Tejasvi Surya: ಇಂಡಿಗೋ ವಿಮಾನದಲ್ಲಿ ಎಡವಟ್ಟು, ವ್ಯಾಪಕ ಟ್ರೋಲ್
ಚೆನ್ನೈ, ಜನವರಿ 18: ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ಡಿಸೆಂಬರ್ 10, 2022 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಯಾವುದೇ ಅನುಮತಿಯಿಲ್ಲದೆ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದರಿಂದ ನೆಟ್ಟಿಗರಿಂದ ಭಾರೀ ಟೀಕೆಗಳು ವ್ಯಕ್ತವಾಗಿದೆ.
ಕಳೆದ ತಿಂಗಳು ಸಂಸದ ತೇಜಸ್ವಿ ಸೂರ್ಯ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ಆಕಸ್ಮಿಕವಾಗಿ ತೆರೆದಿದ್ದರು. ಆದರೆ ಅವರು ಕ್ಷಮೆಯಾಚಿಸಿದ ನಂತರ ವಿಮಾನಯಾನ ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಟ್ಟುನಿಟ್ಟಾದ ಇಂಜಿನಿಯರಿಂಗ್ ತಪಾಸಣೆಯ ನಂತರವೇ ವಿಮಾನವು ತನ್ನ ಗಮ್ಯಸ್ಥಾನವಾದ ತಿರುಚಿರಾಪಳ್ಳಿಗೆ ಟೇಕ್ ಆಫ್ ಆದ ಕಾರಣ ವಿಮಾನವು ವಿಳಂಬವಾಯಿತು.
ಪ್ರಯಾಣಿಕ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಂಬ ವರದಿಗಳು ಪ್ರತಿಪಕ್ಷಗಳ ದಾಳಿಗೆ ಉತ್ತೇಜನ ನೀಡಿದ್ದು, ಇಂತಹ ಗಂಭೀರ ಘಟನೆಯನ್ನು ಕೇವಲ ಕ್ಷಮೆಯಾಚನೆಯೊಂದಿಗೆ ಏಕೆ ಮುಚ್ಚಿಡಲಾಗಿದೆ ಎಂದು ಅನೇಕ ನಾಯಕರು ಪ್ರಶ್ನಿಸಿದ್ದಾರೆ. ತೇಜಸ್ವಿ ಸೂರ್ಯ ಅವರ ಈ ಎಡವಟ್ಟನ್ನು ತಮಿಳುನಾಡಿನ ವಿದ್ಯುತ್ ಇಲಾಖೆ ಸಚಿವರೊಬ್ಬರು ಬಹಿರಂಗ ಮಾಡಿದ್ದರು.

ಇಂಡಿಗೋ ವಿಮಾನ ಸಂಸ್ಥೆ ನಿನ್ನೆ ಹೇಳಿಕೆಯಲ್ಲಿ, ಡಿಸೆಂಬರ್ 10 ರಂದು ಚೆನ್ನೈನಿಂದ ತಿರುಚಿರಾಪಳ್ಳಿಗೆ 6ಇ 7339 ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನವು ಟಾರ್ಮ್ಯಾಕ್‌ನಲ್ಲಿದ್ದಾಗ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಆಕಸ್ಮಿಕವಾಗಿ ತುರ್ತು ನಿರ್ಗಮನವನ್ನು ತೆರೆದರು ಎಂದು ತಿಳಿಸಿದೆ. ಆದರೆ ಸಂಸದರು ಈ ಕ್ರಮಕ್ಕಾಗಿ ತಕ್ಷಣವೇ ಕ್ಷಮೆಯಾಚಿಸಿದರು. ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಪ್ರಕಾರ ವಿಮಾನವು ಕಡ್ಡಾಯ ಎಂಜಿನಿಯರಿಂಗ್ ತಪಾಸಣೆಗೆ ಒಳಗಾಯಿತು. ಇದು ವಿಮಾನದ ನಿರ್ಗಮನದಲ್ಲಿ ವಿಳಂಬಕ್ಕೆ ಕಾರಣವಾಯಿತು ಎಂದು ವಿಮಾನಯಾನ ಸಂಸ್ಥೆಯು ಹೆಸರನ್ನು ಬಹಿರಂಗಪಡಿಸಲಿಲ್ಲ.
ಪ್ರಯಾಣಿಕರು ತಪ್ಪಾಗಿ ಬಲಗೈ ತುರ್ತು ನಿರ್ಗಮನವನ್ನು ತೆರೆದಿದ್ದರು. ಅವರ ಈ ಕ್ರಮದಿಂದಾಗಿ ವಿಮಾನವು ಎರಡು ಗಂಟೆಗಳಿಗೂ ಹೆಚ್ಚು ವಿಳಂಬವಾಗಿದೆ. ಆದರೆ ಸುರಕ್ಷತೆಗೆ ಧಕ್ಕೆಯಾಗಿಲ್ಲ ಎಂದು ವಾಯುಯಾನ ನಿಯಂತ್ರಕ ನಿರ್ದೇಶನಾಲಯದ ಜನರಲ್ ಆಫ್ ಸಿವಿಲ್ ಏವಿಯೇಷನ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ಎಡವಟ್ಟನ್ನು ಸಿಬ್ಬಂದಿ ಗಮನಕ್ಕೆ ತಂದರು. ಬಳಿಕ ನಿರ್ಗಮನಕ್ಕಾಗಿ ವಿಮಾನವನ್ನು ಸಜ್ಜು ಮಾಡುವ ಮೊದಲು ಬಾಗಿಲಿನ್ನು ಹಾಕಲಾಯಿತು. ಪರಿಶೀಲನೆಯಂತಹ ಎಲ್ಲಾ ಸೂಕ್ತ ವಾಯುಯೋಗ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. ಯಾವುದೇ ಸುರಕ್ಷತೆಗೆ ಧಕ್ಕೆಯಾಗಿಲ್ಲ ಎಂದು ಡಿಜಿಸಿಎ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನ ಎಂದು ರಾಜ್ಯ ಕಾಂಗ್ರೆಸ್ ಟೀಕೆ ಬುಧವಾರ ಟೀಕೆ ಮಾಡಿದೆ.

ಈ ಕಪಿಚೇಷ್ಟೆ ನಡೆಸಿದ್ದಿದ್ದರೆ ಸಂಭವಿಸುವ ಅನಾಹುತಕ್ಕೆ ಯಾರು ಹೊಣೆಯಾಗುತ್ತಿದ್ದರು ಪ್ರಧಾನಿ ಮೋದಿಯವರೇ? ಈ ಬಗ್ಗೆ ತನಿಖೆ ಮಾಡುತ್ತಿಲ್ಲವೇಕೆ? ತೇಜಸ್ವಿ ಸೂರ್ಯ ಸಂಸದನಾಗಿದ್ದು, ಮಕ್ಕಳ ಕೈಗೆ ಆಟಿಕೆ ಸಿಕ್ಕಂತಾಗಿದೆ ಎಂದು ಆರೋಪಿಸಿದೆ. ತೇಜಸ್ವಿ ಸೂರ್ಯ ಅವರ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಹಲವು ಜನರಿಂದ ಟೀಕೆಗಳು ವ್ಯಕ್ತವಾಗಿವೆ.












Click it and Unblock the Notifications