• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲೆಕ್ಷನ್ ಟೈಮ್ ಲಾಬಿ: ಲಿಕ್ಕರ್, ಗಣಿ, ರಿಯಲ್ ಎಸ್ಟೇಟ್

By ವಿಕಾಸ್ ನಂಜಪ್ಪ
|

ಬೆಂಗಳೂರು, ಏಪ್ರಿಲ್ 18: ಕರ್ನಾಟಕ ಚುನಾವಣೆ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಸ್ವಾರಸ್ಯಕರವಾಗಿ ಕಂಡು ಬಂದಿದೆ. ಹಳೆ ರಣತಂತ್ರ, ಲಾಬಿಗಳೆಲ್ಲವೂ ಮಾಯವಾಗಿ ಹೊಸ ರೀತಿಯಲ್ಲಿ ಟಿಕೆಟ್ ರಾಜಕೀಯ ಶುರುವಾಗಿದೆ.

ಲಾಬಿಗಳ ವಿಷಯಕ್ಕೆ ಬಂದರೆ, ಪ್ರದೇಶದಿಂದ ಪ್ರದೇಶಕ್ಕೆ ಲಾಬಿಗಳು ಬದಲಾಗುತ್ತಿರುತ್ತವೆ. ಕರ್ನಾಟಕದಲ್ಲಿ ಮುಖ್ಯವಾಗಿ ಲಿಕ್ಕರ್, ಮೈನಿಂಗ್, ಶಿಕ್ಷಣ, ರಿಯಲ್ ಎಸ್ಟೇಟ್ ಲಾಬಿಗಳು ಚುನಾವಣೆ ಸಂದರ್ಭದಲ್ಲಿ ಭಾರಿ ಪರಿಣಾಮ ಬೀರುತ್ತಾ ಬಂದಿವೆ.

ಟಿಕೆಟ್ ಪಡೆಯಲು ಏನೆಲ್ಲ ಕಸರತ್ತು ನಡೆಸುತ್ತಾರೆ ಎಂಬುದು ಈ ಎಲ್ಲಾ ಲಾಬಿಗಳ ಮೇಲೆ ಅವಲಂಬಿತವಾಗಿರುತ್ತದೆ. ಕಾಲ ಕಾಲಕ್ಕೆ ಲಾಬಿಗಳು ಬದಲಾದರೂ ಲಾಬಿ ಮಾಡುವುದು ಮಾತ್ರ ನಿಂತಿಲ್ಲ. ಟಿಕೆಟ್ ನಂಬಿಕೊಂಡು ಹಣ ಸುರಿದು ಕೈ ಸುಟ್ಟಿಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ.

ಇದಲ್ಲದೆ, ಲಾಬಿಕೋರರಿಗೆ ಪೂರಕವಾಗಿ ಗುತ್ತಿಗೆದಾರರ ಒತ್ತಡವೂ ಅನೇಕ ಬಾರಿ, ರಾಜಕಾರಣಿಗಳ ಮೇಲೆ ಪ್ರಭಾವ ಬೀರುತ್ತದೆ. ಪ್ರಮುಖ ಲಾಬಿಗಳತ್ತ ಒಂದು ನೋಟ ಮುಂದಿದೆ...

ಲಿಕ್ಕರ್ ಲಾಬಿ

ಲಿಕ್ಕರ್ ಲಾಬಿ

ಕರ್ನಾಟಕ ಚುನಾವಣೆಯಲ್ಲಿ ಅನಾದಿ ಕಾಲದಿಂದಲೂ ಹೆಚ್ಚು ಪ್ರಭಾವ ಬೀರಿದ್ದು ಲಿಕ್ಕರ್ ಲಾಬಿ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಪಡೆಯಲು, ಗೆದ್ದ ಮೇಲೆ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಇದನ್ನು ಪ್ರಯೋಗಿಸಿ ಅನೇಕ ಮಂದಿ ಯಶಸ್ವಿಯಾಗಿದ್ದಾರೆ. ಆದರೆ, 2003ರ ನಂತರ ಈ ಲಾಬಿ ತಕ್ಕಮಟ್ಟಿಗೆ ಕ್ಷೀಣಿಸುತ್ತಾ ಬಂದಿದೆ ಎನ್ನಬಹುದು. ಕರ್ನಾಟಕ ರಾಜ್ಯ ಮದ್ಯ ಮಾರಾಟ ನಿಗಮ ನಿಯಮಿತ ಸ್ಥಾಪನೆ, ಅಬಕಾರಿಯಿಂದ ಸೋರಿಕೆ ಹಣ ತಡೆಗಟ್ಟಿದ್ದು, ಸೆಕೆಂಡ್ಸ್ ಸೇಲ್ ಗೆ ಕಡಿವಾಣ ಹಾಕಿತು. ಹಣ ಹೂಡಿಕೆಯಿಂದ ಹೆಚ್ಚಿನ ಲಾಭವಿಲ್ಲದ ಕಾರಣ ಲಿಕ್ಕರ್ ಲಾಬಿ ತಣ್ಣಗಾಯಿತು.

ಶಿಕ್ಷಣ ಲಾಬಿ

ಶಿಕ್ಷಣ ಲಾಬಿ

ಲಿಕ್ಕರ್ ಲಾಬಿ ತಣ್ಣಗಾದ ನಂತರ ಚುನಾವಣಾ ಕಣವನ್ನು ಬಿಸಿಯೇರಿಸಿದ್ದು ಶಿಕ್ಷಣ ಲಾಬಿ. ರಾಜ್ಯ ಅನೇಕ ರಾಜಕಾರಣಿಗಳು ಪಕ್ಷಾತೀತವಾಗಿ ಹಲವು ಪ್ರತಿಷ್ಠಿತ ಸಂಸ್ಥೆಗಳನ್ನು ನಡೆಸುತ್ತಾ ಬಂದಿದ್ದಾರೆ. ಶಿಕ್ಷಣ ಸಂಸ್ಥೆಗಳ ನೇಮಕಾತಿ, ಸೀಟು ಹಂಚಿಕೆ, ಮ್ಯಾನೇಜ್ಮೆಂಟ್ ಕೋಟಾ ಹೀಗೆ ದೊಡ್ಡ ಮಟ್ಟದ ಲಾಬಿ ನಡೆಯುತ್ತದೆ. ಶಿಕ್ಷಣ ಲಾಬಿಗೆ ಪೂರಕವಾಗಿ ಐಟಿ ಲಾಬಿ ಕೂಡಾ ಚಿಗುರೊಡೆದಿತ್ತು. ಆದರೆ, 1999 ರಿಂದ 2004ರ ತನಕ ಮಾತ್ರ ಜೀವಂತ ಇತ್ತು. ಸರ್ಕಾರ ಐಟಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ, ಈ ಲಾಬಿ ಅಷ್ಟು ಬೆಳೆಯಲಿಲ್ಲ.

ಗಣಿಗಾರಿಕೆ ಲಾಬಿ

ಗಣಿಗಾರಿಕೆ ಲಾಬಿ

2008ರ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು ಗಣಿಗಾರಿಕೆ ಲಾಬಿ. ಬಳ್ಳಾರಿಯ ಗಾಲಿ ರೆಡ್ಡಿ ಸೋದರರು ತಮ್ಮ ಹಣ ಬಲದ ಮೂಲಕ ಟಿಕೆಟ್ ಹಂಚಿಕೆ, ವರ್ಗಾವಣೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಅನೇಕ ವಿಷಯಗಳ ಮೇಲೆ ಪ್ರಭಾವ ಬೀರತೊಡಗಿದರು.

ಇದೇ ರೀತಿ ಲಾಡ್ ಸೋದರರು ಕಾಂಗ್ರೆಸ್ಸಿನಲ್ಲೂ ತಮ್ಮ ಪ್ರಭಾವ ಬೀರತೊಡಗಿದರು. ಆದರೆ, ಲೋಕಾಯುಕ್ತರ ತನಿಖೆ, ರೆಡ್ಡಿ ಜೈಲು ಪಾಲಾಗಿದ್ದು, ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ಈ ಲಾಬಿಯ ಬಲ ಕುಗ್ಗಿಸಿತ್ತು. ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಮೈನಿಂಗ್ ಲಾಬಿ ಬಲವಾಗಿ ಕಂಡು ಬಂದಿತ್ತು.

ರಿಯಲ್ ಎಸ್ಟೇಟ್ ಲಾಬಿ

ರಿಯಲ್ ಎಸ್ಟೇಟ್ ಲಾಬಿ

ಇದು ಬೆಂಗಳೂರು ಮಹಾನಗರವನ್ನು ಬಹುವಾಗಿ ಕಾಡಿದ ಲಾಬಿ. ಬೆಂಗಳೂರು ನಂತರ ಮೈಸೂರು, ತುಮಕೂರು, ಶಿವಮೊಗ್ಗಕ್ಕೂ ಹಬ್ಬಿತ್ತು.

ರಿಯಲ್ ಎಸ್ಟೇಟ್ ಪ್ರಗತಿಯಿಂದ ವಸತಿ ಕ್ಷೇತ್ರದಲ್ಲಿ ಬೆಲೆ ಏರಿಕೆ 2008ರಿಂದ ಕಂಡು ಬಂದಿತ್ತು. ಆದರೆ, 2013ರ ವೇಳೆಗೆ ಬೇರೆ ಬೇರೆ ಆಯಾಮವನ್ನು ಪಡೆದುಕೊಂಡಿತು. ಭಾರಿ ಯೋಜನೆಗಳನ್ನು ಪಡೆದು, ನಿಭಾಯಿಸುವವರಿಗೆ ಮಾತ್ರ ಇದನ್ನು ಪ್ರಯೋಗಿಸಲು ಸಾಧ್ಯವಾಯಿತು. ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಮಂಡ್ಯಗಳಲ್ಲೂ ಇದರ ಪ್ರಯೋಗ ಕಾಣಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: The lobbies of Karnataka
English summary
The lobbies of Karnataka always had a considerable amount of sway in the election process. The lobbies play an important part in the election process which begins with the distribution of tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more