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಉಚಿತ ಅಂಬ್ಯುಲೆನ್ಸ್ ಸೇವೆಗಾಗಿ 108ಕ್ಕೆ ಕರೆ ಮಾಡಿ.

      * ಯಾವುದೇ ಲಕ್ಷಣಗಳು ಇಲ್ಲವಾದಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಿ. ತಮ್ಮ ವೈದ್ಯಕೀಯ ಸ್ಥಿತಿಯನ್ನು ಪರಿಶೀಲಿಸಲು ಆದ್ಯತೆಯ ಮೇರೆಗೆ ಸರ್ಕಾರಿ ಅಧಿಕಾರಿಗಳು ಶೀಘ್ರದಲ್ಲೇ ತಮ್ಮನ್ನು ಸಂಪರ್ಕಿಸಲಿದ್ದಾರೆ.

      * ಭಯ ಪಡಬೇಡಿ, ಸಮಾಧಾನದಿಂದ ಇರಿ

      * ಶೇ 95ರಷ್ಟು ಕ್ಕಿಂತಲೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.

      * ಅಗತ್ಯವಿದ್ದಾಗ ಸಹಾಯವನ್ನು ಪಡೆಯಿರಿ. ನೀವು ಒತ್ತಡದಲ್ಲಿದ್ದರೆ, ಆತಂಕಕ್ಕೆ ಒಳಗಾಗಿದ್ದರೆ ನಿದ್ರೆ ಹಾಗೂ ಹೊಟ್ಟೆಯಲ್ಲಿ ತೊಂದರೆಯಿದ್ದರೆ 104ಕ್ಕೆ ಕರೆ ಮಾಡಿ 4 ಅನ್ನು ಒತ್ತಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+