Cauvery water: ಕಾವೇರಿಗಾಗಿ ಮುಂದುವರೆದ ಹೋರಾಟದ ಕಿಚ್ಚು: ಬಿ.ಎಸ್ ಯಡಿಯೂರಪ್ಪ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 31: ನಮ್ಮಲ್ಲಿ ನೀರಿನ ಅಭಾವ ಉಂಟಾಗಿದೆ.ಈ ನಿಟ್ಟಿನಲ್ಲಿ ತಮಿಳುನಾಡಿಗೆ ನೀರು ಬಿಡುವ ಅವಶ್ಯಕತೆಯಿಲ್ಲ, ಸರ್ಕಾರ ನೀರು ಬಿಡಬಾರದು ಸರ್ಕಾರದ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಈ ಕುರಿತು ಗುರುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಯಾವುದೇ ಸಭೆಗಳಿಗೆ ನಾನು ಹೋಗಿಲ್ಲ. ತಮಿಳುನಾಡಿನಲ್ಲಿ ಈಗಾಗಲೆ ಸಾಕಷ್ಟು ನೀರು ಇದೆ ಎಂದು ಹೇಳಿದರು.

ನಮ್ಮ ಶಿವಮೊಗ್ಗದಲ್ಲಿ ಏರ್ಪೋಟ್ ಆಗಲು ರೈತರು ಕಾರಣ. ಸಣ್ಣ ಕಾರಣ ಇಲ್ಲದೆ ಜಮೀನು ಬಿಟ್ಟುಕೊಟ್ರು. ಎಲ್ಲಾ ಗೌರವ ಆ ಭಾಗದ ರೈತರಿಗೆ ಸಲ್ಲಬೇಕು. ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆದಿದೆ. ಬೆಂಗಳೂರು ನಂತರ ದೊಡ್ಡ ವಿಮಾನ ನಿಲ್ಥಾಣ ಶಿವಮೊಗ್ಗದಲ್ಲಿ ಆಗಿದೆ. ಸಹಕಾರ ಕೊಟ್ಟ ರೈತರಿಗೆ ಧನ್ಯವಾದ ತಿಳಿಸುತ್ತೆನೆ. ಇಂದು ನಮ್ಮ ಜೊತೆ ಕೆಲ ರೈತರನ್ನು ಸಹ ವಿಮಾನದಲ್ಲಿ ಕರೆದುಕೊಂಡು ಹೋಗ್ತಿದ್ದೆವೆ ಎಂದು ಹೇಳಿದರು.
ನನ್ನ ಜೊತೆ ಕೆಲ ರೈತರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಕೈಗಾರಿಕೆ, ಬೇರೆ ಕಾರಣಕ್ಕೂ ಅನುಕೂಲ ಆಗಲಿದೆ, ಏರ್ಪೋಟ್ ಆಗಲು ಸಾಧ್ಯವಾದ ಎಲ್ಲರಿಗೂ ಅಭಿನಂದನೆಗಳು.
ಸಂಸದ ರಾಘವೇಂದ್ರಗೆ ಅಭಿನಂದನೆ ಸಲ್ಲಿಸ್ತೇನೆ. ಮುಂದೆ ಓಡಾಡಲು ಬಹಳ ಅನುಕೂಲ ಆಗಲಿದೆ. ಬಹಳ ಸಂತೋಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಆಪರೇಷನ್ ಹಸ್ತ; ಅರಗ ಜ್ಞಾನೇಂದ್ರ ಹೇಳಿದ್ದೇನು?
ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಗಾಳ ಹಾಕಿದ್ದು, ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಗೃಹ ಲಕ್ಷ್ಮೀ ಯೋಜನೆಯನ್ನ ಜಾರಿ ಮಾಡಿದ್ದಾರೆ. ಆದರೆ, ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಅಲ್ಲ, ಅವರು ಮಾಡಿದ್ದರಲ್ಲಿ ತಪ್ಲಿಲ್ಲ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
136 ಜನ ಈಗಾಗಲೇ ಇದ್ದಾರೆ. ಇವರು ಅಲ್ಲಿಗೆ ಹೋಗಿ ಏನು ಮಾಡುತ್ತಾರೆ, ಅವರು ಕರೆದುಕೊಳ್ಳುವ ಅವಶ್ಯಕತೆಗಳನ್ನು ಅವರಿಗೆ ಇಲ್ಲ. ಸರ್ಕಾರ ಕಾರ್ಯಕ್ರಮ, ಇದಕ್ಕೆ ಎಲ್ಲರೂ ಮಾಡಿದ್ದಾರೆ,
ಅದರಂತೆ ಎಸ್.ಟಿ ಸೋಮಶೇಖರ್ ಕೂಡ ಸರ್ಕಾರಿ ಗೃಹಲಕ್ಷ್ಮೀ ಕಾರ್ಯಕ್ರಮ ಮಾಡಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಅಲ್ಲ, ಅವರು ಮಾಡಿದ್ದರಲ್ಲಿ ತಪ್ಲಿಲ್ಲ ಎಂದು ಹೇಳಿದರು.
ಇಂದು ಮೊದಲ ವಿಮಾನ ಲ್ಯಾಂಡಿಂಗ್ ಇದೊಂದು ಐತಿಹಾಸಿಕ ಕ್ಷಣ. ಶಿವಮೊಗ್ಗ ಜನ ಖುಷಿ ಪಡುವ ದಿನ, ಇದೊಂದು ಅಭಿವೃದ್ಧಿ ದಿನ, ಇದರಿಂದ ಕೈಗಾರಿಕಾ ಸ್ಥಾಪನೆ ಅನುಕೂಲ ಆಗಲಿದೆ.
ಯಡಿಯೂರಪ್ಪ ಮತ್ತು ರಾಘವೇಂದ್ರ ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ, ಈ ಏರ್ಪೋರ್ಟ್ ನಿಂದ ಮಧ್ಯ ಕರ್ನಾಟಕಕ್ಕೆ ಬಹಳ ಅನುಕೂಲ ಆಗಲಿದೆ ಎಂದು ಹೇಳಿದರು.












Click it and Unblock the Notifications