Rain Alert: ಮಳೆ.. ಮಳೆ.. ಬೇಕೇ..ಬೇಕು .. ಗಂಟೆಗಟ್ಟಲೆ ಮಳೆ ಬೇಕು!
ಮಳೆ.. ಮಳೆ.. ಬಾ ಬಾ ಮಳೆ ಅಂತಾ ಜನರು ಹಾಡು ಹೇಳುವಂತೆ ಆಗಿದೆ. ಯಾಕೆ ಅಂದ್ರೆ ಮಳೆ ಇಲ್ಲದೆ ಜನರು ಬಳಲಿ ಬೆಂಡಾಗಿ ಹೋಗಿದ್ದು, ಸೆಕೆ ತಡೆಯಲು ಆಗುತ್ತಿಲ್ಲ. ಹೀಗಾಗಿ ಜನರು ಹೊಸ ಬೇಡಿಕೆ ಇಟ್ಟಿದ್ದಾರೆ. ಹಾಗಾದ್ರೆ ಮಳೆರಾಯನ ಬಳಿ ಕನ್ನಡಿಗರು ಇಡುತ್ತಿರುವ ಆ ಬೇಡಿಕೆ ಏನು? ಕರ್ನಾಟಕದಲ್ಲಿ ಯಾವಾಗ ಮಳೆ ಆರಂಭ ಆಗಲಿದೆ? ಯಾವ ಯಾವ ಜಿಲ್ಲೆಗಳಿಗೆ ಮಳೆ ಸುರಿಯಲಿದೆ? ಬನ್ನಿ ತಿಳಿಯೋಣ.
ಮಳೆ ಯಾಕೆ ಬರ್ತಿಲ್ಲ ಅಂದ್ರೆ ಭೂಮಿಯ ತಾಪಮಾನ ಏರಿಕೆ ಹಾಗೂ ಭೂ ವಾತಾವರಣದ ಮೇಲೆ ಮನುಷ್ಯ ನಡೆಸುತ್ತಿರುವ ದೌರ್ಜನ್ಯ ಇದ್ದಕ್ಕೆ ಕಾರಣ ಅಂತಿದ್ದಾರೆ ವಿಜ್ಞಾನಿಗಳು. ಈ ಆರೋಪಗಳ ನಡುವೆ ಮನುಷ್ಯ ತಾನು ಮಾಡಿರುವ ತಪ್ಪಿಗೆ ತಾನೇ ಸಾಯುತ್ತಿದ್ದಾನೆ. ಮಳೆ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಯಾರೋ ಶ್ರೀಮಂತರು ಮಾಡುವ ತಪ್ಪಿಗೆ ಇದೀಗ ಬಡ ರೈತರು, ಬಡ ಮಧ್ಯಮ ವರ್ಗದ ಜನ ಹನಿ ಹನಿ ನೀರಿಗೂ ಪರತಪಿಸುವ ಪರಿಸ್ಥಿತಿಯು ನಿರ್ಮಾಣ ಆಗಿದೆ. ಹೀಗಿದ್ದಾಗಲೇ ಜನರು ಮಳೆರಾಯನ ಬಳಿ ಹೊಸ ಡಿಮ್ಯಾಂಡ್ ಇಟ್ಟು, ನಮ್ಮ ಬೇಡಿಕೆ ಪೂರೈಸು ಮಳೆರಾಯ ಅಂತಿದ್ದಾರೆ.

ಬಯಲುಸೀಮೆ ಪ್ರದೇಶ ಮಾತ್ರವಲ್ಲ, ಮಲೆನಾಡು ಪ್ರದೇಶಗಳಲ್ಲೂ ಮಳೆ ಬರುತ್ತಿಲ್ಲ. ಈ ಮಳೆರಾಯ ಕೈಕೊಟ್ಟು ಹೋದ ಕಾರಣಕ್ಕೆ ಯಾವಾಗಲೂ ಎಸಿ ರೀತಿ ಇರುತ್ತಿದ್ದ ಮಲೆನಾಡು ಪ್ರದೇಶದಲ್ಲಿ ಬಿಸಿ ನೆತ್ತಿ ಸುಡುತ್ತಿದೆ. ಹೀಗಾಗಿ ಮಲೆನಾಡಿನ ಜನರು ಹೊಸ ಡಿಮ್ಯಾಂಡ್‌ನ ಇಡುತ್ತಿದ್ದಾರೆ. ಅದರಲ್ಲೂ ಮಳೆರಾಯನ ಬಳಿ ನೇರವಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ ಜನರು. ಹೌದು, ಕಾವ್ಯಧರೆ ಎಂಬುವವರು ಟ್ವೀಟ್ ಒಂದನ್ನ ಮಾಡಿದ್ದು ಇದರಲ್ಲಿ ವಿಶಿಷ್ಟ ಬೇಡಿಕೆ ಇಟ್ಟು ಮಳೆರಾಯನನ್ನು ಆಹ್ವಾನಿಸಿದ್ದಾರೆ. 'ಮಲೆನಾಡು ಅಂತೆ... ಎಣಿಸಿ ೫ ನಿಮಿಷ ಮಳೆ ಬಂತು ಇಲ್ಲಿ 🤭 ಸೆಖೆ ಅಂದ್ರೆ ಸೆಖೆ.... 😏 ಬೇಕೇ..ಬೇಕು .. ಗಂಟೆಗಟ್ಟಲೆ ಮಳೆ ಬೇಕು 🤌' ಎಂದು ಬೇಡಿಕೆ ಇಟ್ಟಿದ್ದಾರೆ.
ಮಲೆನಾಡು ಅಂತೆ... ಎಣಿಸಿ ೫ ನಿಮಿಷ ಮಳೆ ಬಂತು ಇಲ್ಲಿ 🤭
— ಕಾವ್ಯಧರೆ😊🌼 (@KavyaBhairavi) April 30, 2024
ಸೆಖೆ ಅಂದ್ರೆ ಸೆಖೆ.... 😏
ಬೇಕೇ..ಬೇಕು .. ಗಂಟೆಗಟ್ಟಲೆ ಮಳೆ ಬೇಕು 🤌#rain pic.twitter.com/x26rhNdDPd
ಮಳೆ ಯಾವಾಗ ಬರುತ್ತೆ ದೇವರೆ?
ಈಗಿರುವ ಮಾಹಿತಿ ಪ್ರಕಾರ, ಮೇ ತಿಂಗಳ ಮೊದಲ ವಾರದಲ್ಲಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ & ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆ ಬರಲಿದೆ ಎನ್ನಲಾಗಿದೆ. ಹಾಗೇ ಬೆಂಗಳೂರು, ಮೈಸೂರು, ಹಾಸನ ಸೇರಿ ರಾಮನಗರ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕೂಡ ಭರ್ಜರಿ ಮಳೆ ಬೀಳಲಿದೆ ಎಂದು ಮನ್ಸೂಚನೆ ಸಿಕ್ಕಿದೆ. ಹೀಗಾಗಿ ಜನರು ಕೂಡ ಭಾರಿ ಮಳೆ ಬೀಳಲಿ ದೇವರೆ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ವಾರದಲ್ಲಿ ಮಳೆರಾಯ ಕರ್ನಾಟಕದ ಮೇಲೆ ಕರುಣೆ ತೋರಿಸುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಉತ್ತಮವಾಗಿ ಮಳೆ ಬಂದರೆ ಮಾತ್ರ ಕರ್ನಾಟಕದ ರೈತರು ತಮ್ಮ ತಮ್ಮ ಬೆಳೆ ಉಳಿಸಿಕೊಳ್ಳಲು ಸಾಧ್ಯ. ಯಾಕಂದ್ರೆ ಬಿಸಿ ಗಾಳಿ ಪ್ರಭಾವಕ್ಕೆ ಕರ್ನಾಟಕ ಪೂರ್ತಿ ತತ್ತರಿಸಿ ಹೋಗಿದೆ. ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿ ಪರಿಸ್ಥಿತಿ ಕೈಮೀರುವ ಭಯ ಆವರಿಸಿದ್ದು, ಆದಷ್ಟು ಬೇಗ ಮಳೆ ಬೀಳಲಿ, ಭೂಮಿ ತಂಪಾಗಲಿ ದೇವರೆ.. ಅಂತಾ ಜನರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಮಳೆರಾಯ ಈ ವಿಚಾರದಲ್ಲಿ ಕರುಣೆ ತೋರಿಸಬೇಕಿದೆ.
ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ!
ಮಳೆ.. ಮಳೆ.. ಮಳೆ.. ನೀರು.. ನೀರು.. ನೀರು.. ಹೀಗೆ ಜನರ ಬಾಯಲ್ಲಿ ಈಗ ಕೇಳಿ ಬರುತ್ತಿರುವ ಎರಡು ಪದ ಎಂದರೆ ಅದು ಮಳೆ & ನೀರು ಮಾತ್ರ. ಯಾಕಂದ್ರೆ ಮಳೆ ಬರದೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರ ಎದುರಾಗಿದೆ. ಇದರ ಜೊತೆಗೆ ಕುಡಿಯುವ ನೀರು ಕೂಡ ಸಿಗದ ಸ್ಥಿತಿ ಉಂಟಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹವಾಮಾನ ಇಲಾಖೆ, ಭರ್ಜರಿ ಮಳೆ ಬಗ್ಗೆ ಸಿಹಿ ಸುದ್ದಿ ಕೊಟ್ಟಿದೆ. ಹಾಗಾದ್ರೆ ಕರ್ನಾಟಕದಲ್ಲಿ ಮಳೆ ಶುರುವಾಗುವುದು ಯಾವಾಗ? ಯಾವ ಯಾವ ಜಿಲ್ಲೆಯಲ್ಲಿ ಭರ್ಜರಿ ಮಳೆ ಬೀಳಲಿದೆ? ಅಂತಾ ಇದೀಗ ಕನ್ನಡಿಗರು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.
ಎಸಿ ಸಿಟಿ ಬೆಂಗಳೂರಲ್ಲಿ ನರಳಾಟ!
ಬೆಂಗಳೂರು ಅಂದ್ರೆ 20 ವರ್ಷಗಳ ಹಿಂದೆ ಎಸಿ ಸಿಟಿ ಎಂಬ ಹೆಸರು ಇತ್ತು. ಯಾಕಂದ್ರೆ ಈ ನಮ್ಮ ಬೆಂಗಳೂರು ಬೇಸಿಗೆ ಸಮಯದಲ್ಲೂ ಕೂಲ್ ಕೂಲ್ ಆಗಿ ಇರೋದು. ಆದರೆ ಏನ್ ಮಾಡೋದು, ಬೆಂಗಳೂರು ಈಗ ಕಾಂಕ್ರಿಟ್ ಕಾಡು ಆಗಿದೆ. ಬೆಂಗಳೂರಿನಲ್ಲಿ ಇದ್ದ ಗಿಡ & ಮರ ಎಲ್ಲಾ ನಾಶವಾಗಿ ಹೋಗುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಅಂತರ್ಜಲ ಕೂಡ ಕುಸಿದು ಹೋಗಿ, ಕೋಟ್ಯಂತರ ಜನ ನರಳುತ್ತಿದ್ದಾರೆ. ಈ ನಡುವೆ ಮಳೆ ಬೇಕು, ಮಳೆ ಬೇಕು ಅಂತ ದೇವರ ಮೊರೆ ಹೋಗುವ ಪರಿಸ್ಥಿತಿ ಕೂಡ ಬಂದಿದೆ. ಆದ್ರೂ ವರುಣ ದೇವ ಮಾತ್ರ ನಮ್ಮ ಜನರ ಮಾತಿಗೆ ಬೆಲೆ ಕೊಟ್ಟು ಮಳೆ ಸುರಿಸುತ್ತಿಲ್ಲ. ಆದರೆ ಮೇ ತಿಂಗಳಲ್ಲಿ ಭರ್ಜರಿ ಮಳೆ, ಸುರಿಯುವ ಮುನ್ಸೂಚನೆ ಇದೆ.
ಮಳೆ ನೀರು ಸಂಗ್ರಹ ಮಾಡಿ
ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲದ ಆರಂಭಕ್ಕೆ ಇನ್ನು ಕೇವಲ 1 ತಿಂಗಳು ಬಾಕಿ ಇದೆ. ಹೀಗಾಗಿ ಮಳೆ ನೀರು ಸಂಗ್ರಹಕ್ಕೆ ಈಗಲಾದರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ.
ಮಳೆ.. ಮಳೆ.. ಮಳೆ!
ನಿನ್ನೆ ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಬಂದ ಭಾರಿ ಮಳೆ ನೆಮ್ಮದಿ ನೀಡಿತ್ತು. ಅದರಲ್ಲೂ ಇಷ್ಟು ದಿನ ಮಳೆ ಇಲ್ಲದೆ ಪರದಾಡಿದ್ದ ನಮ್ಮ ಜನರಿಗೆ, ಭರ್ಜರಿ ಮಳೆಯ ರಸದೌತಣ ಸಿಕ್ಕಿತು. ನೋಡ ನೋಡುತ್ತಲೇ ಇಡೀ ಬೆಂಗಳೂರಿಗೆ ಮುತ್ತಿಗೆ ಹಾಕಿದ ಮಳೆ ಮೋಡಗಳು, ಗಂಟೆಗಟ್ಟಲೇ ಮಳೆ ಸುರಿಸಿದವು. ಈ ಮೂಲಕ ಭರ್ಜರಿ ಮಳೆ ಕಂಡು, ಜನರು ಕೂಡ ಕುಣಿದಾಡಿದರು. ಹಾಗೇ ಮಂಡ್ಯ & ಮೈಸೂರು ಭಾಗದಲ್ಲಿ ಕೂಡ ಭಾರಿ ಮಳೆ ತಂಪು ಹರಿಸಿದೆ. ಕಾವೇರಿಯ ಮಡಿಲಿನಲ್ಲಿ ಇದ್ದರೂ ನೀರು ಇಲ್ಲದೆ ನರಳಿದ್ದರು ಕನ್ನಡಿಗರು. ಅದ್ರಲ್ಲೂ ಹಳೇ ಮೈಸೂರು ಭಾಗದಲ್ಲಿ ಕೂಡ ಕಾವೇರಿ ನದಿ ಬತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿಯೇ, ಮಳೆ ಬರಲಿ ಅಂತಾ ಜನರು ಪ್ರಾರ್ಥನೆ ಮಾಡುತ್ತಿದ್ದರು.
ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ...
ಮನುಷ್ಯ ಕ್ರೂರಿ ಆಗುತ್ತಿದ್ದು, ಪ್ರಕೃತಿ ವಿರುದ್ಧ ತನ್ನ ಕ್ರೂರ ನೀತಿಗಳನ್ನು ಅನ್ವಯಿಸುತ್ತಿದ್ದಾನೆ. ಇದೇ ಕಾರಣಕ್ಕೆ ಇದೀಗ ಮಳೆ ಸರಿಯಾದ ಸಮಯಕ್ಕೆ ಬರದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ತಜ್ಞರು ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ತನ್ನ ದುರಾಸೆಯ, ಮತ್ತು ದುರ್ಬುದ್ಧಿಯ ಮಿತಿ ಮೀರಿದ್ದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಮುಂದೆ ಮನುಷ್ಯರ ಬದುಕಿಗೆ ಇದು ಸಮಸ್ಯೆ ಎದನ್ನಲಾಗುತ್ತಿದೆ. ಪರಿಸರ ಸಂರಕ್ಷಕರು ಕೂಡ ಇದೇ ವಿಚಾರವಾಗಿ ಈಗ ಚರ್ಚೆ ಮಾಡುತ್ತಿದ್ದಾರೆ, ಹೀಗಾಗಿ ಇದೆಲ್ಲಾ ಏನಾಗುತ್ತೆ ಎಂಬ ಚಿಂತೆಯು ಹಬ್ಬಿದೆ.
ತಂಪು.. ತಂಪು.. ಕೂಲ್.. ಕೂಲ್..!
ಮಳೆ.. ಮಳೆ.. ಭರ್ಜರಿ ಮಳೆ ಬಂದಿದ್ದು, ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನರು ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು, ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹಾಗಾದರೆ ಇನ್ನೂ ಎಷ್ಟು ದಿನಗಳ ಕಾಲ ವಾತಾವರಣ ಹೀಗೆ ಇರಲಿದೆ ಗೊತ್ತಾ?
ಮುಂಗಾರು ಮಳೆ ಅಬ್ಬರ ಶುರು!
ಮೇ 31ಕ್ಕೆ ಮುಂಗಾರು ಮಳೆಯ ಮಾರುತಗಳು ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈಗ ಗುಡ್ ನ್ಯೂಸ್ ಸಿಗುತ್ತಿದ್ದು, ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ.












Click it and Unblock the Notifications