ಮಾಜಿ ಸಿಎಂ ಯಡಿಯೂರಪ್ಪ ಕರ್ನಾಟಕ ಬಿಜೆಪಿಗೆ ಮತ್ತೆ ಕಿಂಗ್?
ಕರ್ನಾಟಕದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ ಅದ್ರಲ್ಲೂ ಕಮಲ ಪಾಳಯಕ್ಕೆ ಕರ್ನಾಟಕ ಸೋಲು ಬರೀ ಕರ್ನಾಟಕಕ್ಕೆ ಸೀಮಿತವಾಗಿ ಉಳಿದಿಲ್ಲ. ಯಾಕಂದ್ರೆ ಬಿಜೆಪಿಯ ಈ ಸೋಲು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಅಲ್ಲದೆ ಬೇರೆ ಬೇರೆ ರಾಜ್ಯದಲ್ಲೂ ಕರ್ನಾಟಕದ ರೀತಿ ಪೆಟ್ಟು ಕೊಡಲು ಕಾಂಗ್ರೆಸ್ ಸೇರಿ ವಿಪಕ್ಷಗಳು ಸಜ್ಜಾಗಿವೆ. ಈ ಕಾರಣಕ್ಕೆ ಕೇಂದ್ರದ ಬಿಜೆಪಿ ನಾಯಕರು ಅಲರ್ಟ್ ಆಗಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಪವರ್ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಪವರ್ ಪದೇ ಪದೆ ಗೊತ್ತಾಗ್ತಿದೆ. ಈ ಹಿಂದೆ 2013 ರಲ್ಲಿ ಮೊದಲ ಬಾರಿಗೆ ಬಿಜೆಪಿ ಹೀನಾಯ ಸೋಲು ಕಂಡಿತ್ತು. ನಂತರ, ಪ್ರಧಾನಿ ಮೋದಿ ಅವರ ಸ್ನೇಹಕ್ಕೆ ತೆಲಬಾಗಿ ಬಿಎಸ್‌ವೈ ವಾಪಸ್ ಬಿಜೆಪಿಗೆ ಬಂದು ಕಮಲ ಪಾಳಯಕ್ಕೆ ಬಲ ತುಂಬಿದ್ರು. 2013 ರಲ್ಲಿ ಯಡಿಯೂರಪ್ಪ ಅವರನ್ನ ಬೇಸರವಾಗುವಂತೆ ನಡೆಸಿಕೊಂಡಿದೆ ಬಿಜೆಪಿ ಹೈಕಮಾಂಡ್ ಅಂತಾ, ಲಿಂಗಾಯತ ಮತಗಳು ಉಲ್ಟಾ ಬಿದ್ದವು. 2023 ರಲ್ಲಿ ಕೂಡ ಲಿಂಗಾಯತರ ಕೋಪಕ್ಕೆ ಬಿಜೆಪಿ ನಲುಗಿತ್ತು. ಈ ಕಾರಣ ಮುಂಬರುವ ಅಂದ್ರೆ 2024ರ ಲೋಕಸಭೆ ಚುನಾವಣೆಗೆ ಮೊದಲು BJP ಹೈಕಮಾಂಡ್ ಅಲರ್ಟ್ ಆಗಿದೆ.

ಯಡಿಯೂರಪ್ಪ ಪುತ್ರ ಮುಂದಿನ ಸಾರಥಿ?
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸತತ 2 ಬಾರಿ ಗೆಲುವು ಕಂಡಿದ್ದರೂ, ಈ ಬಾರಿ ಚುನಾವಣೆ ಸುಲಭವಾಗಿಲ್ಲ. ಅಲ್ಲದೆ ಬಿಜೆಪಿ ಸಾಲು ಸಾಲು ರಾಜ್ಯಗಳನ್ನು ಕಳೆದುಕೊಳ್ಳುತ್ತ ಚಿಂತೆಯಲ್ಲಿ ಮುಳುಗಿದೆ. ಪರಿಸ್ಥಿತಿ ಹೀಗಿದ್ದಾಗ ಕರ್ನಾಟಕದ ರೀತಿಯ ದೊಡ್ಡ ರಾಜ್ಯದಲ್ಲಿ ಸೂಕ್ತ ನಾಯಕನ ಅಗತ್ಯತೆ ಇದೆ. ಅದರಲ್ಲೂ ಲಿಂಗಾಯತರೇ ಪ್ರಭಾವಶಾಲಿ ಆಗಿರುವ ಈ ರಾಜ್ಯದಲ್ಲಿ ಬಿಜೆಪಿಗೆ ಲಿಂಗಾಯತ ನಾಯಕರೇ ಬೇಕಿದೆ. ಪರಿಸ್ಥಿತಿ ಹೀಗಿದ್ದಾಗ ಮತ್ತೊಮ್ಮೆ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಸಾಗುತ್ತಿವೆ.
ಏನಿದು ಬಿಜೆಪಿ ಪ್ಲ್ಯಾನ್?
ಈಗಾಗಲೇ ಪ್ರತ್ಯಕ್ಷ್ಯ ಮತ್ತು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಬಿಜೆಪಿಯ ಜವಾಬ್ದಾರಿ ನೀಡಲಾಗಿದೆ. ಆದ್ರೆ ನೇರ ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಚುನಾವಣಾ ಅಖಾಡಕ್ಕೆ ಇಳಿಸಲು ಸಾಧ್ಯವಿಲ್ಲ. ಹೀಗಾಗಿ ಯಡಿಯೂರಪ್ಪ ಪುತ್ರ, ಬಿ.ವೈ. ವಿಜಯೇಂದ್ರ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಸಾಗಿವೆ ಎಂಬ ಸುದ್ದಿ ಇದೀಗ ಕರ್ನಾಟಕದ ರಾಜಕೀಯದಲ್ಲಿ ಗಟ್ಟಿಯಾಗಿ ಓಡಾಡುತ್ತಿದೆ. ಅದರಲ್ಲೂ ಕರ್ನಾಟಕ ಬಿಜೆಪಿಗೆ ಶೋಭಾ ಕರಂದ್ಲಾಜೆ ನಾಯಕತ್ವ ವಹಿಸಿಕೊಳ್ಳಲು ಮನಸ್ಸು ಮಾಡುತ್ತಿಲ್ಲ ಎಂಬ ಚರ್ಚೆಯ ನಡುವೆ ವಿಜಯೇಂದ್ರ ಅವರ ಹೆಸರು ಗಟ್ಟಿಯಾಗಿ ಕೇಳಿಬಂದಿದೆ.
ಬಿ.ಎಲ್.ಸಂತೋಷ್ ಏನು ಹೇಳಬಹುದು?
ಅಕಸ್ಮಾತ್ ವಿಜಯೇಂದ್ರ ಅವರೇ ಮುಂದಿನ ಬಿಜೆಪಿ ಕರ್ನಾಟಕ ಅಧ್ಯಕ್ಷರಾದರೆ ಇನ್ನೊಂದು ರೀತಿ ಸಮಸ್ಯೆ ಭುಗಿಲೇಳುವ ಭಯ ಕೂಡ ಇದೆ. ಯಾಕಂದ್ರೆ ಬಿ.ಎಲ್.ಸಂತೋಷ್ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಧ್ಯೆ ಈ ಹಿಂದಿನಿಂದ ಮನಸ್ತಾಪ ಇದೆ ಎಂಬ ಆರೋಪ ಕೇಳಿಬರ್ತಿದೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯೋದಕ್ಕೆ ಬಿ.ಎಲ್. ಸಂತೋಷ್ ಅವರೂ ಕಾರಣ ಎನ್ನುವ ಆರೋಪ ಗಂಭೀರವಾಗಿದೆ. ಇಷ್ಟೆಲ್ಲದರ ನಡುವೆ ಇದೀಗ ಯಡಿಯೂರಪ್ಪರ ಪುತ್ರ ರಾಜ್ಯ ಬಿಜೆಪಿ ಘಟಕಕ್ಕೆ ಅಧ್ಯಕ್ಷರಾದರೆ ಮುಂದಿನ ಪರಿಸ್ಥಿತಿ ಹೇಗಿರಬಹುದು? ಎಂಬ ಬಗ್ಗೆ ಸಂಚಲನ ಸೃಷ್ಟಿಯಾಗಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಈಗ ಲೋಕಸಭೆ ಚುನಾವಣೆ ಗೆಲ್ಲಲು ಏನೇನೋ ತಂತ್ರ ಮಾಡುತ್ತಿದೆ. ಏಕಂದರೆ ಸಾಲು ಸಾಲು ವಿಧಾನಸಭೆ ಚುನಾವಣೆಗಳ ಸೋಲು ಕೇಂದ್ರ ಸರ್ಕಾರವನ್ನು ಕಂಗೆಡಿಸಿದೆ. ಇದೇ ಹೊತ್ತಲ್ಲಿ ಲೋಕಸಭೆ ಚುನಾವಣೆ ಕೂಡ ಬರುತ್ತಿದ್ದು ಗೆಲ್ಲಬೇಕು ಎಂಬ ಅನಿವಾರ್ಯತೆಯಲ್ಲಿ ಇದೀಗ ಬಿಜೆಪಿ ಸಿಲುಕಿದೆ. ಪರಿಸ್ಥಿತಿ ಹೀಗಿದ್ದಾಗ ಯಡಿಯೂರಪ್ಪ ಅವರಿಗೆ ಮುಂದಾಳತ್ವ ಕೊಟ್ಟರೆ ಎಲ್ಲವೂ ಸರಿಯಾಗುತ್ತೆ, ಅನ್ನೋ ನಿರೀಕ್ಷೆ ಬಿಜೆಪಿ ಹೈಕಮಾಂಡ್‌ಗೆ ಇದೆ. ಆದರೂ ಇದೆಲ್ಲ ಈಗ ಯಾವ ರೀತಿ ವರ್ಕೌಟ್ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications