ಕೊರೊನಾ ಆತಂಕ: ನಾಲ್ಕನೇ ಅಲೆಯಿಂದ ಸಾವು-ನೋವು ಸಂಭವಿಸಲ್ಲ ಎಂದು ಕೋಡಿಶ್ರೀ ಭವಿಷ್ಯ
ಬೆಂಗಳೂರು, ಡಿ. 28: ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡು ಭಾರತದಲ್ಲೂ ಕೊಂಚ ಆತಂಕಕ್ಕೆ ಕಾರಣವಾಗಿರುವ ಕೊರೊನಾ ನಾಲ್ಕನೇ ಅಲೆ ಬಗ್ಗೆ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಈ ಕೋವಿಡ್ ನಾಲ್ಕನೇ ಅಲೆಯಿಂದ ಯಾವುದೇ ಸಾವು- ನೋವುಗಳು ಸಂಭವಿಸುವುದಿಲ್ಲ. ಇದತರ ಬಗ್ಗೆ ಯಾರು ಆತಂಕ ಪಡುವ ಆಗತ್ಯವಿಲ್ಲ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಕೊರೊನಾ ನಾಲ್ಕನೇ ಅಲೆ ಪರಿಣಾಮಕಾರಿಯಾಗಿರುವುದಿಲ್ಲ. ಕೊರೊನಾ ಸೋಂಕು ಬರುತ್ತದೆ, ಬಂದು ಹಾಗೆ ಹೋಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಕೆಪಿಸಿಸಿ ಸದಸ್ಯ ಕೃಷ್ಣಮೂರ್ತಿ ಜನ್ಮದಿನದ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಬಂದಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
"ಒಲೆ ಹತ್ತಿ ಉರಿದರೆ ಅಡುಗೆ ಆಗುತ್ತೆ, ಭೂಮಿ ಹತ್ತಿ ಉರಿದರೆ ಏನಾಗುತ್ತೆ...? ಅಂಥ ಪ್ರಸಂಗ ಮುಂದೆ ನಡೆಯುತ್ತೆ, ಮುಂದೆ ಅದರ ಬಗ್ಗೆ ಭವಿಷ್ಯ ನುಡಿಯುತ್ತೇನೆ. ಕೊರೊನಾ ನಾಲ್ಕನೆ ಅಲೆ ಜನರನ್ನು ಹೆಚ್ಚು ಬಾಧಿಸೋದಿಲ್ಲ, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಕೊರೊನಾ ಬರುತ್ತೆ ಹೋಗುತ್ತೆ, ಸಾವು ನೋವು ಸಂಭವಿಸುವುದಿಲ್ಲ" ಎಂದು ಹೇಳಿದ್ದಾರೆ.
2022 ವರ್ಷದ ಮೊದಲ ಭವಿಷ್ಯದಲ್ಲಿ ದೇಶ ಕೊರೊನಾದಿಂದ ಮುಕ್ತವಾಗಲಿದೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಆದರೆ ಕೊರೊನಾದಿಂದ ಜಗತ್ತು ಮುಕ್ತವಾದರೂ, ಗಂಡಾಂತರ ತಪ್ಪದು ಎಂದು ಹೇಳಿದ್ದರು. ಆ ಗಂಡಾಂತರ ಗಾಳಿಯ ಮೂಲಕ ಬರುವ ಆಪತ್ತು ಎಂದು ಶ್ರೀಗಳು ಹೇಳಿದ್ದರು. ಈಗ ಕೋಡಿಶ್ರೀಗಳ ಆ ಒಂದು ಹೇಳಿಕೆಯನ್ನು ಮತ್ತೆ ವಿಶ್ವದೆಲ್ಲೆಡೆ ಹರಡಿಕೊಳ್ಳುತ್ತಿರುವ ಕೊರೊನಾ ತಳಿಯದ್ದೇ ಎಂದು ಹೇಳಲಾಗುತ್ತಿದೆ.












Click it and Unblock the Notifications