ಸಿದ್ದರಾಮಯ್ಯ-ದೇವೇಗೌಡ ಯುದ್ಧ: ಕುಮಾರಸ್ವಾಮಿ ಶಾಂತಿ ಮಂತ್ರ
ಬೆಂಗಳೂರು, ಆಗಸ್ಟ್ 23: ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಪರಸ್ಪರ ಭೀಕರ ವಾಗ್ಯುದ್ಧದಲ್ಲಿ ತೊಡಗಿದ್ದರೆ ಕುಮಾರಸ್ವಾಮಿ ಮಾತ್ರ ಶಾಂತಿ ಮಂತ್ರ ಪಠಿಸಿದ್ದಾರೆ.
ಇಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ ಎಂದು ಹೇಳಿದ್ದಾರೆ.
ದೇಶದ ರಾಜಕೀಯ ವಿದ್ಯಮಾನಗಳು ಏಕರೂಪವಾಗಿವೆ. ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾದ ಇಂತಹ ಸಂದರ್ಭದಲ್ಲಿ ಒಡಕಿನ ಮಾತುಗಳು ಆರೋಗ್ಯಕರವಲ್ಲ ಎಂದಿರುವ ಕುಮಾರಸ್ವಾಮಿ, ಕಾಲ ಕೂಡಿ ಬಂದಾಗ ಖಂಡಿತ ಎಲ್ಲದಕ್ಕೂ ಉತ್ತರಿಸುವೆ ಎಂದಿದ್ದಾರೆ.

'ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾದ ಸಮಯದಲ್ಲಿ ಒಡಕಿನ ಮಾತು ಬೇಡ' ಎಂದು ಕುಮಾರಸ್ವಾಮಿ ಅವರ ಮಾತು ಹೆಚ್ಚು ಚರ್ಚೆಯಾಗುತ್ತಿದ್ದು, ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಜಗಳ ಬೇಡ ಎಂಬುದನ್ನು ತೋರಿಸುತ್ತಿದೆ.
ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಅವರೇ ಕಾರಣ ಎಂದಿರುವ ದೇವೇಗೌಡ ಅವರು, ಸತತ ಸುದ್ದಿಗೋಷ್ಠಿಗಳನ್ನು ನಡೆಸುವ ಮೂಲಕ ಸಿದ್ದರಾಮಯ್ಯ ಅವರ ಮೇಲೆ ಯುದ್ಧವನ್ನೇ ಪ್ರಾರಂಭಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ. ದೇಶದ ರಾಜಕೀಯ ವಿದ್ಯಮಾನಗಳು ಏಕರೂಪವಾಗಿವೆ. ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾದ ಇಂತಹ ಸಂದರ್ಭದಲ್ಲಿ ಒಡಕಿನ ಮಾತುಗಳು ಆರೋಗ್ಯಕರವಲ್ಲ. ಕಾಲ ಕೂಡಿ ಬಂದಾಗ ಖಂಡಿತ ಎಲ್ಲದಕ್ಕೂ ಉತ್ತರಿಸುವೆ.
— H D Kumaraswamy (@hd_kumaraswamy) August 23, 2019
ಆದರೆ ಕುಮಾರಸ್ವಾಮಿ ಅವರ ಇಂದಿನ ಟ್ವೀಟ್ ಗಮನಿಸಿದರೆ ಅವರಿಗೆ ಕಾಂಗ್ರೆಸ್ ಜೊತೆ ಜಗಳ ಬೇಕಿಲ್ಲ ಎಂದೆನಿಸುತ್ತಿದೆ.












Click it and Unblock the Notifications