ಬಿಎಫ್.7 ರೂಪಾಂತರಿ ವೈರಸ್ ಅಪಾಯಕಾರಿಯಲ್ಲ, ಆದರೆ
ಬೆಂಗಳೂರು, ಡಿಸೆಂಬರ್ 28: ಕೋವಿಡ್ 19ನ ಬಿಎಫ್. 7 ರೂಪಾಂತರಿ ವೈರಸ್ ಕಡಿಮೆ ಪರಿಣಾಮದೊಂದಿಗೆ ಹರಡುತ್ತದೆ. ಆದರೆ ಹಿರಿಯ ನಾಗರಿಕರು, ಮಕ್ಕಳು ಮತ್ತು ಗರ್ಭಿಣಿಯರು ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.
ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಪರಿಸ್ಥಿತಿ ಎದುರಿಸಲು ಸಿದ್ಧತೆಯನ್ನು ಪರಿಶೀಲಿಸಲು ಕೋವಿಡ್ ಪ್ರತಿಕ್ರಿಯೆಯ ಅಣಕು ಕಸರತ್ತುಗಳು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳು ಮತ್ತು ತಾಲೂಕುಗಳಲ್ಲಿ ಜಾರಿಯಲ್ಲಿವೆ. ಬಿಎಫ್. 7 ಓಮಿಕ್ರಾನ್‌ನ ಉಪ ತಳಿಯಾಗಿದೆ. ಆದರೆ ಇತರ ರೂಪಾಂತರಿ ವೈರಸ್‌ಗಳ ನಡುವಿನ ವ್ಯತ್ಯಾಸವೆಂದರೆ ಅದರ ಹರಡುವಿಕೆಯ ಪ್ರಮಾಣವು ಹೆಚ್ಚಾಗಿರುತ್ತದೆ. ಆದರೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸುಧಾಕರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಆದಾಗ್ಯೂ, ಇತರ ದೇಶಗಳಲ್ಲಿ ಕೋವಿಡ್ ವರದಿಗಳು ವಯಸ್ಸಾದವರಲ್ಲಿ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರಲ್ಲಿ ವೈರಸ್ ಪರಿಣಾಮ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ಸೂಚಿಸಿದೆ. ನಾವು ವಯಸ್ಸಾದವರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಲ್ಲದೆ ಗರ್ಭಿಣಿಯರು ಮತ್ತು ಮಕ್ಕಳಿಗೆ ಪ್ರಾಮುಖ್ಯತೆಯನ್ನು ನೀಡಿದ್ದೇವೆ. ಹೆಚ್ಚಿನ ಜನರು ಸೇರುವ ಸ್ಥಳಗಳು ಅಥವಾ ಚಟುವಟಿಕೆಗಳನ್ನು ತಪ್ಪಿಸಲು ಮತ್ತು ಅನಿವಾರ್ಯವಾದರೆ ಮುಖಗವಸುಗಳನ್ನು ಧರಿಸಲು ಅವರಿಗೆ ಸಲಹೆ ನೀಡಿದ್ದೇವೆ ಎಂದು ಅವರು ತಿಳಿಸಿದರು.

ಜಾಗತಿಕವಾಗಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಿಸಿರುವ ಕರ್ನಾಟಕ ಸರ್ಕಾರವು ಸೋಮವಾರ ಸಿನಿಮಾ ಥಿಯೇಟರ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಾಸ್ಕ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಿದೆ. ಅಧಿಕ ಜನ ಸೇರುವುದನ್ನು ತಪ್ಪಿಸಲು ಹಿರಿಯರು ಸೇರಿದಂತೆ ಜನರಿಗೆ ಮಾಹಿತಿ ನೀಡಿದೆ.

ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳಲ್ಲಿ ಭೇಟಿ ನೀಡುವವರಿಗೆ ಎರಡು ಡೋಸ್ ಕೋವಿಡ್ ವ್ಯಾಕ್ಸಿನೇಷನ್ ಕಡ್ಡಾಯವಾಗಿದೆ. ಇದು ಜನವರಿ 1 ರಂದು ಬೆಳಿಗ್ಗೆ 1 ಗಂಟೆಗೆ ಕೊನೆಗೊಳ್ಳುವ ಹೊಸ ವರ್ಷದ ಆಚರಣೆಗೆ ಆಸನ ಸಾಮರ್ಥ್ಯದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಅದು ಹೇಳಿದೆ. ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಕಟ್ಟೆಚ್ಚರ ವಹಿಸುವ ಕುರಿತು ಕೇಳಿದ ಪ್ರಶ್ನೆ ಸುಧಾಕರ್, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ಕೇಂದ್ರವು ರಾಜ್ಯಗಳಿಗೆ ಸೂಚನೆ ನೀಡಿದೆ. ನೆರೆಯ ರಾಜ್ಯದಲ್ಲೂ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿರುವ ಸ್ಥಳಗಳಲ್ಲಿ ಕಾವಲು ಕಾಯಲು ಸೂಚನೆ ನೀಡಲಾಗಿದೆ ಎಂದರು.












Click it and Unblock the Notifications