Dharmasthala Case: ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸುವ ಬಗ್ಗೆ ಜಿ.ಪರಮೇಶ್ವರ್ ರಿಯಾಕ್ಷನ್
ಮೈಸೂರು, ಆಗಸ್ಟ್ 25: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು SIT ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈ ವಿಚಾರವಾಗಿ ಎಸ್ಐಟಿ ತನಿಖೆಯಿಂದ ಧರ್ಮಸ್ಥಳ ಪ್ರಕರಣದ ಸತ್ಯ ಹೊರಬರುತ್ತದೆ, ಇದರಲ್ಲಿ ಯಾರು ರಾಜಕೀಯ ಮಾಡಬಾರದು. ಈ ಪ್ರಕರಣದಲ್ಲಿ ಎನ್ಐಎ ತನಿಖೆಗೆ ವಹಿಸುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಬಿಜೆಪಿಯ ಹಲವು ನಾಯಕರು ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡ್ಕಕೆ ವಹಿಸುವಂತೆ ಒತ್ತಾಯಿಸುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ, ಧರ್ಮಸ್ಥಳ ಪ್ರಕರಣವನ್ನ ಹೀಗೆ ತನಿಖೆ ಮಾಡಿ ಹಾಗೆ ತನಿಖೆ ಮಾಡಿ ಎಂದು ಹೇಳಲು ನಾವು ಯಾರು?. ತನಿಖೆಗೆ ಏನು ಅವಶ್ಯಕತೆ ಇದೆಯೋ ಅದನ್ನು ಪೊಲೀಸರು ಮಾಡುತ್ತಾರೆ. ಮಂಪರು ಪರೀಕ್ಷೆ ಬೇಕೋ ಬೇಡವೋ ಎಂಬುದನ್ನ ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಎಸ್ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ, ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ವರ್ಣಾಶ್ರಮವನ್ನು ಪ್ರತಿಪಾದಿಸಿ ಸಮಾಜವನ್ನು ಒಡೆದು ಆಳಿದ್ದಾರೆ. ಯಾವ ದೇಶದಲ್ಲಿಯೂ ಸಹ ಜಾತಿ ವ್ಯವಸ್ಥೆ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಭಾರತ ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗಿ ಬೆಳೆಯುತ್ತಿದೆ. ಚಂದ್ರಯಾನ ಕೈಗೊಂಡಿದ್ದೇವೆ. ವಿಶ್ವದಲ್ಲಿ ನಮ್ಮದು ಬಲಿಷ್ಠ ಸೈನ್ಯವಿದೆ. ಆದರೆ, ಸಮಾನತೆಯಿಂದ ಬಾಳಲಾಗುತ್ತಿಲ್ಲ ಎಂಬ ಅಸಮಾದಾನ ಭಾರತೀಯರಲ್ಲಿ ಇದೆ ಎಂದು ಹೇಳಿದರು.
ದೇಶದಲ್ಲಿ 2500 ವರ್ಷಗಳ ಹಿಂದೆ ಭಗವಾನ್ ಬುದ್ಧ ಹುಟ್ಟಿದರು. ಚಕ್ರವರ್ತಿ ಮಗನಾಗಿ ಹುಟ್ಟಿದ್ದ ಸಿದ್ಧಾರ್ಥ. ತಾನು ಕಂಡ ಸಮಾಜದ ಚಿತ್ರಣವನ್ನು ಅರ್ಥೈಸಿಕೊಂಡು ಬುದ್ಧನಾದ. ಸಮಾನತೆ ಇಂದಿನ ಪರಿಕಲ್ಪನೆ ಅಲ್ಲ. 2500 ವರ್ಷಗಳ ಹಿಂದಿನ ಪ್ರತಿಪಾದನೆ. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ್ದ ಅಣ್ಣ ಬಸವಣ್ಣನವರು ಮನುಷ್ಯ ಸಮಾನವಾಗಿ ಬಾಳಬೇಕು ಎಂದು ಹೇಳಿದರು. ಶೋಷಿತ ಸಮುದಾಯದಲ್ಲಿ ಹುಟ್ಟಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ಸಮಾನತೆ ಸಿಗಬೇಕು ಎಂದು ಪ್ರತಿಪಾದನೆ ಮಾಡಿದರು. ನಮ್ಮ ದೇಶಕ್ಕೆ ಬಹು ದೊಡ್ಡ ಇತಿಹಾಸವಿದೆ ಎಂದು ಹೇಳಿದರು.
ಅಮೆರಿಕಾದ ಪ್ರಾದ್ಯಾಪಕರೊಬ್ಬರನ್ನು ಭೇಟಿಯಾದಾಗ ಅಸ್ಪೃಶ್ಯತೆಯ ಬಗ್ಗೆ ಕೇಳಿದರು. ಆಗ ನಾನೇ ಅಸ್ಪೃಶ್ಯ. ನನ್ನ ಪಕ್ಕದಲ್ಲಿದ್ದ ಇನ್ನೊಬ್ಬರು ಸ್ಪೃಶ್ಯರು. ಇದರಲ್ಲಿ ಏನಾದರು ವ್ಯತ್ಯಾಸ ಕಾಣಿಸುತ್ತಿದೆಯೇ ಎಂದು ಅವರನ್ನು ಪ್ರಶ್ನಿಸಿದೆ. ವರ್ಣಾಶ್ರಮವನ್ನು ಪ್ರತಿಪಾದಿಸಿ ಸಮಾಜವನ್ನು ಒಡೆದು ಆಳಿದ್ದಾರೆ. ಯಾವ ದೇಶದಲ್ಲಿಯೂ ಸಹ ಜಾತಿ ವ್ಯವಸ್ಥೆ ಇಲ್ಲ ಎಂದು ಬೇಸರಿಸಿದರು. ಮಾಜಿ ಪ್ರಧಾನಮಂತ್ರಿ ಭಾರತರತ್ನ ರಾಜೀವ ಗಾಂಧಿ ಅವರು ನನ್ನನ್ನು ರಾಜಕೀಯಕ್ಕೆ ಕರೆ ತಂದರು. ಆಧುನಿಕ ಭಾರತ ನಿರ್ಮಾಣವಾಗಬೇಕು ಎಂಬ ಅವರು ಕನಸು ಕಂಡಿದ್ದರು.
ಸಮಾಜದಲ್ಲಿ ಬದಲಾವಣೆ ಬಯಸುತ್ತಿದ್ದೇವೆ. ಶಾಶ್ವತ ಸಮಾನತೆಯ ಬದಲಾವಣೆ ಬೇಕು. ದೇಶ ಶಕ್ತಿಯುತವಾಗಿ ಬೆಳೆದಿದೆ. ಜಮೀನು, ಹಣ ಇಲ್ಲ. ವ್ಯಾಪಾರ ಮಾಡಲು ಶಕ್ತಿ ಇಲ್ಲ. ಇದಕ್ಕೆ ಶಕ್ತಿ ಬರಬೇಕು ಎಂದರೆ ಶಿಕ್ಷಣ ಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದರು.
ಒಳಮೀಸಲಾತಿ ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ಡಾ. ಹೆಚ್.ಎನ್.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಸಮೀಕ್ಷೆ ವೇಳೆ ಪಟ್ಟಣದಲ್ಲಿರುವ ಜನ ತಮ್ಮನ್ನು ಜಾತಿಯಿಂದ ಗುರುತಿಸಿಕೊಳ್ಳಲು ಆಗಲಿಲ್ಲ. ಅಂತಹ ವಾತಾವರಣ ಯಾಕೆ ಸಮಾಜದಲ್ಲಿ ಸೃಷ್ಟಿ ಮಾಡಿದ್ದಾರೆ. ದೇಶದ ಜನ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಇನ್ನೆಷ್ಟು ವರ್ಷ ಕಾಯಬೇಕು. ಸಮಾಜವನ್ನು ನಾವು ಬದಲು ಮಾಡಬೇಕು. ಬಾಬಾ ಸಾಹೇಬರು ಮತ ಹಾಕುವ ಶಕ್ತಿಯನ್ನು ನಮ್ಮ ಕೈಗೆ ಕೊಟ್ಟಿದ್ದಾರೆ. ಒಂದು ಸಮುದಾಯ ಯಾವತ್ತಿಗು ನಿಮ್ಮ ಜೊತೆ ನಿಂತಿದೆ. ಅವರಿಗೆ ಮೋಸ ಮಾಡುವುದು ಬಾರದು ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ.
ಅಮೇರಿಕಾದಲ್ಲಿ ಸಮುದಾಯಗಳ ಹೆಸರಿನಲ್ಲಿ ಸಂಘ ಕಟ್ಟಲಾಗುತ್ತಿದೆ. ಇದು ನಾಚೀಕೆಯಲ್ಲವೇ? ಇದನ್ನು ಹೊರಗಡೆಯಿಂದ ನೋಡಿದರೆ ನಮಗೆ ನಾಚಿಕೆಯಾಗುತ್ತಿದೆ. ಮುಖ್ಯಮಂತ್ರಿಯವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತ ಸಭೆ ಕರೆದಿರುವುದರಿಂದ ಹೆಚ್.ಸಿ.ಮಹದೇವಪ್ಪ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ. ಯು.ಟಿ.ಖಾದರ್ ಅವರು ರಾಜ್ಯ ವಿಧಾನಸಭೆ ಸಭಾಕ್ಷರುಗಳ ರಾಷ್ಟ್ರೀಯ ಮಟ್ಟದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಹೋಗಿದ್ದಾರೆ. ಹೀಗಾಗಿ ಅವರು ಭಾಗವಹಿಸಲು ಸಾಧ್ಯವಾಗಿಲ್ಲ. ಎಂದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications