ನನ್ನನ್ನು ಜೈಲಿಗೆ ಕಳಿಸಲು ಹೊಂಚು ಹಾಕಿದ್ರು: ಹಿಂದಿನ ರಹಸ್ಯ ಬಿಚ್ಚಿಟ್ಟ ಹೆಚ್‌ ಡಿ ಕುಮಾರಸ್ವಾಮಿ

ಬೆಂಗಳೂರು, ಮೇ 08: ಹಿಂದೆ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಕೆಂಪಯ್ಯ ಎಂಬ ವ್ಯಕ್ತಿಯನ್ನು ಇಟ್ಟುಕೊಂಡು ನನ್ನನ್ನು ಬಂಧಿಸಬೇಕು ಎಂದು ಸಂಚು ಮಾಡಿದ್ದರು. ಅವರ ಆಸೆ ಈಡೇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಹಿಂದಿನ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಕುಮಾರಸ್ವಾಮಿ ಅವರು, ನನ್ನನ್ನು ಒಂದು ದಿನವಾದರೂ ಅರೆಸ್ಟ್ ಮಾಡಿಸಿ ಜೈಲಿಗೆ ಕಲಿಸಬೇಕು ಎಂದು ಹೊಂಚು ಹಾಕಿದ್ದರು. ವಕೀಲರು ವಿಚಾರಣೆ ಹೋಗಬೇಡಿ ಇದನ್ನು ಸಲಹೆ ಮಾಡಿದ್ದರು. 2,900 ಮಹಿಳೆಯರು ಇರುವ ಪ್ರಕರಣ ಎಂದು ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಯಾವುದೇ ಕೇಸ್ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಳೆಎಳೆಯಾಗಿ ಬಿಡಿಸಿಟ್ಟರು.

They ambushed me to send me to jail Says HD Kumaraswamy

ಪೆನ್ ಡ್ರೈವ್ ಹಂಚಿಕೆಯ ಮೂಲ ಸೂತ್ರಧಾರ ಕಾರು ಚಾಲಕ ಕಾರ್ತಿಕ್ ನನ್ನು ಖಾಸಗಿ ಚಾನೆಲ್ ಒಂದರಲ್ಲಿ ಕೂರಿಸಿ ಸೂಕ್ತ ತರಬೇತಿ ಕೊಡುವ ಕೆಲಸ ನಡೆಯುತ್ತಿದೆ. ಈ ತನಿಖೆಯ ದಿಕ್ಕು ಎತ್ತ ಸಾಗುತ್ತಿದೆ ಎನ್ನುವುದು ಅರ್ಥವಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಹಾಸನ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆ ಆಗಿದೆ. ಅದು ಕೆಲಸವನ್ನು ಮಾಡುತ್ತಿದೆ. ಆದರೆ, ವಿಶೇಷ ತನಿಖಾ ತಂಡಕ್ಕೆ ಸಿಗದ ಕಾರು ಚಾಲಕ ಖಾಸಗಿ ವಾಹಿನಿ ಸಿಕ್ಕಿ ಸಂದರ್ಶನ ನೀಡುತ್ತಾನೆ. ನಾನು ಗೃಹ ಸಚಿವರಿಗೆ ಪ್ರಶ್ನೆ ಕೇಳುತ್ತೇನೆ, ನಿಮ್ಮ ತನಿಖೆ ರೇವಣ್ಣ ಕೇಂದ್ರೀಕೃತವಾಗಿದೆ. ಆದರೆ, ವಿಡಿಯೋಗಳು ಬಿಡುಗಡೆ ಮಾಡಿದವರನ್ನು ಯಾಕೆ ಹೊರಗೆ ಬಿಟ್ಟಿದ್ದೀರಿ? ಅವರ ವಿರುದ್ಧ ಕ್ರಮ ಕೈಗೊಳ್ಳಿ. ಇದುವರೆಗೂ ಏನು ಮಾಡಿಲ್ಲ ಎಂದು ಕಿಡಿಕಾರಿದರು.

ಕಾರು ಚಾಲಕ ಕಾರ್ತಿಕ್ ನ ಖಾಸಗಿ ಚಾನೆಲ್ ಅಲ್ಲಿ ಕುಳಿತು ಟ್ರೈನ್ ಅಪ್ ಮಾಡ್ತಾ ಇದ್ದಾರೆ. ಮಿಸ್ಟರ್ ಪರಮೇಶ್ವರ್ ತಾವು ಏನ್ ಮಾಡ್ತಾ ಇದ್ದೀರಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. 14 ವರ್ಷದ ರೇವಣ್ಣ ಮನೆಯಲ್ಲಿ ಕೆಲಸದಲ್ಲಿ ಇದ್ದವನು ಇವನು. ಪ್ರಜ್ವಲ್ ನಡವಳಿಕೆ ಗೊತ್ತಿದ್ದ ಮೇಲೆ ಕೆಲಸ ಬಿಡಬೇಕಿತ್ತು ಅಲ್ಲವೇ? ಬಂಡೆ ಹೇಗೆ ರಕ್ಷಣೆ ಮಾಡುತ್ತೆ ಅಂತ ಕಾಯ್ತಾ ಇದ್ದಾನೆ ಅವನು. ಬಂಡೆ ರಕ್ಷಣೆ ಕೊಡುತ್ತದೆ ಎಂದು ಕಾರ್ತಿಕ್ ಅಂದುಕೊಂಡಿದ್ದಾನೆ. ಅವನು ಗಿರಿನಗರದಲ್ಲೇ ಇದ್ದಾನಂತೆ. ಬಹುಶಃ ಅವನಿಗೆ ಟ್ರೈನಿಂಗ್ ಕೊಡ್ತಾ ಇದ್ದಾರೆ ಎಂದು ಅವರು ಆರೋಪ ಮಾಡಿದರು.

ನವೀನ್ ಗೌಡ, ಕಾರ್ತಿಕ್ ಹಾಗೂ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ? ಇವರು ಮೂರು ಜನರು ಎಷ್ಟು ಆಪ್ತರು, ಇವರ ಸಂಬಂಧ ಎಂಥದ್ದು, ಇವರ ಪೋಟೋಗಲೆಲ್ಲ ಎಲ್ಲಾ ಕಡೆ ವೈರಲ್ ಆಗಿವೆ. ಇದೆಲ್ಲಾ ಎಸ್ ಐಟಿ ಕಣ್ಣಿಗೆ ಬಿದ್ದಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನಿಸಿದರು. ಈಗ ನೋಡಿದರೆ ಇಡೀ ಪ್ರಕರಣ ರೇವಣ್ಣ ಅವರ ಸುತ್ತ ಮಾತ್ರ ಸುತ್ತುತ್ತಿದೆ. ಅವರಿಗೆಮಾತ್ರ ನೋಟಿಸ್ ‌ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+