Get Updates
Get notified of breaking news, exclusive insights, and must-see stories!

'ಪಾಕಿಸ್ತಾನಕ್ಕೆ ಜೈ ಅಂದ್ರೆ ಅಲ್ಲೇ ಎನ್ಕೌಂಟರ್, ಬಾಯಿಗೆ ಗುಂಡಿಕ್ಕಿ ಢಂ ಅನ್ನಿಸ್ಬೇಕು'

ಮಂಡ್ಯ, ಸೆಪ್ಟೆಂಬರ್ 12: ರಾಜ್ಯದಲ್ಲಿ ಮತ್ತೆ ಗಲಾಟೆ, ಗಲಭೆಗಳು ಹೆಚ್ಚಾಗುತ್ತಿವೆ. ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದು ಗಲಭೆಗೆ ಕಾರಣವಾಗಿದ್ದ ಮಂಡ್ಯ ಜಿಲ್ಲೆಯ ಮದ್ದೂರಿಗೆ ಗುರುವಾರ ಭೇಟಿ ನೀಡಿದ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರೋಷಾವೇಶದ ಮಾತುಗಳನ್ನಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿಗೆ ಭೇಟಿಯ ವೇಳೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮಾತನಾಡಿ, ಈದ್ ಮಿಲಾದ್ ಮೆರವಣಿಗೆ ವೇಳೆ ಯಾರಾದರೂ ಹಿಂದೂಗಳು ಕಲ್ಲು ಹೊಡೆದರೇ ಎಂದು ಪ್ರಶ್ನಿಸಿದರು. ಅಲ್ಲದೆ, ಯಾರು ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆಯೋ ಅವರನ್ನು ಅಲ್ಲಲ್ಲೇ ಎನ್ಕೌಂಟರ್ ಮಾಡಬೇಕು. ಬಾಯಿಗೇ ಬಂದೂಕಿಟ್ಟು ಅಲ್ಲೇ ಢಂ ಅನ್ನಿಸಿಬಿಡಬೇಕು ಎಂದು ಯತ್ನಾಳ್ ಗುಡುಗಿದರು. ಯಾರು ಹಿಂದೂ, ಕ್ರಿಶ್ಚಿಯನ್, ಸಿಖ್ ಹಾಗೂ ಇತರರನ್ನು ಕೊಲೆ ಮಾಡುತ್ತಾರೋ ಅವರಿಗೆ ಸ್ವರ್ಗದಲ್ಲಿ 72 ಕನ್ಯೆಯರು ಸಿಗುತ್ತಾರೆ ಎನ್ನುತ್ತಾರೆ ಎಂದು ಮುಸ್ಲಿಮರನ್ನು ಉದ್ದೇಶಿಸಿ ಹೇಳಿದರು.

Those Who Praise Pakistan Should Face Encounter Says MLA Basanagouda Patil Yatnal

ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ಆದ ಗಲಭೆ, ಕಲ್ಲು ತೂರಾಟವನ್ನು ಖಂಡಿಸಲು ಹಾಗೂ ಇಲ್ಲಿನ ನಮ್ಮ ಹಿಂದೂಗಳಿಗೆ ಧೈರ್ಯ ತುಂಬಲು ಇಂದು ಮದ್ದೂರಿಗೆ ಭೇಟಿ ನೀಡಿ ಹಿಂದೂ ಜನತೆಯನ್ನುದ್ದೇಶಿಸಿ ಮಾತನಾಡಿದೆ. ಭರ್ಜರಿ ಸ್ವಾಗತ, ಗೌರವ ನೀಡಿದ ಮದ್ದೂರಿನ ಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ಇದೆ ವೇಳೆ, ಹಿಂದೂ ಧರ್ಮಾಚರಣೆ, ಹಬ್ಬ, ಹರಿದಿನಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಲ್ಲು ತೂರುವ ಮತಾಂಧರ ಮೇಲೆ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿಕೆ ನೀಡಿ ಮದ್ದೂರಿನಲ್ಲಾದ ಗಲಾಟೆಗೆ ಮುಸಲ್ಮಾನರು ಕಾರಣ ಎಂದು ಹೇಳಿದ್ದಾರೆ.

ಕಳೆದ ವರ್ಷ ನಾಗಮಂಗಲದಲ್ಲೂ ಇದೆ ರೀತಿಯಾದ ಘಟನೆಯಾಗಿದ್ದನ್ನು ನಾವು ಸ್ಮರಿಸಬಹುದು. ಹಿಂದೂ ಉತ್ಸವಗಳ ಮೇಲೆ ಕಲ್ಲು ತೂರುವ ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿಗಳ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಹಾಗೂ ಸರ್ಕಾರದಿಂದ ಪಡೆಯುತ್ತಿರುವ ಯಾವುದೇ ಸೌಲಭ್ಯವಿದ್ದರೂ ಸಹ ಅದನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಮೊಟಕುಗೊಳಿಸಬೇಕೆಂದು ಹೇಳಿದೆ. ಹಿಂದೂಗಳ ಒಗ್ಗಟ್ಟಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಧರ್ಮರಕ್ಷಣೆಗೆ ನಾನು ಸದಾ ಬದ್ದ ಹಾಗೂ ರಾಜ್ಯದ ಯಾವುದೇ ಕಡೆ ಹಿಂದೂಗಳ ಮೇಲೆ ಅನ್ಯಾಯವಾದರೂ ಸಹ ನಾನು ಅವರೊಂದಿಗೆ ಇರುತ್ತೇನೆಂದು ತಿಳಿಸಿದೆ.

ಹಿಂದೂ ಉತ್ಸವಾಚರಣೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಡಗರ, ಸಂಭ್ರಮ ದಿಂದ ಗಣೇಶೋತ್ಸವವನ್ನು ಆಚರಿಸಬೇಕೆಂದು ಈ ಸಂದರ್ಭದಲ್ಲಿ ಹೇಳಿದೆ. ಕಲ್ಲು ತೂರಾಟದಲ್ಲಿ ಬಂಧಿತರಾಗಿರುವವರಿಗೆ ಕಾನೂನು ನೆರವು ನೀಡೋದಿಲ್ಲ ಎಂದು ಶಪಥಗೈದಿರುವ ಮದ್ದೂರಿನ ವಕೀಲರಿಗೆ ನನ್ನ ಕೃತಜ್ಞತೆಗಳನ್ನು ಗೌರವವನ್ನು ಅರ್ಪಿಸಿದೆ. ಅಪರಾಧಿಗಳಿಗೆ, ದುಷ್ಕರ್ಮಿಗಳಿಗೆ, ಕಲ್ಲು ತೂರಾಟ ಮಾಡಿದವರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಿದರಷ್ಟೇ ಮುಂದೆ ಈ ರೀತಿ ಘಟನೆಗಳು ಮರುಕಳಿಸುವುದಿಲ್ಲ .

ಮಕ್ಕಳಿಗೆ ಸಂಸ್ಕೃತಿ, ಶಿಕ್ಷಣ ನೀಡುವ ವಯಸ್ಸಿನಲ್ಲಿ ಹಿಂದೂ ಧರ್ಮದ ಉತ್ಸವಗಳ ಮೇಲೆ ಉಗಿಯುವುದು, ಕಲ್ಲು ತೂರುವುದನ್ನು ಹೇಳಿಕೊಡುತ್ತಿರುವುದು ಖಂಡನೀಯ. ಕಲ್ಲು ತೂರುವ ಘಟನೆಯಲ್ಲಿ ಮಕ್ಕಳನ್ನು ಬಳಸಿದ್ದರೂ (Juveniles ) ಸಹ ಕಾನೂನು ರೀತ್ಯ ಅವರ ಪೋಷಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಗಾಯಾಳುಗಳಿಗೆ ಮಸೀದಿಯ ಆಡಳಿತ ಮಂಡಳಿಯೇ ಪೂರ್ಣ ಖರ್ಚು ವೆಚ್ಚ ಭರಿಸಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಇನ್ನು ಮುಂದೆ ಕಲ್ಲು ತೂರಾಟವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಸ್ತ ಹಿಂದೂ ಬಾಂಧವರಿಗೆ ಯತ್ನಾಳ್‌ ತಿಳಿಸಿದರು.

ತಾಯಿ ಮದ್ದೂರಮ್ಮನ ನಾಡಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಹಿಂದೂ ಒಗ್ಗಟ್ಟನ್ನು ಪ್ರದರ್ಶಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದೆ ಹಾಗೂ ವಿಶೇಷವಾಗಿ ನನಗೆ ಆಮಂತ್ರಣ ನೀಡಿದ ಆಯೋಜಕರಿಗೆ, ಮದ್ದೂರಿನ ಹಿಂದೂ ಕಲಿಗಳಿಗೆ ನನ್ನ ಕೃತಜ್ಞತೆಯನ್ನು ತಿಳಿಸಿದೆ. ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ, ತಾಯಿ ಮದ್ದೂರಮ್ಮ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+