ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ: ಜಿ.ಟಿ ದೇವೇಗೌಡ
ಮುಂಬರುವ ವಿಧಾನಸಭಾ ಚುನಾವಣೆಯ ಬಳಿಕ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಜಿ.ಟಿ ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ.
ಮೈಸೂರು,ಮಾರ್ಚ್ 6: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಜೋರಾಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವ ಸಹಜ ಎನ್ನುವಂತಾಗಿದ್ದು, ಜೆಡಿಎಸ್ ನ ಹಿರಿಯ ನಾಯಕ ಜಿ.ಟಿ ದೇವೇಗೌಡ ಜೆಡಿಎಸ್ ಬಿಟ್ಟು ಬಿಜೆಪಿ ಗೆ ಹೋಗ್ತಾರೆ ಎನ್ನುವ ಚರ್ಚೆ ಜೋರಾಗಿತ್ತು.
ಈ ಕುರಿತು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಜೊತೆಒ ಚರ್ಚೆಯ ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಬಂದಿದ್ದಾರೆ.ಈಗಾಗಲೇ ಪಕ್ಷ ಸಂಘಟನೆ ಹಾಗೂ ಚುನಾವಣಾ ಪ್ರಚಾರದಲ್ಲಿ ಬ್ಯಿಸಿಯಾಗಿರುವ ಜಿ.ಟಿ ದೇವೇಗೌಡರು, ಭಾನುವಾರ ಹುಣಸೂರಿನಲ್ಲಿ ಜೆಡಿಎಸ್‌ನ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಾನು ಬಿಜೆಪಿ ಸೇರಿದಾಗ ನೀವು ಸೋಲಿಸಿದ್ರಿ, ನಾನು ಗೆದ್ದಿದ್ರೆ ಸಿಎಂ-ಡಿಸಿಎಂ ಆಗ್ತಿದ್ದೆ. ಆ ಅವಕಾಶ ತಪ್ಪಿಸಿದ್ರಿ ಎಂದು ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಈಗ ಹರೀಶ್ ಗೌಡನನ್ನು ಗೆಲ್ಲಿಸುವ ಮೂಲಕ ಆ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಸಣ್ಣಪುಟ್ಟ ಗೊಂದಲಗಳಿಗೆ ಅವಕಾಶ ಕೊಡದೆ ನೀವೇ ಹರೀಶ್‌ಗೌಡನೆಂದು ತಿಳಿದು ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜೆಡಿಎಸ್ ಕಾರ್ಯಕರ್ತರು ಕಳೆದ 15 ವರ್ಷಗಳಿಂದ ವನವಾಸ ಅನುಭವಿಸಿದ್ದೀರಾ, ನಾವು-ನೀವು ಮಾಡಿದ ತಪ್ಪಿನಿಂದಾಗಿ ಮೂರು ಬಾರಿ ಆಯ್ಕೆಯಾಗಿರುವ ಶಾಸಕ ಮಂಜುನಾಥ್ ಆಯ್ಕೆಯಾಗಿದ್ದಾರೆಯೇ ಹೊರತು ಸ್ವಂತ ಬಲದಿಂದ ಗೆದ್ದಿಲ್ಲ. ಇವರು ನನಗೆ ಪಾಠ ಮಾಡಲು ಬರುತ್ತಿದ್ದಾರೆ. ನಾಲ್ಕನೇ ಬಾರಿ ಗೆಲ್ಲಕ್ಕಾಗಲ್ಲ. ನಾವು ಗೆದ್ದರೆ ಇತರೆ ಸಮುದಾಯಗಳ ಮೇಲೆ ದಬ್ಬಾಳಿಕೆ ಮಾಡುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿ, ಹರೀಶ್‌ಗೌಡ ನಿಮ್ಮ ಮಗ, ಅವನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆಂದರು.

ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ವೇಳೆ ಹುಣಸೂರಿಗೆ ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆಅಭಿವೃದ್ದಿ, ಹುಣಸೂರಿಗೆ ಕಾವೇರಿನೀರು ಪೂರೈಕೆ, ಇದೀಗ 317ಕೋಟಿಯ ಉಂಡವಾಡಿ ಯೋಜನೆಯಿಂದ ಕಾವೇರಿನೀರು ಸೇರಿದಂತೆ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಎಲ್ಲಸಮುದಾಯಗಳಿಗೆ ಸಾಮಾಜಿಕನ್ಯಾಯ ಕಲ್ಪಿಸಿ, ಅಧಿಕಾರ ನೀಡಿರುವ ಹೆಮ್ಮೆಇದೆ. ಎಚ್.ಡಿ.ಕುಮಾರಸ್ವಾಮಿ ಚಾಮರಾಜ ಕ್ಷೇತ್ರದಲ್ಲೇ ಆರಾಮವಾಗಿ ಗೆಲ್ಲಬಹುದಿತ್ತು. ಏಕಿಷ್ಟು ರಿಸ್ಕ್ ತೆಗೊಂಡಿದ್ದೀರಾ ಎಂದು ಕೇಳಿದ್ರು. ನನ್ನನ್ನು ಶಾಸಕ-ಮಂತ್ರಿ ಮಾಡಿದ್ದು ಹುಣಸೂರು ಜನ, ಹುಣಸೂರಿನ ಜನರ ಋಣ ನನ್ನ ಮೇಲಿದೆ. ಅದೇ ನನ್ನ ಕರ್ಮಭೂಮಿ ಇಲ್ಲಿಂದಲೇ ಸ್ಪರ್ಧೆ ಮಾಡಬೇಕೆಂದು ತೀರ್ಮಾನಿಸಿದೆ ಎಂದು ಹೇಳಿದರು.
ನನ್ನಲ್ಲಿ ಶಕ್ತಿ ಇದೆ ಎಂದು ತಿಳಿದು ಕಾಂಗ್ರೆಸ್, ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದವರೇ ಇಂದು ಕಾಂಗ್ರೆಸ್ ಹಾಗೂ ಬಿಜೆಪಿ 80-90 ಸೀಟ್ ಬರುತ್ತೆ. ನೀವು ದಳದಲ್ಲೇ ಉಳಿದಿದ್ದು ಒಳ್ಳೆಯದಾಯಿತು ಅಂತಾರೆ. ಮುಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದು ಗ್ರಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications