ಕರ್ನಾಟಕದಲ್ಲಿ ರಣಭೀಕರ ಬಿಸಿಲು: ಈ ಎಚ್ಚರಿಕೆ ಇರಲಿ!
ಕರ್ನಾಟಕದಲ್ಲಿ ರಣಭೀಕರ ಬಿರುಬಿಸಿಲು ಕಾಣಿಸಿಕೊಂಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದರೆ. ಕರ್ನಾಟಕದಲ್ಲಿ ರಣಭೀಕರ ಬಿಸಿಲು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಸಂಭವಿಸಿದ ಸೈಕ್ಲೋನ್‌ನಿಂದಾಗಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ. ಮುಂದಿನ 5 ದಿನಗಳ ವರೆಗೆ ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ ಇಲ್ಲ ಎಂದು ಐಎಂಡಿ ವರದಿ ತಿಳಿಸಿದೆ.
ಇನ್ನು ಕರ್ನಾಟಕದ ವಿವಿಧ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ರಾಜ್ಯದಾದ್ಯಂತ ರಣಭೀರಕ ಬಿಸಿಲು ಇರಲಿದೆ. ಕೆಲವು ಜಿಲ್ಲೆಗಳಲ್ಲಿ ಮಳೆಯೂ ಆಗಲಿದೆ ಅಂತ ಐಎಂಡಿ ರಿಪೋರ್ಟ್ ತಿಳಿಸಿದೆ. ಯಾವೆಲ್ಲಾ ಭಾಗದಲ್ಲಿ ಬಿರುಬಿಸಿಲು ಇರಲಿದೆ. ಹವಾಮಾನ ಇಲಾಖೆ ಬಿಸಿಲು ಹೆಚ್ಚಾಗಿರುವ ಪ್ರದೇಶದ ಜನಗಳಿಗೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಪಶ್ಚಿಮ ಈಕ್ವಟೋರಿಯಲ್ ಹಿಂದೂ ಮಹಾಸಾಗರ ಮತ್ತು ಪಕ್ಕದ ಮಾಲ್ಡೀವ್ಸ್ ಪ್ರದೇಶದ ಮೇಲೆ ಸೈಕ್ಲೋನಿಕ್ ಪರಿಚಲನೆಯು ಸಮುದ್ರಮಟ್ಟದಿಂದ ಸರಾಸರಿ 5.8 ಕಿ.ಮೀ ವರೆಗೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರಿಂದ ಕೆಲವು ಭಾಗದಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್ 14ರಂದು ಭಾರೀ ಬಿಸಿಲು ಇರಲಿದೆ ಎನ್ನುವ ಮುನ್ಸೂಚನೆ ಇಲ್ಲಿದೆ.
ರಣಭೀಕರ ಬಿಸಿಲು ಇರಲಿದೆ: ಕಳೆದ ವರ್ಷ ಕರ್ನಾಟಕದಲ್ಲಿ ರಣಭೀಕರ ಬಿಸಿಲು ಕಾಣಿಸಿಕೊಂಡಿತ್ತು. ಹಿಂದೆಂದೂ ಇರದಷ್ಟು ಬಿಸಿಲು ಕಾಣಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಬಿಸಿಲಿಗೆ ಕರ್ನಾಟಕ ಸಾಕ್ಷಿಯಾಗಲಿದೆ. ಮಾರ್ಚ್ 15ರ ವರೆಗೆ ರಾಜ್ಯದಲ್ಲಿ ಭಯಂಕರ ಬಿಸಿಲು ಇರಲಿದೆ. ಮಾರ್ಚ್ 16ಕ್ಕೆ ಮಳೆ ಆಗಲಿದೆ ಎಂದು ಐಎಂಡಿ ರಿಪೋರ್ಟ್ ಹೇಳಿದೆ.

ತಾಪಮಾನ ಮುನ್ಸೂಚನೆ: ಉತ್ತರ ಕರ್ನಾಟಕದಲ್ಲಿ ಮುಂದಿನ 5 ದಿನಗಳ ವರೆಗೆ ಬಿಸಿಲು ಹೆಚ್ಚಾಗಲಿದೆ. ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 5 ದಿನಗಳ ವರೆಗೆ ಗರಿಷ್ಠ ತಾಪಮಾನದಲ್ಲಿ ಮಹತ್ವದ ಬದಲಾವಣೆಗಳು ಇಲ್ಲ ಎಂದು ಹೇಳಲಾಗಿದೆ. ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಭಾರೀ ಬಿಸಿಲು ಇರಲಿದೆ.
ಬೆಂಗಳೂರಿನಲ್ಲಿ ಹವಾಮಾನ ಹೇಗಿದೆ ?
ಬೆಂಗಳೂರಿನಲ್ಲಿ ಮುಂದಿನ 5 ದಿನಗಳ ವರೆಗೆ ಮಳೆ ಇರುವುದಿಲ್ಲ. ಮುಖ್ಯವಾಗಿ ಶುಭ್ರ ಆಕಾಶ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಐಎಂಡಿ ವರದಿ ತಿಳಿಸಿದೆ.
ರೈತರಿಗೆ ಐಎಂಡಿ ಸಲಹೆ: ಟೋಫಿ ಅಥವಾ ಛತ್ರಿ ಬಳಸಿ. ನಿಮ್ಮ ಕುತ್ತಿಗೆ, ಮುಖ ಹಾಗೂ ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಗಳನ್ನು ಬಳಸಿ. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಹಾಗೂ ಕುಡಿಯುವುದಕ್ಕೆ ನೀರಿನ ವ್ಯವಸ್ಥೆ ಇರಲಿ ಎಂದು ಐಎಂಡಿ ಸಲಹೆ ನೀಡಿದೆ.
ಕ್ರೀಡಾಪಟುಗಳು: ಮಧ್ಯಾಹ್ನ 12ರಿಂದ 3 ಗಂಟೆಯ ವರೆಗೆ ಕಠಿಣ ಚಟುವಟಿಕೆಗಳು ಹಾಗೂ ಹೊರಗೆ ಕೆಲಸ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
ಪ್ರಯಾಣಿಕರು: ಇನ್ನು ಪ್ರಯಾಣ ಮಾಡುವವರು ನೀರು, ಜ್ಯೂಸ್, ಮಜ್ಜಿಗೆಯನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಸಾಧ್ಯವಾದಷ್ಟು ಮಧ್ಯಾಹ್ನ 12ರಿಂದ 3ಗಂಟೆಯ ವರೆಗೆ ನೇರ ಸೂರ್ಯನ ಕಿರಣಗಳು ನಿಮ್ಮ ಮೇಲೆ ಬೀಳದಂತೆ ನೋಡಿಕೊಳ್ಳಿ ಎಂದು ಐಎಂಡಿ ರಿಪೋರ್ಟ್ ಹೇಳಿದೆ.












Click it and Unblock the Notifications