ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಚಾಲೆಂಜ್‌ ಗೆದ್ದ ಬೆಂಗಳೂರಿನ ಸ್ಟಾರ್ಟ್‌ಪ್ ಕಂಪನಿಗಳು!

|
Google Oneindia Kannada News

ಬೆಂಗಳೂರು, ಸೆ. 09: ಕೊರೊನಾ ವೈರಸ್ ಹಲವು ಸಂಕಷ್ಟಗಳನ್ನು ತಂದಿದ್ದರೂ ಹಲವು ಅನ್ವೇಷಣೆಗಳಿಗೂ ನಾಂದಿ ಹಾಡಿದೆ. ಸ್ಟಾರ್ಟ್‌ಅಪ್ ತವರು ಬೆಂಗಳೂರಿಗೆ ಮತ್ತಷ್ಟು ಅವಕಾಶಗಳು ಸಿಕ್ಕಿವೆ. ಆ ಅವಕಾಶಗಳನ್ನು ಬೆಂಗಳೂರಿನ ಸ್ಟಾರ್ಟ್‌ಪ್ ಕಂಪನಿಗಳು ಬಳಸಿಕೊಳ್ಳುವಲ್ಲಿಯೂ ಸಫಲವಾಗಿವೆ. ಕೊರೊನಾ ವೈರಸ್ ಸಂಕಷ್ಟ ನಿಯಂತ್ರಿಸಲು ನೆರವಾಗುವ ಹಾಗೂ ಸೋಂಕಿನಿಂದಾಗುವ ಸಮಸ್ಯೆಗಳ ನಿವಾರಣೆಗೆ ಬಳಸಲು ಅನುಕೂಲವಾಗುವ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಆವಿಷ್ಕಾರ ಮಾಡಲಾಗಿದೆ. ಬರೊಬ್ಬರಿ 22 ಹೊಸ ಆವಿಷ್ಕಾರಗಳನ್ನು ಸ್ಟಾರ್ಟ್‌ಅಪ್ ಕಂಪನಿಗಳು ಕಂಡುಹಿಡಿದಿವೆ.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ಅವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS) ಆಶ್ರಯದಲ್ಲಿ ಬೆಂಗಳೂರು ಬಯೋ ಇನ್ನೊವೇಷನ್ ಸೆಂಟರ್ (ಬಿಬಿಸಿ-ಬೆಂಗಳೂರು ಜೈವಿಕ ಆವಿಷ್ಕಾರ ಕೇಂದ್ರ) ಮೇಲ್ವಿಚಾರಣೆಯಡಿ 6 ಉತ್ಪನ್ನಗಳು ಅಭಿವೃದ್ಧಿಗೊಂಡಿದ್ದರೆ, KITS ನ ಕರ್ನಾಟಕ ನವೋದ್ಯಮ ಕೋಶದ (ಕರ್ನಾಟಕ ಸ್ಟಾರ್ಟ್ ಅಪ್ ಸೆಲ್) ಮೇಲ್ವಿಚಾರಣೆಯಡಿ 16 ಉತ್ಪನ್ನಗಳು ಅಭಿವೃದ್ಧಿಗೊಂಡಿವೆ. ಕರ್ನಾಟಕದ ಅನ್ವೇಷಣಾ ಸಾಮರ್ಥ್ಯ ಪ್ರತಿಬಿಂಬಿಸುವ 22 ಉತ್ಪನ್ನಗಳನ್ನು ಇಂದು ಬಿಡುಗಡೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಮುಂಬೈನ IIT-SINE ಮತ್ತು ಬಿಬಿಸಿ ನಡುವೆ ಪರಸ್ಪರ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ IIT-SINE ಹಣಕಾಸು ಸಂಪನ್ಮೂಲ ಕ್ರೋಡೀಕರಣ, ತಾಂತ್ರಿಕ ನೆರವಿನ ಮೂಲಕ ಬಿಬಿಸಿಯ ಸ್ಟಾರ್ಟ್‌ಅಪ್‌ಗಳಿಗೆ ನೆರವಾಗಲಿದೆ.

ಕೋವಿಡ್19 ಚಾಲೆಂಜ್

ಕೋವಿಡ್19 ಚಾಲೆಂಜ್

ಕರ್ನಾಟಕ ಸ್ಟಾರ್ಟ್‌ಅಪ್ ಸೆಲ್ 'ಕೋವಿಡ್19 ಚಾಲೆಂಜ್' ಶೀರ್ಷಿಕೆಯಡಿ ಅನ್ವೇಷಣಾಕಾರದಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕೆ 3 ಹಂತಗಳಲ್ಲಿ 356 ಅರ್ಜಿಗಳು ಬಂದಿದ್ದವು. ಉದ್ಯಮ ಸಂಘಟನೆಗಳು ನಿರ್ದೇಶನ ಮಾಡಿದ ಸ್ವತಂತ್ರ ಜ್ಯೂರಿಯು ಕ್ರಮಬದ್ಧ ಮೌಲ್ಯಮಾಪನ ನಡೆಸಿದೆ. ವಿನೂತನತೆ, ಸಂಶೋಧನೆಯ ಕಾಲಮಿತಿ, ತಯಾರಿಕಾ ಸಾಮರ್ಥ್ಯ, ತಂಡದ ಶಕ್ತಿ, ಪ್ರಮಾಣಪತ್ರ & ಅನುಪಾಲನೆಗಳು ಇತ್ಯಾದಿಗಳನ್ನು ಆಧರಿಸಿ ಈ 16 ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ.

ಕೋವಿಡ್19 ಚಾಲೆಂಜ್‌ ಗೆದ್ದಿರುವ ಉತ್ಪನ್ನಗಳ ಕುರಿತು ಕಿರು ಪರಿಚಯ ಇಲ್ಲಿದೆ. ಈ ಎಲ್ಲ ವಸ್ತುಗಳು ಕೋವಿಡ್ ಚಿಕಿತ್ಸೆ ಸೇರಿದಂತೆ ಈ ಸಂಕಷ್ಟ ಕಾಲಕ್ಕೆ ಸಹಾಯಕ ವಾಗಲಿವೆ.

ಸ್ಟಾರ್ಟ್‌ಅಪ್ ಉತ್ಪನ್ನಗಳು

ಸ್ಟಾರ್ಟ್‌ಅಪ್ ಉತ್ಪನ್ನಗಳು

1. ನ್ಯೂಕ್ಲಿಯೋಡಿಎಕ್ಸ್ ಆರ್‌ಟಿ: ಕೋವಿಡ್ 19 ಪತ್ತೆ ಹಚ್ಚಲು RT PCR ನಲ್ಲಿ ಬಳಸುವ ಆರ್ ಎನ್ ಎ ಐಸೋಲೇಷನ್ ವಿಧಾನ ಇದಾಗಿದೆ. ಇದು ಸರಳ ಹಾಗೂ ತಗುಲುವ ವೆಚ್ಚ ಕಡಿಮೆ.

2. ಕೋವಿಡಿಎಕ್ಸ್ ಎಂಪ್ಲೆಕ್ಸ್ 3R ಮತ್ತು 4R: ವಂಶವಾಹಿನಿಗಳನ್ನು ಬಳಸಿ ಕೋವಿಡ್ 19 ವೈರಸ್ ಪತ್ತೆಹಚ್ಚುವ ಇನ್-ವಿಟ್ರೋ RT PCR ಗುಣಾತ್ಮಕ ಪರೀಕ್ಷೆ ವಿಧಾನ ಇದಾಗಿದೆ. ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಇದರ ಉತ್ಪಾದನೆಗೆ ಐಸಿಎಂಆರ್ ಅನುಮೋದನೆ ನೀಡಿದೆ.

3. ಡಾ. ತಾಪಮಾನ್: ದೇಹದ ಉಷ್ಣತೆಯನ್ನು ಅಳೆದು ಕೋವಿಡ್-19 ದೃಢಪಡಿಸುವ ಉಪಕರಣ ಇದಾಗಿದೆ. ಪ್ರಮುಖ ವ್ಯತ್ಯಾಸವೇನೆಂದರೆ, ಇದು ಈಗಿರುವ ಇದೇ ರೀತಿಯ ಬೇರೆ ಉತ್ಪನ್ನಗಳಂತೆ ವಿಕಿರಣವನ್ನು ಹೊರಸೂಸುವುದಿಲ್ಲ. ಹೀಗಾಗಿ, ಬಳಕೆದಾರ ಸ್ನೇಹಿಯಾದ ಇದನ್ನು ಸಂಪೂರ್ಣ ದೇಶೀಯವಾಗಿ ರೂಪಿಸಿರುವುದು ಮತ್ತೊಂದು ಹೆಮ್ಮೆ ಎಂಬುದು ಇದನ್ನು ಅಭಿವೃದ್ಧಿಪಡಿಸಿದ ಡಾ. ಲತಾ ದಾಮ್ಲೆ ಅವರ ವಿವರಣೆ.

4. ಎಸ್ಎಎಫ್ಎಇ ಬಯೋಸೆಕ್ಯುರಿಟಿ ಸಲ್ಯೂಷನ್ಸ್: ಸ್ವಯಂಚಾಲಿತವಾಗಿ ದೇಹದ ಉಷ್ಣತೆ, ರಕ್ತದಲ್ಲಿನ ಆಮ್ಲಜನಕ ಮಟ್ಟಗಳನ್ನು ಅಳೆಯಬಲ್ಲದು. ಸ್ವಯಂಚಾಲಿತ ಹ್ಯಾಂಡ್ ವಾಷ್ ಸಾಧ್ಯವಾಗಿಸುತ್ತದೆ. ದೇಹವನ್ನು, ಬಟ್ಟೆಗಳನ್ನು ಮತ್ತು ಸಾಮಾನು ಸರಂಜಾಮುಗಳನ್ನು ಸಂಪೂರ್ಣ ಸೋಂಕು ಮುಕ್ತಗೊಳಿಸುತ್ತದೆ. ಜೊತೆಗೆ ಇದನ್ನು ಅಳವಡಿಸಿದ ಜಾಗದ ನಿರ್ದಿಷ್ಟ ವ್ಯಾಪ್ತಿಯಲ್ಲಿ ಸೋಂಕಿಗೆ ಒಳಗಾದವರನ್ನೂ ಪತ್ತೆ ಮಾಡುತ್ತದೆ. ಸಂಫೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

5. ಯುವಿಇಇ ಬೀಮರ್: ಡಿಎನ್ಎ ಗುಣಸ್ವಭಾವಗಳನ್ನು ಬದಲಾಯಿಸುವ ಮೂಲಕ ಸೂಕ್ಷ್ಮಾಣುಕ್ರಿಮಿಗಳನ್ನು 30 ಸೆಕೆಂಡುಗಳ ಒಳಗೆ ನಿವಾರಿಸುತ್ತದೆ.

6. ಯುವಿಇಇ ಕನ್ವೇಯರ್: ಇದು ದೊಡ್ಡ ವಾಣಿಜ್ಯ ಆವರಣಗಳಲ್ಲಿ ಹೆಚ್ಚು ಉಪಯುಕ್ತ. ವಿವಿಧ ಗಾತ್ರಗಳ ವಸ್ತುಗಳ ಮೇಲಿನ ಕ್ರಿಮಿಗಳನ್ನು ನಿವಾರಿಸುತ್ತದೆ. ಚಲಿಸುವ ಬೆಲ್ಟ್ ನೊಂದಿಗೆ UV- C ವ್ಯವಸ್ಥೆ ಆಧರಿಸಿ ಕೆಲಸ ಮಾಡುತ್ತದೆ.

ಕರ್ನಾಟಕ ಸ್ಟಾರ್ಟ್‌ಪ್ ಸೆಲ್ ಉತ್ಪನ್ನಗಳು

ಕರ್ನಾಟಕ ಸ್ಟಾರ್ಟ್‌ಪ್ ಸೆಲ್ ಉತ್ಪನ್ನಗಳು

7. ಕ್ವೋಂಚ್ (Qonch): ಸ್ಮಾರ್ಟ್ ಐಡಿ ಕಾರ್ಡ್ ಹೋಲ್ಡರ್ ಹೊಂದಿದ ಐಒಟಿ ಪ್ಲ್ಯಾಟ್ ಫಾರ್ಮ್ ಇದಾಗಿದೆ. ವ್ಯಾಪಾರೋದ್ದಿಮೆಗಳು, ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಹೆಚ್ಚಿನ ವಿಶ್ವಾಸದೊಂದಿಗೆ ಪುನಃ ಆರಂಭಿಸಲು ಇದು ಸಹಕಾರಿ. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದಕ್ಕೂ ಸಹಕರಿಸುತ್ತದೆ. ಜೊತೆಗೆ ಹಾಜರಾತಿ, ಜಿಯೋ-ಫೆನ್ಸಿಂಗ್ ಇತ್ಯಾದಿಗೆ ಕೂಡ ಬಳಸಬಹುದು.

8. AMPWORK ಪ್ಲ್ಯಾಟ್ ಫಾರ್ಮ್: ಸರ್ಕಾರಕ್ಕೆ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು, ಮೇಲ್ವಿಚಾರಣೆ ಮಾಡಲು ಹಾಗೂ ಅವಲೋಕಿಸುವ ನಿಟ್ಟಿನಲ್ಲಿ ವ್ಯಾಪಾರೋದ್ದಿಮೆಗಳು, ಆಡಳಿತ ವರ್ಗ, ಜನರು ಮತ್ತು ಆರೋಗ್ಯ ಸೇವಾ ವಲಯದಲ್ಲಿರುವವರು ಒಟ್ಟಿಗೆ ಸೇರಿ ಕೆಲಸ ಮಾಡಲು ಅನುವು ಮಾಡಿಕೊಡುವ ವೇದಿಕೆ ಇದಾಗಿದೆ.

9. ರೆಸ್ಪಿರ್ ಏಯ್ಡ್ (RespirAID): ರೋಗಿಗಳ ಉಸಿರಾಟಕ್ಕೆ ನೆರವಾಗುವಂತಹ ಸ್ವಯಂಚಾಲಿತ ಉಪಕರಣ. ಇದು ಸುರಕ್ಷಿತ, ವಿಶ್ವಾಸಾರ್ಹ, ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲು ಸುಲಭ ಹಾಗೂ ದರ ಕೂಡ ಕಡಿಮೆ. ತುರ್ತು ನಿಗಾ ವೇಳೆ, ರೋಗಿಗಳನ್ನು ಚಿಕಿತ್ಸೆಗಾಗಿ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಹಾಗೂ ಶಸ್ತ್ರಚಿಕಿತ್ಸೆ ನಂತರದ ಅರಿವಳಿಕೆ ಸಂದರ್ಭಗಳಲ್ಲಿ ಬಳಸಬಹುದು.

10. ಇಎಂವಿಲಿಯೋ (Emvlio): ಲಸಿಕೆಗಳು, ರಕ್ತ, ಸೆರಂ ಇತ್ಯಾದಿಯನ್ನು ಕರಾರುವಾಕ್ಕಾದ ಉಷ್ಣತೆಯಲ್ಲಿ ಸಾಗಿಸಲು ಅನುವು ಮಾಡಿಕೊಡುವ ವೈದ್ಯಕೀಯ ದರ್ಜೆಯ ರೆಫ್ರಿಜರೇಟರ್ ವ್ಯವಸ್ಥೆ ಇದಾಗಿದೆ. ದೋಷಪೂರಿತ ನೆಗೆಟಿವ್ ಫಲಿತಾಂಶ ತಡೆಗಟ್ಟುತ್ತದೆ. ಕರ್ನಾಟಕದ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ಬಳಸಲಾಗುತ್ತಿದೆ.

ಸುರಕ್ಷತೆಗೆ ಸ್ಟಾರ್ಟ್‌ಅಪ್ ಒತ್ತು

ಸುರಕ್ಷತೆಗೆ ಸ್ಟಾರ್ಟ್‌ಅಪ್ ಒತ್ತು

11. ಪಿಕ್ಸುಯೇಟ್: ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ತಪಾಸಣೆಗೆ ನಿಲ್ಲುವಂತೆ ಮಾಡುವ ಅನಿವಾರ್ಯತೆಯನ್ನು ನಿವಾರಿಸುತ್ತದೆ. ಯಾವುದೇ ವ್ಯಕ್ತಿಯು ಹಾದು ಹೋಗುತ್ತಿರುವಾಗ 3-5 ಮೀಟರ್ ಸುರಕ್ಷಿತ ಅಂತರದಿಂದಲೇ ದೇಹದ ಉಷ್ಣತೆಯನ್ನು ಕೃತಕ ಬುದ್ಧಿಮತ್ತೆ ಆಧರಿಸಿ ಅಳೆಯುತ್ತದೆ. ಪ್ರತಿಯೊಬ್ಬರ ತಾಪಮಾನವನ್ನು ದಾಖಲಿಸುತ್ತದೆ. ಜೊತೆಗೆ, ಹೆಚ್ಚು ಉಷ್ಣತೆ ಇರುವವರು ಒಳ ಬಂದಾಗ ಎಚ್ಚರಿಕೆ ಕೊಡುತ್ತದೆ.

12. AskDoc: ಕೋವಿಡ್-19 ರೋಗ ಪ್ರಸರಣ ಹಾಗೂ ಸೋಂಕು ನಿಯಂತ್ರಣ ಕುರಿತ ಪ್ರಶ್ನೆಗಳಿಗೆ ಬಹು ಭಾಷೆಯಲ್ಲಿ ಧ್ವನಿ ಹಾಗೂ ಪಠ್ಯದ ಮೂಲಕ ಉತ್ತರಿಸುವ ಡಾಕ್ಟರ್ ವಿಡಿಯೊಬಾಟ್ ಇದಾಗಿದೆ.

13. ಥರ್ಮಾಕ್ಸಿ: ವ್ಯಕ್ತಿಯ ದೇಹದ ಉಷ್ಣತೆ, ಹೃದಯ ಬಡಿತ ದರ ಹಾಗೂ ಆಮ್ಲಜನಕ ಮಟ್ಟವನ್ನು ಅಳೆಯುತ್ತದೆ. ಜೊತೆಗೆ, ಆಯಾ ಕ್ಷಣದ ಅಂಕಿಅಂಶಗಳನ್ನು ವೈರ್ ಲೆಸ್ ಅಥವಾ ಲ್ಯಾನ್ ಮೂಲಕ ನೆಟ್ ವರ್ಕ್ ಗೆ ವರ್ಗಾಯಿಸುತ್ತದೆ.

14. ಹೈಲೋಬಿಜ್: ಇದು ವಿಶೇಷವಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚು ಉಪಯುಕ್ತ. ಇನ್ ವಾಯ್ಸ್ ಗಳನ್ನು ಕಳಿಸುವುದು, ಜ್ಞಾಪನ ಪತ್ರಗಳನ್ನು ಕಳಿಸುವುದು, ನಗದು ಪಾವತಿ, ವಿಮೆ ಮತ್ತಿತರ ಸೇವೆಗಳನ್ನು ಏಕಗವಾಕ್ಷಿ ಮೂಲಕ ಪಡೆಯಬಹುದು.


15. ಡಾಕ್ಸ್ ಪರ್: ನರ್ಸ್‌ಗಳು ಹಾಗೂ ವೈದ್ಯರಿಗೆ ರೋಗಿಯ ಕುರಿತಾದ ಮಾಪನದ ಅಂಕಿ-ಅಂಶಗಳನ್ನು ತಕ್ಷಣವೇ ರವಾನಿಸಬಲ್ಲ ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್ ಪೆನ್ ಹಾಗೂ ಎನ್ ಕೋಡೆಡ್ ಪೇಪರ್ ಪರಿಹಾರ ಇದಾಗಿದೆ.

16. ವ್ಯಾಪ್ ಕೇರ್: ವೆಂಟಿಲೇಟರ್ ನಲ್ಲಿರುವ ರೋಗಿಗಳ ಲಾಲಾರಸ ಮತ್ತಿತರ ಸ್ರವಣ ಮಾದರಿಗಳನ್ನು ಸಂಗ್ರಹಿಸಲು ನೆರವಾಗುವ ವಿಧಾನವನ್ನು ಇದು ಒಳಗೊಂಡಿದೆ. ನರ್ಸ್ ಗಳು ಕೂಡ ಈ ಸ್ರವಣಗಳ ಸಂಪರ್ಕಕ್ಕೆ ಬರುವುದನ್ನು ಇದು ತಡೆಗಟ್ಟುತ್ತದೆ.

17.ನ್ಯೂಬ್ ವೆಲ್ ನೆಟ್ ವರ್ಕ್ ಫಂಕ್ಷನ್ ಗೇಟ್ ವೇ: ವಿಡಿಯೊ ಸ್ಟ್ರೀಮಿಂಗ್ ಅಪ್ಪಿಕೇಷನ್, ವೆಬೆಕ್ಸ್, ಮೈಕ್ರೋಸಾಫ್ಟ್ ಟೀಮ್ಸ್, ಗೂಗಲ್ ವಿಡಿಯೊ, ಸಿಟ್ರಿಕ್ಸ್, ಸ್ಯಾಪ್, ಒರಾಕಲ್ ಇಆರ್ಪಿ ಹಾಗೂ ಆಫೀಸ್ 365, ಸ್ಯಾಪ್ ಕ್ಲೌಡ್, ಒರಾಕಲ್ ಕ್ಲೌಡ್, ಕಾರ್ಪೊರೇಟ್ ವಿಪಿಎನ್ ಇತ್ಯಾದಿ ಕ್ಲೌಡ್ ಅಪ್ಪಿಕೇಷನ್ ಗಳನ್ನು ಒಂದೆಡೆ ಅಡಕಗೊಳಿಸಿ ಸುಲಭ ಬಳಕೆಗೆ ಅನುವು ಮಾಡಲಾಗಿರುವ ತಾಂತ್ರಿಕ ವೇದಿಕೆ ಇದಾಗಿದೆ.

18: ಫೇಸ್ ಷೀಲ್ಡ್ಸ್, ಇನ್‌ಟ್ಯುಬೇಷನ್ ಬಾಕ್ಸಸ್: ಮುಖ್ಯವಾಗಿ ಆರೋಗ್ಯಸೇವಾ ಸಿಬ್ಬಂದಿಯನ್ನು ವೈರಸ್ ಸೋಂಕಿನಿಂದ ದೂರವಿರಿಸಲು ಸಿದ್ಧಪಡಿಸಿರುವ ತಾಂತ್ರಿಕ ಉತ್ಪನ್ನ ಇದಾಗಿದೆ.

19. ಸೆನ್ಸ್ ಗಿಜ್: ಕೋವಿಡ್-19 ಅಪಾಯಗಳನ್ನು ತಗ್ಗಿಸಲು, ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಹಾಗೂ ಮುಂದಿನ ದಿನಗಳಲ್ಲಿ ವ್ಯಾಪಾರೋದ್ದಿಮೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲದಂತೆ ಮಾಡಲು ಇದನ್ನು ಅಭಿವೃದ್ಧಿಪಡಿಸಲಾಗಿದೆ. ನಿರ್ದಿಷ್ಟ ಪ್ರದೇಶದಲ್ಲಿ ಜಿಯೋ-ಫೆನ್ಸಿಂಗ್ ನಿರ್ಮಿಸಲು ಅನುವು ಮಾಡಿಕೊಡುವ ಮೂಲಕ ಜನದಟ್ಟಣೆಯನ್ನು ತಡೆಯುತ್ತದೆ. ಇದು ಧ್ವನಿಯ ಮೂಲಕ ಎಚ್ಚರಿಕೆಯನ್ನೂ ನೀಡಬಲ್ಲದು.

20. ಸ್ಟ್ಯಾಸಿಸ್: ದೂರದಿಂದಲೇ ರೋಗಿಯ ಆರೈಕೆ ಮೇಲೆ ನಿಗಾ ಇಡಲು ಇದು ಸಹಕಾರಿ. ಕ್ಲೌಡ್ ತಂತ್ರಜ್ಞಾನದ ನೆರವಿನಿಂದ ಯಾವುದೇ ಬೆಡ್ ಅನ್ನು ಪರಿಣಾಮಕಾರಿ ಆರೈಕೆಗೆ ಅನುವು ಮಾಡಿಕೊಡುವ ಬೆಡ್ ಆಗಿ ಪರಿವರ್ತಿಸಬಹುದು. ಜನರಲ್ ವಾರ್ಡ್, ಖಾಸಗಿ ಕೊಠಡಿಗಳು, ಐಸೋಲೇಷರ್ ರೂಮ್ ಗಳು, ಕಸಿ ಘಟಕಗಳು, ಐಸಿಯು ಸೇರಿದಂತೆ ಹಲವೆಡೆ ಬಳಸಲು ಸೂಕ್ತ. USFDA ಅನುಮೋದಿಸಿರುವ ಭಾರತದಲ್ಲಿ ತಯಾರಾದ ಏಕೈಕ ಉಪಕರಣ ಇದಾಗಿದೆ.

ಎಲ್ಲವೂ ದೇಶಿ ತಂತ್ರಜ್ಞಾನ

ಎಲ್ಲವೂ ದೇಶಿ ತಂತ್ರಜ್ಞಾನ

21. ಟಚ್ ಲೆಸ್ ಐಡಿ: HW ಸ್ಕ್ಯಾನರ್ ಗಳಿಗೆ ಬದಲಿಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೊಬೈಲ್ ಫೋನ್ ಕ್ಯಾಮೆರಾದಿಂದ ಬೆರಳಚ್ಚಿನ ಜೈವಿಕ ಚಹರೆ ಸೆರೆಹಿಡಿಯುವ ಮೂಲಕ ಇದು ಸ್ಕ್ಯಾನರ್ ಅನ್ನು ಕೈಯಿಂದ ಮುಟ್ಟಬೇಕಾದ ಅನಿವಾರ್ಯತೆಯನ್ನು ತಪ್ಪಿಸುತ್ತದೆ. ಈ ಮೂಲಕ ಕೈಯ ಸ್ಪರ್ಶದ ಮೂಲಕ ಸೂಕ್ಷ್ಮಾಣು ಜೀವಿಗಳು ವರ್ಗಾವಣೆಗೊಳ್ಳುವುದನ್ನು ತಡೆಗಟ್ಟುತ್ತದೆ.

22. ಡೋಜೀ: ಹಾಸಿಗೆಯ ತಳಭಾಗದಲ್ಲಿ ಇಡಬಹುದಾದ ತೆಳ್ಳನೆಯ ಸೆನ್ಸಾರ್ ಷೀಟ್ ಇದಾಗಿರುತ್ತದೆ. ರೋಗಿಯ ಹೃದಯ ಬಡಿತ, ಉಸಿರಾಟ, ಆಮ್ಲಜನಕ ಮಟ್ಟ ಮತ್ತಿತರ ಅಂಶಗಳ ಮಾಪನ ಮಾಡಿ ಸಂಬಂಧಿಸಿದ ವೈದ್ಯರಿಗೆ ತಕ್ಷಣವೇ ರವಾನಿಸುತ್ತದೆ. ವೈರ್ ಬಳಕೆ ಇಲ್ಲದೇ ರೋಗಿಗಳ ಮೇಲೆ ಸತತ ನಿಗಾ ಇಡಬಹುದು. ನರ್ಸ್ ಗಳು ಕೂಡ ರೋಗಿಯ ಬಳಿಗೇ ಬಂದು ಮಾಪನ ಮಾಡುವ ಅಗತ್ಯ ಇರುವುದಿಲ್ಲ. ಈಗಾಗಲೇ 20ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕೋವಿಂಡ್ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ. ಮನೆಯಲ್ಲೇ ಇರುವ ರೋಗಿಗಳ ಮೇಲ್ವಿಚಾರಣೆಗೂ ಅನುಕೂಲಕರ. ಈಗಾಗಲೇ 47 ಪ್ರಕರಣಗಳಲ್ಲಿ ಇದು ಜೀವರಕ್ಷಕ ಎಂಬುದು ದೃಢಪಟ್ಟಿದೆ.

ಉತ್ಪನ್ನ ಬಿಡುಗಡೆಗೊಳಿಸಿದ ಡಿಸಿಎಂ

ಉತ್ಪನ್ನ ಬಿಡುಗಡೆಗೊಳಿಸಿದ ಡಿಸಿಎಂ

ಐಟಿ ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಈ ನೂತನ ಉತ್ಪನ್ನಗಳು ಬೆಂಗಳೂರಿನ ಮತ್ತು ಕರ್ನಾಟಕದ ಸ್ಟಾರ್ಟ್‌ಅಪ್ ಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿತೋರಿಸಿವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಸಿ ಅಧ್ಯಕ್ಷ ಡಾ.ಇ.ವಿ. ರಮಣ ರೆಡ್ಡಿ, ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಆಯೋಗದ (NSTEDB) ಮುಖ್ಯಸ್ಥೆ ಡಾ. ಅನಿತಾ ಗುಪ್ತಾ, ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ. ಜಿತೇಂದ್ರ ಕುಮಾರ್, ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಅವರು ಭಾಗವಹಿಸಿದ್ದರು.

Recommended Video

ಚಿತ್ರೋದ್ಯಮ ಬಂದ್ ? ಇವರಿಗೆಲ್ಲ ತುಂಬಾ loss! | Shivarajkumar | Filmibeat Kannada

English summary
Under the aegis of the Bio-Innovation Center (BBC-Bangalore Bio-Innovation Center) under the auspices of the Karnataka Innovation and Technology Institute (KITS) of the State Science and Technology Department, there are 16 products under the supervision of KITS Karnataka Innovation Cell (Karnataka Startup Cell). There are 22 products released today, reflecting Karnataka's exploration capability. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X