ಕರ್ನಾಟಕದಿಂದ 15 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತೆಲಂಗಾಣ
ಬೆಂಗಳೂರು, ಆಗಸ್ಟ್ 9: ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ 15 ಟಿಎಂಸಿ ನೀರು ಬಿಡುವಂತೆ ತೆಲಂಗಾಣ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಈ ಕುರಿತು ತೆಲಂಗಾಣ ಜಲ ಸಂಪನ್ಮೂಲ ಸಚಿವ ಟಿ ಹರೀಶ್ ರಾವ್ ಕರ್ನಾಟಕ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಗೆ ಪತ್ರ ಬರೆದಿದ್ದಾರೆ.

ಸದ್ಯ ನಾಗಾರ್ಜುನಸಾಗರ ಜಲಾಶಯದಿಂದ ಪುಟ್ಟಮ್ಗಂಡಿ ನೀರಾವರಿ ಯೋಜನೆ ಮೂಲಕ ಇಲ್ಲಿನ ಸುತ್ತ ಮುತ್ತಲ ಭಾಗಗಳಿಗೆ ಕುಡಿಯುವ ನೀರು ನೀಡಲಾಗುತ್ತಿದೆ. ಆದರೆ ಜಲಾಶಯದ ಡೆಡ್ ಸ್ಟೋರೇಜ್ ಮಟ್ಟ 500.50 ಅಡಿ ಆಗಿದ್ದು, ಈಗಾಗಲೇ 510 ಅಡಿ ತಲುಪಿದೆ. ಕರ್ನಾಟಕದಿಂದ ನಾಗರ್ಜುನ ಸಾಗರಕ್ಕೆ ನೀರು ಬರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜನರಿಗೆ ನೀರು ಕೊಡಲು ಸಾಧ್ಯವಿಲ್ಲ," ಎಂದು ರಾವ್ ಪತ್ರದಲ್ಲಿ ಹೇಳಿದ್ದಾರೆ.












Click it and Unblock the Notifications