‘ಅಯೋಗ್ಯ ಆಡಳಿತ’ ಎಂದ ಬಿಜೆಪಿ: ‘ಆತ್ಮಾವಲೋಕನ ಮಾಡಿಕೊಳ್ಳಿ’ ಅಂತಿದೆ ಕಾಂಗ್ರೆಸ್!
ಕಿತ್ತಾಟ ಜೋರಾಗಿದೆ, ಕಾಂಗ್ರೆಸ್ & ಬಿಜೆಪಿ ನಾಯಕರು ಒಬ್ಬರ ಮಾನ ಮತ್ತೊಬ್ಬರು ತೆಗೆದು ಹಾದಿ ರಂಪ & ಬೀದಿ ರಂಪ ಮಾಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್‌ನ ಯೋಜನೆಗಳನ್ನು ಮತ್ತು ಸಮಾರಂಭಗಳನ್ನ ಕರ್ನಾಟಕ ಬಿಜೆಪಿ ಟೀಕಿಸುತ್ತಿದೆ. ಇದೇ ಸಮಯದಲ್ಲಿ ಕಾಂಗ್ರೆಸ್ ಕೂಡ ಉತ್ತರ ನೀಡಿದೆ. 'ಅಯೋಗ್ಯ ಆಡಳಿತ' ಎಂದ ಬಿಜೆಪಿಗೆ ಈಗ 'ಆತ್ಮಾವಲೋಕನ ಮಾಡಿಕೊಳ್ಳಿ' ಅಂತಿದೆ ಕಾಂಗ್ರೆಸ್! ಯಾಕೆ ಗೊತ್ತೆ?
ಅಂದಹಾಗೆ ಬಿಜೆಪಿ ನಿನ್ನೆ ಒಂದು ಗಂಭೀರ ಆರೋಪ ಮಾಡಿತ್ತು, ಅದು ಏನೆಂದರೆ ಕಾಂಗ್ರೆಸ್ ಸಮಾವೇಶದ ಬಗ್ಗೆ. 'ಕುಣಿಗಲ್ & ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುತ್ತಿದ್ದು, ಆ ಸಮಾವೇಶಕ್ಕೆ ಸಾರಿಗೆ ಮತ್ತು ರಾಮನಗರ ಉಸ್ತುವಾರಿ ಸಚಿವರು ಆದ ರಾಮಲಿಂಗಾರೆಡ್ಡಿ ಅವರು ಉಚಿತವಾಗಿ ಬಸ್‌ಗಳನ್ನು ಬಿಟ್ಟಿದ್ದಾರೆ.' ಎಂದು ಬಿಜೆಪಿ ಆರೋಪ ಮಾಡಿತ್ತು. ಈಗ ಈ ಕುರಿತು ಕರ್ನಾಟಕ ಕಾಂಗ್ರೆಸ್ ಖಡಕ್ ಪ್ರತ್ಯುತ್ತರ ನೀಡಿದೆ. ಹಾಗಾದರೆ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಹೇಳಿದ್ದೇನು? ಮುಂದೆ ಓದಿ.

'ಅಪ್ರಬುದ್ಧ, ಅಜ್ಞಾನಿ, ಅಯೋಗ್ಯ..'
ನಿನ್ನೆ ಬಿಜೆಪಿ ಒಂದು ಟ್ವೀಟ್ ಮಾಡಿತ್ತು, ಆ ಟ್ವೀಟ್‌ನಲ್ಲಿ 'ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ @INCKarnatakaಕ್ಕೆ ಮತಿಗೇಡಿ, ಅಪ್ರಬುದ್ಧ, ಅಜ್ಞಾನಿ, ಅಯೋಗ್ಯ ಎನ್ನುವುದು ಇದೇ ಕಾರಣಕ್ಕೆ! ಇಂದಿನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗಿವೆ. ಆದರೆ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹೋಗಲು ಬಸ್‌ಗಳೇ ಇಲ್ಲ. ವಿದ್ಯಾರ್ಥಿಗಳಿಗೆ ಬಸ್‌ಗಳು ಸಿಗದಂತೆ ಮಾಡಿರುವುದು ಇದೇ ಮಜಾವಾದಿ @siddaramaiah ಸರ್ಕಾರ!' ಎಂದಿತ್ತು ಬಿಜೆಪಿ.
'ತುಘಲಕ್ ದರ್ಬಾರ್ ಎಷ್ಟಿದೆ ಎಂದರೆ'
ಹಾಗೇ ತನ್ನ ಆರೋಪ ಮುಂದುವರಿಸಿದ್ದ ಬಿಜೆಪಿ, 'ಮತಿಗೇಡಿ ಕಾಂಗ್ರೆಸ್ ನಾಯಕರದ್ದು ತುಘಲಕ್ ದರ್ಬಾರ್ ಎಷ್ಟಿದೆ ಎಂದರೆ, ಪಿಯುಸಿ ಪರೀಕ್ಷೆ ದಿನಾಂಕ ಮುಂಚಿತವಾಗಿಯೇ ನಿಗದಿಯಾಗಿದ್ದರೂ ಬಸ್‌ಗಳನ್ನು ಸಮಾವೇಶಕ್ಕೆ ಪಡೆದಿದ್ದಾರೆ. ಒಬ್ಬೇ ಒಬ್ಬ ವಿದ್ಯಾರ್ಥಿ ಬಸ್ ಸಿಗದೆ ಪರೀಕ್ಷೆಯಿಂದ ವಂಚಿತವಾದರೂ ಆ ವಿದ್ಯಾರ್ಥಿಯ ಭವಿಷ್ಯ ಕಿತ್ತುಕೊಂಡ ಶಾಪ ತಗಡು ಸರ್ಕಾರಕ್ಕೆ ತಟ್ಟದೆ ಇರುವುದಿಲ್ಲ!' ಎಂದು ಆಕ್ರೋಶ ಹೊರಹಾಕಿತ್ತು ಬಿಜೆಪಿ. ಈಗ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಖಡಕ್ ಪ್ರತ್ಯುತ್ತರ ನೀಡಿದೆ.
ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ @INCKarnataka ಕ್ಕೆ ಮತಿಗೇಡಿ, ಅಪ್ರಬುದ್ಧ, ಅಜ್ಞಾನಿ, ಅಯೋಗ್ಯ ಎನ್ನುವುದು ಇದೇ ಕಾರಣಕ್ಕೆ!
— BJP Karnataka (@BJP4Karnataka) March 1, 2024
ಇಂದಿನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗಿವೆ. ಆದರೆ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹೋಗಲು ಬಸ್‌ಗಳೇ ಇಲ್ಲ. ವಿದ್ಯಾರ್ಥಿಗಳಿಗೆ ಬಸ್‌ಗಳು ಸಿಗದಂತೆ ಮಾಡಿರುವುದು ಇದೇ… pic.twitter.com/VuIrEwxsiX
'ಕೇವಲ 15 ಬಸ್ಸುಗಳು ಮಾತ್ರ..'
ಈ ಬಗ್ಗೆ ಕಾಂಗ್ರೆಸ್ ನೀಡಿರುವ ಉತ್ತರ ಹೀಗಿದೆ, 'ರಾಮನಗರದ ಗ್ಯಾರಂಟಿ ಸಮಾವೇಶಕ್ಕೆ ಬಳಕೆಯಾಗಿದ್ದು ಕೇವಲ 15 ಬಸ್ಸುಗಳು ಮಾತ್ರ, ವಿದ್ಯಾರ್ಥಿಗಳಿಗಾಗಲಿ, ಪ್ರಯಾಣಿಕರಿಗಾಗಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸುವ ಬದಲು ತಮ್ಮ ತಪ್ಪುಗಳ ಆತ್ಮಾವಲೋಕನ ಮಾಡಿಕೊಳ್ಳಲಿ. @BJP4Karnataka ಅವಧಿಯಲ್ಲಿ ಮೋದಿ ಪ್ರಚಾರಕ್ಕೆ ಪರೀಕ್ಷೆಯನ್ನೇ ಮುಂದೂಡಿ, ರಜೆ ಘೋಷಿಸಿ, ಸಮಾವೇಶಕ್ಕೆ ವಿದ್ಯಾರ್ಥಿಗಳನ್ನ ಕರೆಸಿದ್ದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಬಿಜೆಪಿ ಚಿಂತಿಸಲಿಲ್ಲವೇ? ಚುನಾವಣಾ ಪ್ರಚಾರದ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಕರೆತರಬೇಕು ಎಂದು ಆದೇಶ ಹೊರಡಿಸಿದ್ದಾಗ ವಿದ್ಯಾರ್ಥಿಗಳ ಬಗ್ಗೆ ಚಿಂತೆ ಕಾಡಲಿಲ್ಲವೇ?' ಎಂದು ಪ್ರಶ್ನೆ ಮಾಡಿದೆ.
ರಾಮನಗರದ ಗ್ಯಾರಂಟಿ ಸಮಾವೇಶಕ್ಕೆ ಬಳಕೆಯಾಗಿದ್ದು ಕೇವಲ 15 ಬಸ್ಸುಗಳು ಮಾತ್ರ, ವಿದ್ಯಾರ್ಥಿಗಳಿಗಾಗಲಿ, ಪ್ರಯಾಣಿಕರಿಗಾಗಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ.
— Karnataka Congress (@INCKarnataka) March 1, 2024
ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸುವ ಬದಲು ತಮ್ಮ ತಪ್ಪುಗಳ ಆತ್ಮಾವಲೋಕನ ಮಾಡಿಕೊಳ್ಳಲಿ.@BJP4Karnataka ಅವಧಿಯಲ್ಲಿ ಮೋದಿ ಪ್ರಚಾರಕ್ಕೆ ಪರೀಕ್ಷೆಯನ್ನೇ ಮುಂದೂಡಿ,… https://t.co/Wns2KZI6fY
ಒಟ್ನಲ್ಲಿ ಹೀಗೆ ಬಿಜೆಪಿ & ಕಾಂಗ್ರೆಸ್ ನಡುವೆ ಮತ್ತೊಂದು ವಿಚಾರಕ್ಕೆ ತಿಕ್ಕಾಟ ಶುರುವಾಗಿ, ಫೈಟಿಂಗ್ ಬಲು ಜೋರಾಗಿದೆ. ಇದೀಗ ಕಾಂಗ್ರೆಸ್ ನೀಡಿರುವ ಹೇಳಿಕೆಗೆ ಬಿಜೆಪಿ ಅದ್ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ಲೋಕಸಭೆಯ ಚುನಾವಣೆ ಮುಗಿಯುವ ತನಕ ಈ ಕಿರಿಕ್ ನಿಲ್ಲೋದಿಲ್ಲ ಬಿಡಿ.












Click it and Unblock the Notifications