'ನನ್ನನ್ನು ಕೈಬಿಡಬೇಡಿ': ಕಾಂಗ್ರೆಸ್‌ನ ಆಪರೇಷನ್ ಹಸ್ತದ ಬೆನ್ನಲ್ಲೇ ಜೆಡಿಎಸ್ ನಾಯಕರಿಗೆ ಹೆಚ್ ಡಿ ದೇವೇಗೌಡರ ಮನವಿ
ಬೆಂಗಳೂರು, ಆಗಸ್ಟ್ 28: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಿಂದ ಆಪರೇಷನ್ ಹಸ್ತದ ಸುದ್ದಿ ಬೆನ್ನಲ್ಲೇ ನನ್ನನ್ನು ಕೈ ಬಿಡಬೇಡಿ ಎಂದು ಜೆಡಿಎಸ್ ಶಾಸಕರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಸೋಮವಾರ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೆಡಿಎಸ್‌ನಿಂದ ಯಾರೂ ಪಕ್ಷ ಬಿಡುವುದಿಲ್ಲ, ಅದು ಕೇವಲ ವದಂತಿ. ಪಕ್ಷವನ್ನು ಬಲಪಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. 2024 ರ ಲೋಕಸಭೆ ಚುನಾವಣೆಯಲ್ಲಿ ಯಾರು ಅಭ್ಯರ್ಥಿ, ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತದೆ ಎಂದ ಅವರು,ಎರಡು ರಾಷ್ಟ್ರೀಯ ಪಕ್ಷದ ಮಧ್ಯದಲ್ಲಿ ಕಿಂಚಿತ್ತು ಶಕ್ತಿ ಇರುವ ನಮ್ಮ ಪಕ್ಷವನ್ನ ಉಳಿಸಿ ಬೆಳೆಸುತ್ತೇನೆ. ಈ ಎರಡು ಪಕ್ಷದ ನಡುವೆ ನಮ್ಮ ಪಕ್ಷವನ್ನ ಉಳಿಸೇ ಉಳಿಸುವ ಸಂಕಲ್ಪ ತೊಟ್ಟಿದ್ದೇನೆ ಎಂದು ಹೇಳಿದರು.

ಈ ದೇಶದ ರಾಜಕಾರಣ ಹೇಗೆ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ. ಲೋಕಸಭಾ ಕ್ಷೇತ್ರದ ಪುನರ್ ವಿಂಗಡಣೆ ಬಗ್ಗೆ ಚರ್ಚೆ ಆಗುತ್ತಿದೆ. ಜಿ.ಟಿ.ದೇವೆಗೌಡರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ತಯಾರಿ ಮಾಡ್ತಿದಾರೆ, ಬಿಬಿಎಂಪಿ ಚುನಾವಣೆಯ ಬಗ್ಗೆಯೂ ತಯಾರಿ ಮಾಡ್ತಿದಾರೆ. ಬಹಳ ಜನ ಪಕ್ಷ ಬಿಟ್ಟು ಹೋಗ್ತಾರೆ ಎಂದು ಸುದ್ದಿ ಆಗಿದೆ. ಆದರೆ ಯಾರು ಹೋಗ್ತಾರೆ. ಇಂತವರು ಹೋಗ್ತಾರೆ ಎಂದು ಹೇಳಿದ್ರೆ ನಾನು ಸರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ. ದೇಶದಲ್ಲಿ ಪ್ರಾದೇಶಿಕ ಪಕ್ಷವನ್ನ ತುಳಿಯುತ್ತಿದ್ದಾರೆ, ನಾನು ತುಂಬ ವಿಚಾರ ಮಾತನಾಡಬಲ್ಲೆ, ದೇವೆಗೌಡರು ಮನೆಯಲ್ಲಿ ಕೂತ್ಕೊಳ್ತಾರೆ ಎಂದು ತಿಳಿಯಬೇಡಿ.
ಕುಮಾರ ಸ್ವಾಮಿಯವರು ಎಲ್ಲ ಕಡೆ ಓಡಾಡಬೇಕಾಗುತ್ತೆ.ಕುಮಾರ ಸ್ವಾಮಿಯವರ ನಾಯಕತ್ವದಲ್ಲೆ ಪಕ್ಷ ಮುನ್ನಡೆಯಲಿದೆ, ಕೋರ್ ಕಮಿಟಿ ಸದಸ್ಯರ ವಿಶ್ವಾಸಕ್ಕೆ ಪಡೆದು ಒಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ರಾಜಕಾರಣ ಬಹಳ ಚರ್ಚೆ ಮಾಡಿದ್ದೀನಿ, ಪ್ರತಿಯೊಂದು ವಿಚಾರ ತಿಳಿದಿದ್ದೇನೆ. ಒಬ್ಬನೇ ಒಬ್ಬ ಶಾಸಕ ಹೋಗ್ತಾರೆ ಎಂದರೆ ತಿಳಿಸಿ. 10 ನೇ ತಾರೀಖು 20 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ. ನಾವು ದುಡ್ಡು ಕೊಟ್ಟು ಜನ ಕರೆಸಲ್ಲ, ದೇವೆಗೌಡರ ಪಕ್ಷವನ್ನ ಅವರ ಕೊನೆ ಗಳಿಗೆಯಲ್ಲಿ ಉಳಿಸಲೇ ಬೇಕೆಂದು ಜನ ಬರ್ತಾರೆ. ಸೆಪ್ಟಂಬರ್ 10 ರಂದು ಜನ ಬರ್ತಾರೆ ಆಗ ನೀವು ತೀರ್ಮಾನ ಮಾಡಿ. ಹಿಂದೆ ಏನೇ ಸಮಸ್ಯೆ ಆಗಿದ್ರು ನಾನು ಕ್ಷಮೆ ಕೇಳುತ್ತೇನೆ. ನಮ್ಮ ಪಕ್ಷಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಹೇಳಿದರು.
ಕುಮಾರ ಸ್ವಾಮಿಯವರ ಪೆನ್ ಡ್ರೈವ್ ಬಗ್ಗೆ ವಾದ ವಿವಾದ ನೋಡಿದ್ದೇನೆ. ಕುಮಾರಸ್ವಾಮಿಯವರು ಅಷ್ಟು ಸುಲಭವಾಗಿ ಮಾತನಾಡಲ್ಲ. ತುಂಬ ವಿಷಯ ಇದೆ, ಸಾಮಾನ್ಯವಾಗಿ ವಿಚಾರಗಳನ್ನ ನನ್ನ ಬಳಿ ಹಂಚಿಕೊಳ್ಳುತ್ತಾರೆ. ಅವರ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ತುಂಬ ವಿಷಯ ಇದೆ, 10 ನೇ ತಾರೀಖು ಮಾತನಾಡುತ್ತೇನೆ ಎಂದು ಹೇಳಿದರು.
ಕುಮಾರ ಸ್ವಾಮಿ ದೇವೆಗೌಡರ ಮಗ ಎಂದು ಮಾತನಾಡಲ್ಲ. ನನಗೆ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಎಲ್ಲವೂ ಒಂದೇ.ಆದರೆ, ರಾಮನಗರ ಜಿಲ್ಲೆ ಮಾಡಿದ್ದು ಯಾರು? ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ ನನ್ನ ಸೋಲಿಸಬೇಕೆಂದು ತೀರ್ಮಾನ ಮಾಡಿದ್ರು, ಆದರೆ ರಾಮನಗರ ಜಿಲ್ಲೆ ಮಾಡಲು ಆಗ್ತಿರಲಿಲ್ವಾ? ಕುಮಾರಸ್ವಾಮಿಯವರೇ ಬಂದು ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.
ಅಂದು ಮೆಡಿಕಲ್ ಕಾಲೇಜು ಮಂಜೂರು ಆಗಿದ್ದು ಎಲ್ಲಿ, ಜಾಗ ಮಂಜೂರು ಆಗಿದ್ದು ಎಲ್ಲಿ. 9 ಎಕರೆ ಬಿಟ್ಟು ಕೆಲಸ ಶುರು ಮಾಡಿ ಎಂದು ಆದೇಶ ಮಾಡಿದ್ರು. ಕನಕಪುರದಲ್ಲೆ ಮೆಡಿಕಲ್ ಕಾಲೇಜು ಮಾಡಲಿ, ನಾನ್ನದೇನು ತಕರಾರು ಇಲ್ಲ. ರಾಮನಗರ ಮೆಡಿಕಲ್ ಕಾಲೇಜಿಗೆ ತೊಂದರೆ ಮಾಡಬೇಡಿ ಎಂದು ನ್ಯಾಯಯುತವಾಗಿ ಕೇಳ್ತಿದಾರೆ. ಡಿಕೆ ಶಿವಕುಮಾರ್ ದ್ವೇಷದ ರಾಜಕಾರಣ ಮಾಡ್ತಿದಾರೆ ಎಂದು ಹೇಳೊದಕ್ಕೆ ಹೋಗಲ್ಲ, ಅವರ ಕ್ಷೇತ್ರದ ಬಗ್ಗೆ ಅವರು ಮಾತಾಡಿದ್ರೆ, ನ್ಯಾನ್ಯಾಕೆ ಆ ರೀತಿ ಮಾತನಾಡಲಿ.ಈ ವಿಷಯ ಹೇಳಿದ್ರೆ, ವ್ಯಕ್ತಿ ದ್ವೇಷನಾ..? ಇಂತದು ಬಹಳ ಇದೆ. ಕುಮಾರಸ್ವಾಮಿಯವರ ಬಳಿ ಬಹಳ ಇದೆ. ಹೋರಾಟ ನಡೆದಿದ್ದು ಸತ್ಯ, ಇದು ಇಲ್ಲಿಗೆ ನಿಲ್ಲೊಲ್ಲ ಎಂದು ಹೇಳಿದರು.












Click it and Unblock the Notifications