ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ: ಸಿಎಂ ಹುದ್ದೆಗೆ ಸಿದ್ದರಾಮಯ್ಯ ಬೆಸ್ಟ್ ಎಂದ ಜನ

By Sachhidananda Acharya
|
Google Oneindia Kannada News

Recommended Video

Karnataka Elections 2018 : ಟೈಮ್ಸ್ ನೌ ವಿ ಎಂ ಆರ್ ಸಮೀಕ್ಷೆ | ಸಿದ್ದರಾಮಯ್ಯ ಬೆಸ್ಟ್ ಸಿ ಎಂ ಎಂದ ಜನ

ಬೆಂಗಳೂರು, ಏಪ್ರಿಲ್ 23: ಸೋಮವಾರ ಹೊರಬಿದ್ದ ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಯಾರು ಸೂಕ್ತ ಎಂಬ ಪ್ರಶ್ನೆಯನ್ನು ಜನರ ಮುಂದಿಡಲಾಗಿತ್ತು. ಇದರಲ್ಲಿ ಹೆಚ್ಚಿನ ಜನರು ಮುಖ್ಯಮಂತ್ರಿ ಹುದ್ದೆಗೆ ಹಾಲಿ ಸಿಎಂ ಸಿದ್ದರಾಮಯ್ಯನವರೇ ಉತ್ತಮ ಎಂಬ ಅಭಿಪ್ರಾಯ ನೀಡಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಎಂದು ಶೇಕಡಾ 46.15 ಜನರು ಹೇಳಿದ್ದಾರೆ. ಅಂದರೆ ಸುಮಾರು ಅರ್ಧದಷ್ಟು ಜನರಿಗೆ ಸಿದ್ದರಾಮಯ್ಯ ಮೇಲೆ ಒಲವಿದೆ.

ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಎಂದು ಶೇಕಡಾ 31.76 ಜನರು ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರನ್ನು ಶೇಕಡಾ 17.63 ಜನರು ಬೆಂಬಲಿಸಿದ್ದಾರೆ.

Times Now-VMR survey: Siddaramaiah is best suited to become chief minister

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ರನ್ನು ಶೇಕಡಾ 0.95 ಜನರು ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಶೇಕಡಾ 0.7 ಪ್ರಜೆಗಳು ಹಾಗೂ ಬಿಜೆಪಿಯ ಈಶ್ವರಪ್ಪನವರನ್ನು ಶೇಕಡಾ 0.44 ಜನರು ಮುಖ್ಯಮಂತ್ರಿಯಾಗಲು ಸೂಕ್ತ ಎಂದಿದ್ದಾರೆ. ಇನ್ನುಳಿದ ಶೇಕಡಾ 2.37 ಜನರು ಇತರರಿಗೆ ಮತ ಹಾಕಿದ್ದಾರೆ.

ಇದಕ್ಕೂ ಮೊಲದು ಹೊರ ಬಿದ್ದ ಎಬಿಪಿ-ಸಿಎಸ್ ಡಿಎಸ್ ಸಮೀಕ್ಷೆಯನ್ನೂ ಸಿದ್ದರಾಮಯ್ಯ ಅವರಿಗೆ ಶೇಕಡಾ 30 ಮತ ದೊರೆತಿದ್ದರೆ, ಯಡಿಯೂರಪ್ಪ ಅವರಿಗೆ ಶೇಕಡಾ 25 ಮತ ದೊರತಿದೆ. ಕುಮಾರಸ್ವಾಮಿ ಅವರಿಗೆ ಶೇಕಡಾ 20 ಮತ ಬಂದಿದೆ. ಆ ಮೂಲಕ ಇಲ್ಲೂ ಹೆಚ್ಚಿನ ಜನರ ಮೆಚ್ಚಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೂಡಿಬಂದಿದ್ದಾರೆ.

ಎಬಿಪಿ ನ್ಯೂಸ್ ಸಮೀಕ್ಷೆ: ಸಿದ್ದರಾಮಯ್ಯ ಅವರೇ ಮೆಚ್ಚಿನ ಮುಖ್ಯಮಂತ್ರಿಎಬಿಪಿ ನ್ಯೂಸ್ ಸಮೀಕ್ಷೆ: ಸಿದ್ದರಾಮಯ್ಯ ಅವರೇ ಮೆಚ್ಚಿನ ಮುಖ್ಯಮಂತ್ರಿ

ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಇಂಡಿಯಾ ಟುಡೆ ಮತ್ತು ಕಾರ್ವಿ ಜಂಟಿ ಸಮೀಕ್ಷೆಯಲ್ಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ ಎಂದು ಹೆಚ್ಚಿನ ಜನ ಅಭಿಪ್ರಾಯಪಟ್ಟಿದ್ದರು.

English summary
Karnataka assembly elections 2018: The predictions of the Times Now-VMR opinion poll for the upcoming state assembly elections shows that, Siddaramaiah is the best suited to become chief minister of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X