Get Updates
Get notified of breaking news, exclusive insights, and must-see stories!

ಕರ್ನಾಟಕ ಕಂಡ 25 ಸಿಎಂಗಳಲ್ಲಿ ಇದುವರೆಗೆ 5 ವರ್ಷ ಪೂರ್ಣಗೊಳಿಸಿದ್ದು ಈ ಮೂವರು ಮಾತ್ರ- ಎಲ್ಲರೂ ಕಾಂಗ್ರೆಸ್ಸಿಗರೇ

ಬೆಂಗಳೂರು, ಜನವರಿ08: ಕರ್ನಾಟಕದಲ್ಲಿ ಇದುವರೆಗೂ 25 ಜನ ಮುಖ್ಯಮಂತ್ರಿಗಳು ಅಧಿಕಾರವನ್ನ ನಡೆಸಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ 25 ಮುಖ್ಯಮಂತ್ರಿಗಳು ಬಂದು ಹೋಗಿದ್ದು, ಈ 25 ಮುಖ್ಯಮಂತ್ರಿಗಳಲ್ಲಿ ಐದು ವರ್ಷ ಪೂರ್ಣಗೊಳಿಸಿದ್ದು ಕೆಲವರು ಮಾತ್ರ. 25 ಮುಖ್ಯಮಂತ್ರಿಗಳು ಸಂಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಮರ್ಥರಾಗಿದ್ದು ಕೇವಲ ಮೂವರಿಗೆ ಮಾತ್ರ. ಅದರಲ್ಲೂ ಈ ಮೂವರು ಮುಖ್ಯಮಂತ್ರಿಗಳು ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ ನಾಯಕರಾಗಿದ್ದಾರೆ.

ಹೌದು, ಕರ್ನಾಟಕದ ಇತಿಹಾಸದಲ್ಲಿ 25 ಮುಖ್ಯಮಂತ್ರಿಗಳು ಬಂದು ಹೋಗಿದ್ದು, ಇದುವರೆಗೂ ಮೂವರು ಮಾತ್ರ ಐದು ವರ್ಷ ಅಧಿಕಾರವನ್ನ ಪೂರ್ಣಗೊಳಿಸಿದ್ದಾರೆ. ಬಿಜೆಪಿಯಿಂದ ಹಲವು ನಾಯಕರು ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂ ಜೆಡಿಎಸ್‌ ನಿಂದಲೂ ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವನ್ನ ನಡೆಸಿದ್ದಾರೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ ನಿಂದ ಆಯ್ಕೆಯಾದ ಸಿಎಂಗಳ ಯಾರು ಸಹ ಇದುವರೆಗೂ ಐದು ವರ್ಷ ಅಧಿಕಾರವನ್ನ ನಡೆಸಿಲ್ಲ. ಕಾಂಗ್ರೆಸ್‌ ನಿಂದ ಆಯ್ಕಾಯಾದ ಮೂವರು ಸಿಎಂಗಳು ಅಧಿಕಾರವನ್ನ ಐದು ವರ್ಷ ಪೂರೈಸಿದ್ದಾರೆ.

Three Chief Ministers Of Karnataka Have Completed Their Full Five Year Terms

ಕರ್ನಾಟಕ ಕಂಡ 25 ಮುಖ್ಯಮಂತ್ರಿಗಳಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಲು ಮೂವರು ಮುಖ್ಯಮಂತ್ರಿಗಳಿಗೆ ಮಾತ್ರ ಸಾಧ್ಯವಾಗಿದೆ. ಎಸ್ ನಿಜಲಿಂಗಪ್ಪ (1962-68), ಡಿ ದೇವರಾಜ ಅರಸು (1972-77) ಮತ್ತು ಸಿದ್ದರಾಮಯ್ಯ (2013-2018) ತಮ್ಮ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾರೆ. ಈ ಮೂವರು ನಾಯಕರು ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿ ಮುಖ್ಯಮಂತ್ರಿಗಳಾಗಿದ್ದಾರೆ.

ಕರ್ನಾಟಕ ಇತಿಹಾಸ ಕಂಡ ಸಿಎಂಗಳ ಪಟ್ಟಿ ಇಲ್ಲಿದೆ

1. ಕೆ. ಚೆಂಗಲರಾಯ ರೆಡ್ಡಿ: ಕಾಂಗ್ರೆಸ್, ಅಕ್ಟೋಬರ್ 25, 1947 - ಮಾರ್ಚ್ 30, 1952
2. ಕೆಂಗಲ್ ಹನುಮಂತಯ್ಯ: ಕಾಂಗ್ರೆಸ್, ಮಾರ್ಚ್ 30, 1952 - ಆಗಸ್ಟ್ 19, 1956
3. ಕಡಿದಾಳ್ ಮಂಜಪ್ಪ: ಕಾಂಗ್ರೆಸ್, ಆಗಸ್ಟ್ 19, 1956 - ಅಕ್ಟೋಬರ್ 31, 1956
4. ಎಸ್.ನಿಜಲಿಂಗಪ್ಪ: ಕಾಂಗ್ರೆಸ್, ನವೆಂಬರ್ 1, 1956 - ಮೇ 16, 1958
5. ಬಿ.ಡಿ.ಜತ್ತಿ: ಕಾಂಗ್ರೆಸ್, ಮೇ 16, 1958 - ಮಾರ್ಚ್ 9, 1962
6. ಎಸ್ ಆರ್ ಕಂಠಿ: ಕಾಂಗ್ರೆಸ್, ಮಾರ್ಚ್ 14, 1962 - ಜೂನ್ 20, 1962
7. ಎಸ್.ನಿಜಲಿಂಗಪ್ಪ: ಕಾಂಗ್ರೆಸ್, ಜೂನ್ 21, 1962 - ಮೇ 28, 1968
8. ವೀರೇಂದ್ರ ಪಾಟೀಲ್: ಕಾಂಗ್ರೆಸ್, ಮೇ 29, 1968 - ಮಾರ್ಚ್ 18, 1971
ರಾಷ್ಟ್ರಪತಿ ಆಳ್ವಿಕೆ: 19 ಮಾರ್ಚ್ 1971 - 20 ಮಾರ್ಚ್ 1972
9 . ಡಿ.ದೇವರಾಜ್ ಅರಸ್: ಕಾಂಗ್ರೆಸ್, ಮಾರ್ಚ್ 20, 1972 - ಡಿಸೆಂಬರ್ 31, 1977
ರಾಷ್ಟ್ರಪತಿ ಆಳ್ವಿಕೆ: ಡಿಸೆಂಬರ್ 31, 1977 - ಫೆಬ್ರವರಿ 28, 1978
10. ಡಿ.ದೇವರಾಜ್ ಅರಸ್: ಕಾಂಗ್ರೆಸ್, ಫೆಬ್ರವರಿ 28, 1978 - ಜನವರಿ 7, 1980
11. ಆರ್ ಗುಂಡೂರಾವ್: ಕಾಂಗ್ರೆಸ್, ಜನವರಿ 12, 1980 - ಜನವರಿ 6, 1983
12. ರಾಮಕೃಷ್ಣ ಹೆಗಡೆ: ಜನತಾ ಪಕ್ಷ, ಜನವರಿ 10, 1983 - ಆಗಸ್ಟ್ 10, 1988
13. ಎಸ್ ಆರ್ ಬೊಮ್ಮಾಯಿ: ಜನತಾ ಪಕ್ಷ, ಆಗಸ್ಟ್ 13, 1988 - ಏಪ್ರಿಲ್ 21, 1989
ರಾಷ್ಟ್ರಪತಿ ಆಳ್ವಿಕೆ: ಏಪ್ರಿಲ್ 21, 1989 - ನವೆಂಬರ್ 30, 1989
14. ವೀರೇಂದ್ರ ಪಾಟೀಲ್: ಕಾಂಗ್ರೆಸ್, ನವೆಂಬರ್ 30, 1989 - ಅಕ್ಟೋಬರ್ 10, 1990
ರಾಷ್ಟ್ರಪತಿ ಆಳ್ವಿಕೆ: ಅಕ್ಟೋಬರ್ 10, 1990 - ಅಕ್ಟೋಬರ್ 17, 1990
15. ಎಸ್ ಬಂಗಾರಪ್ಪ: ಕಾಂಗ್ರೆಸ್, ಅಕ್ಟೋಬರ್ 17, 1990 - ನವೆಂಬರ್ 19, 1992
16.ಎಂ.ವೀರಪ್ಪ ಮೊಯ್ಲಿ: ಕಾಂಗ್ರೆಸ್, ನವೆಂಬರ್ 19, 1992 - ಡಿಸೆಂಬರ್ 11, 1994
17: ಎಚ್ ಡಿ ದೇವೇಗೌಡ: ಜನತಾ ದಳ, ಡಿಸೆಂಬರ್ 11, 1994 - ಮೇ 31, 1996
18. ಜೆ ಎಚ್ ಪಟೇಲ್ : ಜನತಾ ದಳ, ಮೇ 31, 1996 - ಅಕ್ಟೋಬರ್ 07, 1999
19. ಎಸ್ ಎಂ ಕೃಷ್ಣ : ಕಾಂಗ್ರೆಸ್, ಅಕ್ಟೋಬರ್ 11, 1999 - ಮೇ 28, 2004
20.ಧರಂ ಸಿಂಗ್: ಕಾಂಗ್ರೆಸ್, ಮೇ 28, 2004 - ಫೆಬ್ರವರಿ 2, 2006
21. ಎಚ್ ಡಿ ಕುಮಾರಸ್ವಾಮಿ: ಜೆಡಿಎಸ್, ಫೆಬ್ರವರಿ 3, 2006 - ಅಕ್ಟೋಬರ್ 8, 2007
ರಾಷ್ಟ್ರಪತಿ ಆಳ್ವಿಕೆ: ಅಕ್ಟೋಬರ್ 8, 2007 - ನವೆಂಬರ್ 12, 2007
22. ಬಿಎಸ್ ಯಡಿಯೂರಪ್ಪ: ಬಿಜೆಪಿ, ನವೆಂಬರ್ 12, 2007 - ನವೆಂಬರ್ 19, 2007,
ರಾಷ್ಟ್ರಪತಿ ಆಳ್ವಿಕೆ: ನವೆಂಬರ್ 20, 2007 - ಮೇ 29, 2008
23. ಬಿಎಸ್ ಯಡಿಯೂರಪ್ಪ: ಬಿಜೆಪಿ, ಮೇ 30, 2008 - ಆಗಸ್ಟ್ 4, 2011
24. ಡಿವಿ ಸದಾನಂದ ಗೌಡ: ಬಿಜೆಪಿ, 5 ಆಗಸ್ಟ್ 2011 - ಜುಲೈ 11, 2012
25. ಜಗದೀಶ ಶಿವಪ್ಪ ಶೆಟ್ಟರ್: ಬಿಜೆಪಿ, ಜುಲೈ 12, 2012 - 8 ಮೇ 2013
26. ಸಿದ್ದರಾಮಯ್ಯ: ಕಾಂಗ್ರೆಸ್, ಮೇ 13, 2013 - ಮೇ 15, 2018
27.ಬಿಎಸ್ ಯಡಿಯೂರಪ್ಪ: ಬಿಜೆಪಿ, ಮೇ 17, 2018 - ಮೇ 23, 2018
28. ಎಚ್ ಡಿ ಕುಮಾರಸ್ವಾಮಿ: ಜೆಡಿಎಸ್, ಮೇ 23, 2018 - 23 ಜುಲೈ 2019
29.ಬಿಎಸ್ ಯಡಿಯೂರಪ್ಪ: ಬಿಜೆಪಿ, 26 ಜುಲೈ 2019 - 26 ಜುಲೈ 2021
30. ಬಸವರಾಜ ಬೊಮ್ಮಾಯಿ: ಬಿಜೆಪಿ, 28 ಜುಲೈ 2021-13 ಮೇ 2023
31: ಸಿದ್ದರಾಮಯ್ಯ ಕಾಂಗ್ರೆಸ್, 20 ಮೇ 2023-NA

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+