ಕರ್ನಾಟಕದ ತೆಲುಗು ಜನ ಜೆಡಿಎಸ್‌ಗೆ ಬೆಂಬಲಿಸಿ: ಕೆಸಿಆರ್‌ ಕರೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಕರ್ನಾಟಕದಲ್ಲಿರುವ ತೆಲುಗು ಭಾಷಿಕರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್‌) ಕರೆ ನೀಡಿದರು.

ಇಂದು ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಒಗ್ಗೂಡುವ ಬಗ್ಗೆ ಮಾತನಾಡಿದ ಅವರು ಆ ನಂತರ ಸುದ್ದಿಗಾರ ಮೂಲಕ ತೆಲುಗು ಜನಗಳು ಜೆಡಿಎಸ್‌ಗೆ ಬೆಂಬಲ ನೀಡಲು ಕೋರಿದರು.

ಎಚ್.ಎಂ.ರೇವಣ್ಣ ಚನ್ನಪಟ್ಟಣ ಸ್ಪರ್ಧೆ ಕಾರಣ ಬಿಚ್ಚಿಟ್ಟ ದೇವೇಗೌಡರು

ಜೆಡಿಎಸ್ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿಯೂ ಹೇಳಿದ ಕೆಸಿಆರ್ ಅವರು, ಹೈದರಾಬಾದ್ ಕರ್ನಾಟಕ ಸೇರಿದಂತೆ ತೆಲುಗು ಜನ ಹೆಚ್ಚಿಗಿರುವ ಪ್ರದೇಶದಲ್ಲಿ ಸ್ವತಃ ಕೆಸಿಆರ್‌ ಅವರೇ ಜೆಡಿಎಸ್ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದರು.

Telangana CM KCR call Telugu people to vote JDS

ಈಗಾಗಲೇ ಮಾಯಾವತಿ ಹಾಗೂ ಎನ್‌ಸಿಪಿ ಅವರುಗಳೊಂದಿಗೆ ಮೈತ್ರಿ ಮಾಡಿಕೊಮಡಿರುವ ಜೆಡಿಎಸ್‌ ಇದೀಗ ಕೆಸಿಆರ್‌ ಅವರ ಬೆಂಬಲವನ್ನೂ ಗಿಟ್ಟಿಸಿದೆ. ಆದರೆ ಇದು ಚುನಾವಣೆಯಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದು ಕಾದು ನೋಡಬೇಕಿದೆ.

ಜೆಡಿಎಸ್ ಎಷ್ಟು ಸೀಟು ಗೆಲ್ಲಲಿದೆ? ಸಿದ್ದರಾಮಯ್ಯ ನುಡಿದ ಭವಿಷ್ಯ

ಮುಂದಿನ ವಾರದಲ್ಲಿ ಜೆಡಿಎಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ ಎಂದು ಇದೇ ಸಂದರ್ಭದಲ್ಲಿ ದೇವೇಗೌಡ ಅವರು ಹೇಳಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ, ನಟ ಪ್ರಕಾಶ್ ರೈ ಹಾಜರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Telangana CM K.Chandrashekhar Rao told 'All Karnataka Telugu people vote JDS. He said He and his party members will participate in the JDS campaign. Deve Gowda said JDS manifesto will release in next week.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ