ಕರ್ನಾಟಕದಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಸೋತಿದೆ

ಬೆಂಗಳೂರು, ನವೆಂಬರ್‌ 30: ಕಾಂಗ್ರೆಸ್‌ ಪಕ್ಷಕ್ಕೆ ಇದೀಗ ಕರ್ನಾಟಕಕ್ಕಿಂತಲೂ ತೆಲಂಗಾಣ ಚುನಾವಣೆ ಮುಖ್ಯವಾಗಿದೆ. ಕನ್ನಡಿಗರ ಕಿವಿ ಮೇಲೆ ಹೂವಿಟ್ಟಂತೆ ಅಲ್ಲಿಯೂ ಕಾಂಗ್ರೆಸ್ ಇಡುತ್ತಿರುವ ಕಲರ್ ಕಲರ್ ಹೂವುಗಳು ಎಂದು ರಾಜ್ಯ ಬಿಜೆಪಿ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಇಡುತ್ತಿರುವ ಕಲರ್ ಕಲರ್ ಹೂವುಗಳು ಎಂದು ಬಿಜೆಪಿ ಟ್ವೀಟ್‌

▪ ದಿನಕ್ಕೆ 24 ಗಂಟೆ ಪ್ರತಿ ಮನೆಗೆ ಉಚಿತ ವಿದ್ಯುತ್, ಕರ್ನಾಟಕದಲ್ಲಿ ಇಲ್ಲ..!

▪ ಮನೆ ಯಜಮಾನಿಗೆ 4 ಸಾವಿರ ಹಣ ಕೊಡುತ್ತೇವೆ, ಕರ್ನಾಟಕದಲ್ಲಿ 2 ಸಾವಿರ ಸಿಗುತ್ತಿಲ್ಲ..!

▪ ಯುವಕರಿಗೆ ಉದ್ಯೋಗ, ಯುವ ನಿಧಿ ಮೂಲಕ‌ 3 ಸಾವಿರ ವೇತನ, ಕರ್ನಾಟಕದಲ್ಲಿ ಜಾರಿಗೆ ಬಂದೇ ಇಲ್ಲ..!

Telangana Election Is More Important Than Karnataka For Congress Says BJP

▪ ಮಹಿಳೆಯರಿಗೆ ಉಚಿತ ಪ್ರಯಾಣ, ಕರ್ನಾಟಕದಂತೆ ತೆಲಂಗಾಣ ಸಾರಿಗೆ‌ ನಿಗಮಗಳು‌ ದಿವಾಳಿ ನಿಶ್ಚಿತ..!

▪ ಅನ್ನಭಾಗ್ಯ 10 ಕೆಜಿ ಅಕ್ಕಿ ಉಚಿತ, ಕರ್ನಾಟಕದಲ್ಲಿ ಮೋದಿ ಸರ್ಕಾರದ 5 ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ..!

ಸುಳ್ಳು ಹೇಳಿ ಅಧಿಕಾರ‌ ಹಿಡಿದ ಕಾಂಗ್ರೆಸ್, ಕರ್ನಾಟಕದಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಸೋತಿದೆ. ಈಗ ತೆಲಂಗಾಣದಲ್ಲಿ ಅದೇ ಸುಳ್ಳನ್ನು ಮತ್ತೆ ಹೇಳಿ, ರಾಜ್ಯದ ಅಮಾಯಕ ಜನರಿಗೆ ಟೋಪಿ ಹಾಕುವ ಯೋಜನೆಯಲ್ಲಿ ಕಾಂಗ್ರೆಸ್ ಇದೆ ಎಂದು ಬಿಜೆಪಿ ಟ್ವೀಟ್‌ ಮೂಲಕ ಕುಟುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+