ಯಡಿಯೂರಪ್ಪ ಅವರನ್ನ ಬಂಧಿಸಿದರೆ ಲಿಂಗಾಯತ ಸಮಾಜ ತಿರುಗಿ ಬೀಳುವ ಭಯ?
ಯಡಿಯೂರಪ್ಪ ಅವರನ್ನ ಬಂಧಿಸಲು ಇದೀಗ ಸಿಐಡಿ ತಂಡ ಸಿದ್ಧತೆ ನಡೆಸಿದೆ. ಹೀಗಿದ್ದಾಗಲೇ, ಕರ್ನಾಟಕ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. ಅದು ಏನೆಂದರೆ ಅಕಸ್ಮಾತ್ ಇದೀಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡಿದರೆ, ಲಿಂಗಾಯತ ಸಮಾಜ ತಿರುಗಿ ಬೀಳುವ ಕಾಡತೊಡಗಿದೆ. ಹಾಗಾದ್ರೆ ಯಡಿಯೂರಪ್ಪ ಅವರನ್ನ ಈಗ ಅರೆಸ್ಟ್ ಮಾಡಲು ಸಿಐಡಿ ಮುಂದಾಗಿರುವುದು ಏಕೆ? ಮುಂದೆ ಓದಿ.
ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ 'ಪೋಕ್ಸೊ' ಅಂದ್ರೆ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ' ಅಡಿ ಕೇಸ್ ದಾಖಲಾಗಿದೆ. ಹೀಗಾಗಿಯೇ ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರು ದೊಡ್ಡ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದೀಗ ಕರ್ನಾಟಕದ ಮಾಜಿ ಸಿಎಂಗೆ, ದೊಡ್ಡದಾದ ಕಂಟಕ ಎದುರಾಗಿದೆ. ಅದು ಏನೆಂದ್ರೆ ಬೆಂಗಳೂರಿನ ಒಂದನೇ ತ್ವರಿತಗತಿ ನ್ಯಾಯಾಲಯ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ನಿನ್ನೆಯಷ್ಟೇ ಬಿಎಸ್‌ವೈ ವಿರುದ್ಧ ವಾರಂಟ್ ಜಾರಿಯಾಗಿತ್ತು.

ಹೀಗೆ ವಾರಂಟ್ ಜಾರಿ ಬಳಿಕ ಯಡಿಯೂರಪ್ಪ ಅವ್ರು ಅರೆಸ್ಟ್ ಆಗುವ ಆಗುವ ಸಾಧ್ಯತೆ ದಟ್ಟವಾಗಿದೆ ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಇದೀಗ, ಹೊಸ ಸವಾಲುಗಳು ಎದುರಾಗಿವೆ. ಯಾಕಂದ್ರೆ ಯಡಿಯೂರಪ್ಪ ಬಂಧನವಾದರೆ, ಲಿಂಗಾಯತ ಸಮಾಜದ ಸಿಟ್ಟನ್ನು, ರಾಜ್ಯ ಕಾಂಗ್ರೆಸ್ ಸರ್ಕಾರ ಎದುರಿಸುವ ಭೀತಿಯು ಇದೆ. ಇದು ಕರ್ನಾಟಕದ ರಾಜಕೀಯದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿ ಮಾಡಿಬಿಟ್ಟಿದೆ. ಹಾಗಾದ್ರೆ ಇಂದೇ ಯಡಿಯೂರಪ್ಪ ಅರೆಸ್ಟ್ ಆಗ್ತಾರಾ? ಮುಂದೆ ಓದಿ.
3 ಬಾರಿ ಸಿಎಂ, 1 ಬಾರಿ ಡಿಸಿಎಂ!
ಯಡಿಯೂರಪ್ಪ ಕರ್ನಾಟಕ ರಾಜ್ಯಕ್ಕೆ 3 ಬಾರಿ ಸಿಎಂ ಆಗಿ, ಒಂದು ಬಾರಿ ಡಿಸಿಎಂ ಕೂಡ ಆಗಿದ್ದರು. ಹೀಗಿದ್ದಾಗ ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡಲು ಇದೀಗ ವೇದಿಕೆ ಸಜ್ಜಾಗಿದ್ದು, ಅದ್ರಲ್ಲೂ ಯಡಿಯೂರಪ್ಪ ಅವರ ವಿರುದ್ದ ಕೇಳಿಬಂದ ಗಂಭೀರವಾದ ಪ್ರಕರಣ ಅವರನ್ನ ಮತ್ತೊಮ್ಮೆ ಜೈಲು ಕಂಬಿ ಹಿಂದೆ ತಳ್ಳುವಂತೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಬಿಜೆಪಿ ನಾಯಕರು & ಮುಖಂಡರು ಕೂಡ ಬಿ.ಎಸ್. ಯಡಿಯೂರಪ್ಪ ಅವರನ್ನ ತನಿಖಾಧಿಕಾರಿಗಳು ಬಂಧಿಸಿದರೆ ಉಗ್ರ ಹೋರಾಟ ಮಾಡಲು ಸಜ್ಜಾಗಿದ್ದಾರೆ. ಇದು ಕಾಂಗ್ರೆಸ್ & ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಆತಂಕ ತರಿಸಿದೆ.
ಯಡಿಯೂರಪ್ಪ ಅರೆಸ್ಟ್ ಆಗ್ತಾರಾ?
ಕೆಲವು ತಿಂಗಳ ಹಿಂದಷ್ಟೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಒಬ್ಬರು ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಅಪ್ರಾಪ್ತಗೆ ಅಂದರೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ, ಕೇಸ್ ದಾಖಲಾಗಿತ್ತು. ಕೇಂದ್ರ ತನಿಖಾ ದಳ ಅಂದ್ರೆ ಸಿಐಡಿ ಕೇಸ್ ಸಂಬಂಧ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿತ್ತು ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಕೋರ್ಟ್ ನಿನ್ನೆ ಆದೇಶ ಹೊರಡಿಸಿದೆ. ಹೀಗಿದ್ದಾಗ ದೆಹಲಿಗೆ ಸಿಐಡಿ ತಂಡ ತೆರಳಿದೆ, ಯಡಿಯೂರಪ್ಪ ಅವರನ್ನ ಅರೆಸ್ಟ್ ಮಾಡಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications