ನಟ ದರ್ಶನ್‌ಗೆ ಅಹಂಕಾರವೆಂಬುದು ಕಿಂಚಿತ್ತು ಇಲ್ಲ: ಚಪ್ಪಲಿ ಎಸೆತ ಖಂಡಿಸಿದ ಶಾಸಕ ಜಮೀರ್‌

ಬೆಂಗಳೂರು, ಡಿಸೆಂಬರ್‌ 21: ಕ್ರಾಂತಿ ಚಿತ್ರದ ಪ್ರಚಾರಕ್ಕಾಗಿ ತೆರಳಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮೇಲೆ ಚಪ್ಪಲಿ ಎಸೆತದ ಘಟನೆಯನ್ನು ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಈ ವಿಚಾರವಾಗಿ ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, 'ಹೆಸರಾಂತ ನಟ, ಆತ್ಮೀಯ ಗೆಳೆಯ ದರ್ಶನ್ ತೂಗುದೀಪ ಅವರ ಮೇಲೆ ಚಪ್ಪಲಿ ಎಸೆದಿರುವುದು ಅತ್ಯಂತ ಹೇಯ ಕೃತ್ಯ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪೊಲೀಸ್ ಇಲಾಖೆ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ' ಎಂದು ಹೇಳಿದ್ದಾರೆ.

'ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡು, ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿ, ಅಭಿಮಾನಿಗಳಿಂದ ಡಿ ಬಾಸ್ ಎಂದು ಕರೆಸಿಕೊಂಡರೂ ದರ್ಶನ್‌ರಲ್ಲಿ ಅಹಂಕಾರವೆಂಬುದು ಕಿಂಚಿತ್ತು ಇಲ್ಲ' ಎಂದು ತಿಳಿಸಿದ್ದಾರೆ.

There is no ego in Actor Darshan MLA Jameer condemns Splipper throwing

'ಬದಲಾಗಿ ಕಷ್ಟ ಎಂದು ಮನೆಬಾಗಿಲಿಗೆ ಬಂದವರಿಗೆ ಕೈಲಾದಷ್ಟು ಸಹಾಯ ಮಾಡುವ, ಬಡವ ಬಲ್ಲಿದನೆನ್ನದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುವ, ಚಿತ್ರರಂಗಕ್ಕೆ ಕಾಲಿಡುವ ಯುವನಟರನ್ನು ಪ್ರೀತಿಯಿಂದ ಪ್ರೋತ್ಸಾಹಿಸುವ ನಿಷ್ಕಲ್ಮಶ ವ್ಯಕ್ತಿತ್ವ ಅವರದು' ಎಂದೂ ಟ್ವಿಟಿಸಿದ್ದಾರೆ.

'ಇಂಥವರ ಮೇಲೆ ಚಪ್ಪಲಿ ಎಸೆದಿರುವುದರಿಂದ ದರ್ಶನ್‌ರ ವ್ಯಕ್ತಿತ್ವಕ್ಕಾಗಲಿ, ಅವರ ಮೇಲೆ ನಾವಿಟ್ಟಿರುವ ಪ್ರೀತಿ, ಗೌರವ, ಅಭಿಮಾನಕ್ಕಾಗಲಿ ಯಾವ ಧಕ್ಕೆಯಿಲ್ಲ. ಇದು ಚಪ್ಪಲಿ ಎಸೆದವನ ಹೇಯ ಮನಸ್ಥಿತಿಯನ್ನು ಅನಾವರಣಗೊಳಿಸಿದೆ' ಎಂದೂ ಅವರ ಹೇಳಿದ್ದಾರೆ.

'ಕನ್ನಡ ನಾಡು ಸುಸಂಸ್ಕೃತರ ನೆಲ, ಸಿನಿಮಾ ನಟರನ್ನು ಅಣ್ಣ ತಮ್ಮಂದಿರಂತೆ, ಗುರುವಿನಂತೆ ಕಂಡ ಇತಿಹಾಸ ಈ ನೆಲಕ್ಕಿದೆ. ಚಪ್ಪಲಿ ಎಸೆಯುವುದು ನಾಡಿಗೆ ಒಗ್ಗುವುದಿಲ್ಲ. ಇಂಥಾ ಹೀನ ಕೃತ್ಯವನ್ನು ಯಾರೂ ಬೆಂಬಲಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಈ ವಿಕೃತ ಆಲೋಚನೆ ಇಲ್ಲಿಗೆ ಕೊನೆಯಾಗಲಿ. ಎಲ್ಲರಲ್ಲೂ ದ್ವೇಷ ಅಳಿದು ಪ್ರೀತಿ ಮಾತ್ರ ಉಳಿಯಲಿ' ಎಂದು ಅವರು ತಿಳಿಸಿದ್ದಾರೆ.

'ದರ್ಶನ್‌ರ ಜೊತೆ ನಾವಿದ್ದೇವೆ. ಇಂಥಾ ಘಟನೆ ಮತ್ತೆಂದೂ ಮರುಕಳಿಸದಿರಲಿ. ಕನ್ನಡ ನಾಡೆಂಬ ಕುಟುಂಬದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ ಹೀನ ಮನಸುಗಳಿಗೆ ನನ್ನ ದಿಕ್ಕಾರವಿದೆ' ಎಂದು ಜಮೀರ್‌ ಖಾನ್‌ ಹೇಳಿದ್ದಾರೆ.

ದರ್ಶನ್‌ ನಟನೆಯ ಕ್ರಾಂತಿ ಚಿತ್ರ ಮುಂದಿನ ವರ್ಷದ ಜನೆವರಿ 26ರಂದು ಬಿಡುಗಡೆಯಾಗಲಿದೆ. ಆ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಲು ದರ್ಶನ್‌ ಅವರು ಹೊಸಪೇಟೆಗೆ ತೆರಳಿದ್ದರು. ಆ ಸಮಯದಲ್ಲಿ ಅವರ ಮೇಲೆ ಚಪ್ಪಲಿ ಎಸೆಯಲಾಗಿದೆ. ಈ ಘಟನೆಯನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ನಟಿಯರು ಖಂಡಿಸಿದ್ದಾರೆ. ಕ್ರಾಂತಿ ಚಿತ್ರವನ್ನು ಮಿಡಿಯಾ ಹೌಸ್‌ ಸಂಸ್ಥೆ ನಿರ್ಮಿಸಿದೆ. ಹರಿಕೃಷ್ಣ ನಿರ್ದೇಶನದ ಚಿತ್ರಕ್ಕೆ ಬಿ.ಸುರೇಶ್‌ ಅವರ ಕಥೆ ಇದೆ.

ಜಮೀರ್‌ ಪುತ್ರ ಜಹೀದ್‌ ಖಾನ್‌ ಅವರ ನಟನೆಯ ಬನಾರಸ್‌ ಚಿತ್ರಕ್ಕೆ ದರ್ಶನ್‌ ಪ್ರಮೋಶನ್‌ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+