ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ಹೆಚ್ಚಳ: 'ಡಬಲ್ ಎಂಜಿನ್' ಸರ್ಕಾರಗಳ ದರೋಡೆ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು ಜುಲೈ 18: ಬಡ ಜನರು, ಮಧ್ಯಮ ವರ್ಗ ಸೇರಿದಂತೆ ಜನಸಾಮಾನ್ಯರ ಹಿತ ಮರೆತು ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ದರೋಡೆ ಮುಂದಾಗಿದೆ. ಇದೊಂದು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ವಿಪಕ್ಷ ನಾಯಕರ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended Video

ಈ ಕಾಂಗ್ರೆಸ್ ನವರಿಗೆ ಕೇಸರಿ ಶಾಲು ಕಂಡ್ರೆ ಯಾಕ್ ಆಗಲ್ಲ ಅಂತ? | *Politics | OneIndia Kannada

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಹಿತ ಕಾಯಬೇಕಾದ ಕೇಂದ್ರ ಸರ್ಕಾರ ತೆರಿಗೆ ಹೇರುವ ಮೂಲಕ ಜನರ ಊಟದ ತಟ್ಟೆಗೆ ಕೈ ಹಾಕುವ ನೀಚತನಕ್ಕೆ ಇಳಿದಿವೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೇಂದ್ರವನ್ನು ಬೆಂಬಲಿಸುತ್ತಿದೆ. ಈ ಮೂಲಕ 'ಡಬ್ಬಲ್ ಎಂಜಿನ್' ಸರ್ಕಾರ ದರೋಡೆ ನಡೆಸುತ್ತಿವೆ ಎಂದು ದೂರಿದರು. ಈ ಕುರಿತು ಅವರು ಸರಣಿ ಟ್ವಿಟ್ ಮಾಡಿ ಕುಟುಕಿದ್ದಾರೆ.

ಮೊಸರು, ಮಜ್ಜಿಗೆ, ಪನ್ನೀರ್‌, ಲಸ್ಸಿ ಹಾಗೂ ಅಕ್ಕಿ, ಗೋದಿ, ಬಾರ್ಲಿ, ಓಟ್ಸ ಗಳ ಮೇಲೆ ಇರಲಿಲ್ಲ. ಇದೀಗ ಅವುಗಳ ಮೇಲೆ ಶೇ. 5%ರಷ್ಟು ಹಾಕಲಾಗಿದೆ. 5,000 ರೂ.ವರೆಗಿನ ಆಸ್ಪತ್ರೆ ಕೊಠಡಿಗಳ ಮೇಲೆ 5% ರಷ್ಟು, 1,000 ರೂಪಾಯಿಯ ಹೋಟೆಲ್‌ ಕೊಠಡಿಗಳಿಗೆ 12% ರಷ್ಟು, ಸೋಲಾರ್‌ ವಾಟರ್‌ ಹೀಟರ್‌ ಮೇಲೆ ಶೇ.5%ರಷ್ಟು ಇದ್ದ ಜಿಎಸ್‌ಟಿ ಅನ್ನು ಶೆ.12%ಕ್ಕೆ ಏರಿಸಲಾಗಿದೆ. ಎಲ್‌ಇಡಿ ಬಲ್ಬಗಳ ಮೇಲೆ ಇದ್ದ ಶೇ.12%ರಷ್ಟು ತೆರಿಗೆ ಇದೀಗ ಶೇ.18%ಕ್ಕೆ ಏರಿಸಲಾಗಿದೆ. ಬ್ಯಾಂಕ್‌ ಚೆಕ್‌ ಪುಸ್ತಕಗಳಿಗೆ 0% ಇದ್ದದ್ದು ಈಗ ಶೇ.18% ಜಿಎಸ್‌ಟಿಗೆ ಹೆಚ್ಚಿಸಲಾಗಿದೆ.

ಜನಸಾಮಾನ್ಯರು, ಬಡವರು ಹಾಗೂ ಮಧ್ಯಮ ವರ್ಗದ ಜನರ ಬದುಕು ಜಿಎಸ್‌ಟಿ ಹೇರಿಕೆಯಿಂದ ಇನ್ನಷ್ಟು ಅಧೋಗತಿಗೆ ತಲುಪಲಿದೆ ಎಂದು ಸಿದ್ದರಾಮ್ಯಯ ಕಿಡಿ ಕಾರಿದ್ದಾರೆ.

ಕರ್ನಾಟಕದಿಂದ ಅಧಿಕ ಜಿಎಸ್‌ಟಿ ಸಂಗ್ರಹ

ಕರ್ನಾಟಕದಿಂದ ಅಧಿಕ ಜಿಎಸ್‌ಟಿ ಸಂಗ್ರಹ

ಕೇಂದ್ರ ಸರ್ಕಾರಕ್ಕೆ ಕಳೆದ 8 ವರ್ಷಗಳಲ್ಲಿ ಕರ್ನಾಟಕ ಒಂದರಿಂದಲೇ 19 ಲಕ್ಷ ಕೋಟಿ ಜಿಎಸ್‌ಟಿ ತೆರಿಗೆ ಪಾವತಿಯಾಗಿದೆ. ಕಳೆದ ಒಂದೇ ವರ್ಷ 3 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 19 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ 1 ಲಕ್ಷದ 29 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ದೊಡ್ಡ ಸಾಧನೆಯಂತೆ ಪ್ರಚಾರ ಮಾಡಿದ್ದರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಅಚ್ಚೇದಿನ್ ಹೆಸರಿನಲ್ಲಿ ಜನರಿಗೆ ದ್ರೋಹ

ಅಚ್ಚೇದಿನ್ ಹೆಸರಿನಲ್ಲಿ ಜನರಿಗೆ ದ್ರೋಹ

ಕರ್ನಾಟಕ್ಕೆ ನಮ್ಮ ತೆರಿಗೆ (ಶೇ.42%) ಪಾಲಿನ ಹಣ ಬಂದಿದ್ದರೆ ಕನಿಷ್ಟ 8 ಲಕ್ಷ ಕೋಟಿ ಬರಬೇಕಿತ್ತು. ಅಚ್ಚೇದಿನ್ ಹೆಸರಲ್ಲಿ ಜನರಿಗೆ ದ್ರೋಹ ಮಾಡಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಅಗತ್ಯವಸ್ತುಗಳ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಉದಾಹರಣೆಗೆ ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಡೀಸೆಲ್‌ ಬೆಲೆ 46 ರೂ. ಇತ್ತು, ಇಂದು ಅದು 95 ರೂ. ಆಗಿದೆ. ಅಂದರೆ ಎರಡು ಪಟ್ಟಾಗಿದೆ. ಪೆಟ್ರೋಲ್‌ 72 ರೂ. ಇತ್ತು, ಈಗ 102 ರೂ. ಆಗಿದೆ. ಗ್ಯಾಸ್‌ 414 ರೂ. ಇತ್ತು, ಈಗದು 1,050 ರೂ. ಆಗಿದೆ. ಗೊಬ್ಬರದ ಬೆಲೆ, ಕಬ್ಬಿಣ, ಸಿಮೆಂಟ್‌ ಬೆಲೆ ಎರಡು ಪಟ್ಟಾಗಿದೆ. ಅಚ್ಚೇದಿನ್‌ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಹೇಗೆ ಜನರ ರಕ್ತವನ್ನು ತೆರಿಗೆ ರೂಪದಲ್ಲಿ ಕುಡಿದಿದ್ದಾರೆ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ಎಂದು ವಿವರಿಸಿದರು.

ಆಹಾರ ಧಾನ್ಯ, ಹಾಲಿನ ಉತ್ಪನ್ನಕ್ಕೆ ಶೇ.5ಜಿಎಸ್‌ಟಿ

ಆಹಾರ ಧಾನ್ಯ, ಹಾಲಿನ ಉತ್ಪನ್ನಕ್ಕೆ ಶೇ.5ಜಿಎಸ್‌ಟಿ

ನಿರಂತರವಾಗಿ ಜಿಎಸ್‌ಟಿ ಹೆಚ್ಚಿಸಿದ್ದಲ್ಲದೇ ಇದೀಗ ಮತ್ತೆ ಉತ್ಪನ್ನಗಳ ಮೇಲೆ ಶೇ.5ರಷ್ಟು ಜಿಎಸ್‌ ಟಿ ವಿಧಿಸಲಾಗಿದೆ. ರೈತರ ಹಣ್ಣು, ತರಕಾರಿಗಳನ್ನು ಬೇರ್ಪಡಿಸುವ ಉಪಕರಣಗಳ ಮೇಲೆ ಇದ್ದ ಶೇ.5 ತೆರಿಗೆಯನ್ನು ಶೇ.18ಕ್ಕೆ ಹೆಚ್ಚಿಸಲಾಗಿದೆ. ಬಾವಿಗಳಿಂದ ನೀರೆತ್ತಲು ಬಳಸುವ ಸಬ್‌ ಮೆರಿನ್‌ ಪಂಪ್ ಹಾಗೂ ಮೋಟಾರ್‌ಗಳಿಗೆ ಹಾಲಿ ಶೇ.12 ತೆರಿಗೆಯನ್ನು ಇದೀಗ ಶೇ.18ಕ್ಕೆ ಏರಿಸಲಾಗಿದೆ. ಬರೆಯುವ ಹಾಗೂ ಮುದ್ರಿಸುವ ಇಂಕ್‌ ಗಳ ಮೇಲಿನ ತೆರಿಗೆ ಶೇ. 12ರಿಂದ ಶೇ.18ಕ್ಕೆ ಏರಿಕೆ ಆದರೆ, ಇಟ್ಟಿಗೆ ತಯಾರಿಸುವ ಜಾಗ್ ವರ್ಕ್‌ ಗಳ ಮೇಲಿನ ಜಿಎಸ್ ಟಿ ಯನ್ನು ಶೇ.5ರಿಂದ ಶೇ.12ಗೆ ಅಧಿಕಗೊಂಡಿದೆ.

ಇನ್ನು ಶೈಕ್ಷಣಿಕ ಬಳಕೆಯ ಭೂಪಟ, ಗ್ಲೋಬ್‌ ಗಳ ಮೇಲೆ ಈವರೆಗೆ ತೆರಿಗೆ ಇರಲಿಲ್ಲ. ಅವುಗಳ ಮೇಲೂ ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಶೇ. 12ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಇದು ನರೇಂದ್ರ ಮೋದಿ ಅವರ ಅಚ್ಚೇದಿನ್ ಭಾಗವೇ? ಎಂದು ಸಿದ್ದರಾಮ್ಯ ಪ್ರಶ್ನಿಸಿದ್ದಾರೆ.

ಕಾರ್ಪೋರೇಟ್‌ ತೆರಿಗೆ ಶೇ.30ರಿಂದ 22ಕ್ಕೆ ಇಳಿಸಲಾಗಿದೆ. ಬಡವರ ಮೇಲೆ ತೆರಿಗೆ ಹಾಕಲಾಗಿದೆ. ನಿರುದ್ಯೋಗಿಗಳಿಗೆ, ರೈತರಿಗೆ, ಕೂಲಿಕಾರರಿಗೆ, ಬೀದಿ ವ್ಯಾಪಾರಿಗಳಿಗೆ ಇಂದರಿಂದ ತೊಂದರೆಯಾಗುತ್ತದೆ. ಬಿಜೆಪಿ ಸರ್ಕಾರಗಳು ಜನರಿಗೆ ಬೆಲೆ ಏರಿಕೆ, ನಿರುದ್ಯೋಗ, ರೈತರಿಗೆ ಗೊಬ್ಬರ ಕೊರತೆ ಆಗಿರುವ ಬಗ್ಗೆ ಮಾತನಾಡುವುದಿಲ್ಲ. ರೈತರಿಗೆ ಅಗತ್ಯ ಗೊಬ್ಬರ ಕೊಡೋಕೆ ಸರ್ಕಾರದಿಂದ ಆಗುತ್ತಿಲ್ಲ ಎಂದು ಆರೋಪಿಸಿದರು.

ಕೈಗಾರಿಕೆಗಳಲ್ಲಿ ಉದ್ಯೋಗ ಪ್ರಮಾಣ ಇಳಿಕೆ

ಕೈಗಾರಿಕೆಗಳಲ್ಲಿ ಉದ್ಯೋಗ ಪ್ರಮಾಣ ಇಳಿಕೆ

ಜಿಎಸ್‌ಟಿ ಜಾರಿ ನಂತರ ಶೇ.60% ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಕೈಗಾರಿಕೆಗಳಲ್ಲಿ ಇದ್ದ ಸುಮಾರು 10 ಕೋಟಿ ಉದ್ಯೋಗ ಎರಡೂವರೆ ಕೋಟಿಗೆ ಇಳಿದಿದೆ. ನಿರುದ್ಯೋಗ ದರ 8% ಆಗಿದೆ. ಇದು ಇಂದಿನ ನಿರುದ್ಯೋಗದ ನೈಜ ಮುಖ. ಐದು ಟ್ರಿಲಿಯನ್‌ ಡಾಲರ್‌ ಎಕಾನಮಿ ಮಾಡುತ್ತೇವೆ ಎಂದು ಜನರಿಗೆ ಸುಳ್ಳು ಹೇಳಿದ್ದರು. ನಾ ಖಾವೂಂಗ, ನಾ ಖಾನೆದೂಂಗ ಎಂದು ಹೇಳುತ್ತಿದ್ದರು. ರಾಜ್ಯದಲ್ಲಿ 40% ಕಮಿಷನ್‌ ಸರ್ಕಾರ ಇದೆ ಎಂದು ಜಗಜ್ಜಾಹೀರಾಗಿದೆ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಕಾಮಗಾರಿಯ ಹಣ ಸಿಗದೆ ಆತ್ಮಹತ್ಯೆ ಮಾಡಿಕೊಂಡ. ಈಶ್ವರಪ್ಪ ರಾಜೀನಾಮೆ ನೀಡಿದರು. ಇದೇ ಮೊದಲು ಇಂತಹ ಘಟನೆ ನಡೆದಿರುವುದು ಎಂದು ಬಿಜೆಪಿ ಆಡಳಿತ ಕುರಿತು ತಿವಿದರು.


ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಜೊತೆಗೆ 30 ಹೊಸ ಯೋಜನೆ ಜಾರಿಗೊಳಿಸಿದ್ದೇವೆ. ಈಗ 2018ರಲ್ಲಿ ಬಿಜೆಪಿಯವರು ಜನರಿಗೆ ನೀಡಿದ್ದ ಭರವಸೆಗಳಲ್ಲಿ 20% ಕೂಡ ಈಡೇರಿಸಿಲ್ಲ. ಪಿಎಸ್ಐ ನೇಮಕಾತಿಯಲ್ಲಿ 545 ಅಭ್ಯರ್ಥಿಗಳ ಪೈಕಿ 300 ಜನರಿಂದ ಹಣ ಪಡೆದು ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ. ಸುಮಾರು 50 ಜನರ ಬಂಧನವಾಗಿದೆ. ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ನಡೆದಿಲ್ಲ ಎಂದು ಸದನದಲ್ಲಿ ಸರ್ಕಾರ ಉತ್ತರಿಸಿತ್ತು. ದೊಡ್ಡಮಟ್ಟದ ಹಗರನ ಮೂಲಕ ರಾಜ್ಯದಲ್ಲಿ ಶೇ.40 ಕಮಿಷನ್‌ ಸರ್ಕಾರ ಇದೆ ಎಂದು ಕೆಲವು ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಚಾಮುಂಡೇಶ್ವರಿಯಿಂದ ಸ್ಪರ್ಧಿಸಲ್ಲ

ಚಾಮುಂಡೇಶ್ವರಿಯಿಂದ ಸ್ಪರ್ಧಿಸಲ್ಲ

ರಾಜ್ಯಕ್ಕೆ 5,495 ಕೋಟಿ ವಿಶೇಷ ಅನುದಾನ ಕೊಡಬೇಕು ಎಂದು ಹಣಕಾಸು ಆಯೋಗದವರು ಶಿಫಾರಸು ಮಾಡಿದ್ದರು. 14 ಹಾಗೂ 15ನೇ ಹಣಕಾಸು ಆಯೋಗದನ್ವಯ ಕರ್ನಾಟಕದ ಪಾಲು ಶೇ.1.07 ಕಡಿಮೆ ಆಗಿದ್ದರಿಂದ 5,495 ಕೋಟಿ ರೂ. ಕೊಡುವುದು ಬೇಡ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಮುಂದಿನ ಚುನಾವಣೆಳಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಲ್ಲ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಜನ ನನ್ನನ್ನು ಸೋಲಿಸಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದ ಸ್ಪರ್ಧೆ ಮಾಡಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

English summary
Forgetting the welfare of common people the Union government that has started robbery by imposition Goods and Service Tax (GST) on daily use items, Double Engine government it is Robbery government, said former Karnataka CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X