ಬಿಸಿಲಿನ ಧಗೆ ನಡುವೆ ಊಟಿಗೆ ಒಂದು ರೌಂಡ್ ಹೋಗಿಬನ್ನಿ, ಯಾಕಂದ್ರೆ ಬರೀ 12 ಡಿಗ್ರಿ ಉಷ್ಣಾಂಶ ಇದೆ!
ಕರ್ನಾಟಕದಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಾ ಸಾಗಿದೆ, ಹೀಗಾಗಿ ಜನರು ಕೂಡ ಈ ಬಿಲಿಸಿನ ಧಗೆ ನೋಡಿ ಬೆಚ್ಚಿಬಿದ್ದಿದ್ದಾರೆ. ಹೀಗಿದ್ದಾಗ ನಮ್ಮ ಅಕ್ಕಪಕ್ಕದ ಊರುಗಳಲ್ಲಿ ತಂಪಾಗಿರುವ ಪ್ರದೇಶ ಹುಡುಕಲು ಮುಂದಾಗುತ್ತಿದ್ದಾರೆ. ಬೇಸಿಗೆಯ ಬಿಸಿಯಿಂದ ತಪ್ಪಿಸಿಕೊಳ್ಳಲು ಹಲವು ವಿಧದ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಜನರಿಗೆ ಇಲ್ಲಿದೆ ನೋಡಿ ಬೆಸ್ಟ್ ಪ್ಲೇಸ್!
ಕರ್ನಾಟಕದಲ್ಲಿ ಈಗ ತಾಪಮಾನ, ಗರಿಷ್ಠ 40 ಡಿಗ್ರಿ ಮೀರಿ ಹೋಗುತ್ತಿದೆ. ಹೀಗಾಗಿ ಜನರು ಕೂಡ ಪರದಾಡಿ ಹೋಗಿದ್ದಾರೆ. ಅಲ್ಲದೆ, ಜೀವನ ಮಾಡುವುದು ಕೂಡ ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದಾಗ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಹಲವರು ಟೂರ್ & ಟ್ರಿಪ್, ಪಿಕ್‌ನಿಕ್ ಹಿಂಗೆ ಅವರ ಮನಸ್ಸಿಗೆ ಬಂದಂತೆ ಹೇಳಿ ಹೋಗುತ್ತಿದ್ದಾರೆ. ಈ ರೀತಿ ನೀವು ಕರ್ನಾಟಕದ ಪಕ್ಕದಲ್ಲೇ ಇರುವ ಕೂಲ್ ಕೂಲ್ ಪ್ಲೇಸ್‌ಗೆ ಹೋಗಬೇಕಾ? ಬನ್ನಿ ಆ ಸ್ಥಳ ಯಾವುದು ಅಂತಾ ತಿಳಿಯೋಣ.

ಏನ್ ಗುರೂ ಇಷ್ಟೊಂದು ಬಿಸಿಲು!
ಬೆಂಗಳೂರು ಒಂದು ಕಾಲದಲ್ಲಿ ಎಸಿ ಸಿಟಿ ಅಂತಾ ಕರೆಸಿಕೊಳ್ಳುತ್ತಿತ್ತು. ಆದರೆ ಬೆಂಗಳೂರು ಈಗ ಕಾಂಕ್ರಿಟ್ ಕಾಡಾಗಿ ಹೋಗಿದ್ದು, ಇಲ್ಲಿ ಕೂಡ ಬಿಸಿಯ ಏಟು ಹೆಚ್ಚಾಗಿದೆ. ಹೀಗಾಗಿಯೆ ಜನರು ಕೂಡ ಬಿಸಿಲಿನ ಝಳಕ್ಕೆ ನರಳಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ನಿಮಗೆ ಕೂಲ್ ಕೂಲ್ ಆಗಲು ಅಚ್ಚುಕಟ್ಟಾದ ಜಾಗವು ನಮ್ಮ ಬೆಂಗಳೂರಿನಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಇದ್ದು. ಆ ಬಗ್ಗೆ ಮಾಹಿತಿ ತಿಳಿಯೋಣ ಮುಂದೆ ಓದಿ.
ಊಟಿ ಕೂಲ್.. ಕೂಲ್..!
ಭಾಗಶಃ ಭಾರತದಲ್ಲಿ ಈಗ ಭಾರಿ ಬಿಸಿಲು ಎದುರಾಗಿದ್ದು, ಜನರು ಕೂಡ ಬಿಸಿ ಗಾಳಿಯಿಂದ ತತ್ತರಿಸಿ ಹೋಗಿದ್ದಾರೆ. ಆದ್ರೆ ಕರ್ನಾಟಕದ ಪಕ್ಕದಲ್ಲೇ ಇರುವ ಊಟಿ ಮಾತ್ರ ಕೂಲ್ ಕೂಲ್ ಆಗಿದೆ. ಕರ್ನಾಟಕದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಮೀರುತ್ತಿದ್ದರೆ, ಊಟಿಯಲ್ಲಿ ಮಾತ್ರ ಕನಿಷ್ಠ ತಾಪಮಾನ 12 ಡಿಗ್ರಿ ಇದೆ. ಹೀಗಾಗಿ ಊಟಿ ಕೂಲ್ ಕೂಲ್ ಆಗಿದ್ದು ಬಿಸಿಲಿನಿಂದ ಬಸವಳಿದ ಜನರಿಗೆ ಇದೀಗ ಊಟಿ ಇಷ್ಟವಾಗುತ್ತಿದೆ. ಅದರಲ್ಲೂ ಮೈಸೂರಿನಿಂದ ಕೂಗಳತೆ ದೂರದಲ್ಲಿ ಇರುವ ಊಟಿಗೆ ಹೋಗಲು ಜನರು ಕೂಡ ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ.
ಒಟ್ನಲ್ಲಿ ಜೋರಾಗಿ ಮಳೆ ಆರಂಭ ಆಗುವ ತನಕ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದ ತುಂಬಾ ಬಿಸಿಲಿನ ಆರ್ಭಟ ಹೀಗೆಯೇ ಇರಲಿದೆ. ಹೀಗಾಗಿ ಮಳೆ ಬರುವ ತನಕ ಕಾಯಬೇಕು ಇಲ್ಲವಾದರೆ ಊಟಿಗೆ ಹೋಗಿ ಕೂಲ್ ಆಗಬೇಕು ಅಂತಿದ್ದಾರೆ ಜನ. ಅದ್ರಲ್ಲೂ ವರ್ಕ್ ಫ್ರಂ ಹೋಂ ಇರುವವರು ಇದೀಗ ಊಟಿಯನ್ನ ಆಯ್ಕೆ ಮಾಡಿಕೊಂಡು ಎಸ್ಕೇಪ್ ಆಗೋದಕ್ಕೂ ಪ್ಲಾನ್ ಮಾಡುತ್ತಿರಬಹುದು!












Click it and Unblock the Notifications