• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಮಾದರಿಯಲ್ಲಿ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಟಾಸ್ಕ್‌ಫೋರ್ಸ್ ರಚನೆ

|
Google Oneindia Kannada News

ಬೆಂಗಳೂರು, ಮೇ 06: ಐಐಟಿ ಮಾದರಿಯಲ್ಲಿ ರಾಜ್ಯದ 7ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಟಾಸ್ಕ್ ಫೋರ್ಸ್ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಗಳಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸಂಬಂಧಿಸಿದಂತೆ ಎನ್ ಐ ಟಿ, ಐಐಟಿಗಳ ನಿವೃತ್ತ ನಿರ್ದೇಶಕರು, ಶಿಕ್ಷಣ ತಜ್ಞರು ಒಳಗೊಂಡಿರುವ ಸಮಿತಿಯನ್ನು ಇನ್ನೆರಡು ದಿನಗಳ ಒಳಗಾಗಿ ರಚಿಸಬೇಕು. ಕೆಐಟಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಪ್ರಮುಖ ಐಟಿ ಕಂಪನಿಗಳು, ಕೈಗಾರಿಕೋದ್ಯಮಿಗಳ ಪ್ರಮುಖರ ಸೇವೆಯನ್ನು ಪಡೆಯಬಹುದು ಎಂದರು.

ರಾಜ್ಯ ಬಜೆಟ್: ಕರ್ನಾಟಕದ 7 ಜಿಲ್ಲೆಗಳಲ್ಲಿ ಹೊಸ ಮಾದರಿ ವಿಶ್ವವಿದ್ಯಾಲಯ ಸ್ಥಾಪನೆರಾಜ್ಯ ಬಜೆಟ್: ಕರ್ನಾಟಕದ 7 ಜಿಲ್ಲೆಗಳಲ್ಲಿ ಹೊಸ ಮಾದರಿ ವಿಶ್ವವಿದ್ಯಾಲಯ ಸ್ಥಾಪನೆ

2022- 23 ರ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಶಿಕ್ಷಣ ಇಲಾಖೆಯ ಸಭೆಯ ಮುಖ್ಯಾಂಶಗಳು ಇಂತಿವೆ:


1. ರಾಜ್ಯದ ಆಯ್ದ 14 ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಲ್ದರ್ಜೆಗೇರಿಸುವ ಯೋಜನೆ ಪ್ರಮುಖವಾದುದು.

2. ಈಗಾಗಲೇ ಉತ್ತಮ ರೀತಿಯಲ್ಲಿ ಸ್ಥಾಪಿತವಾಗಿರುವ ಹಾಗೂ ಮೂಲಸೌಲಭ್ಯ, ಶಿಕ್ಷಕ ವರ್ಗ, ಹಾಸ್ಟೆಲ್ ವ್ಯವಸ್ಥೆಯಿರುವಂತಹ ಕಾಲೇಜುಗಳನ್ನು ಕೆಐಟಿ ಗೆ ಮೇಲ್ದರ್ಜೆಗೆ ಏರಿಸಲು ಆಯ್ದುಕೊಳ್ಳಲಾಗುವುದು

3. ಗುಲ್ಬರ್ಗಾದ ಇಂಜಿಯರಿಂಗ್ ಕಾಲೇಜನ್ನು ಈ ಯೋಜನೆಯಡಿ ಮೇಲ್ದರ್ಜೆಗೇರಿಸಲು ಸೂಕ್ತ ಪ್ರಸ್ತಾವನೆ ಸಲ್ಲಿಸುವುದು.

4. ಕಲ್ಯಾಣ ಕರ್ನಾಟಕದ ಕಲಬುರಗಿ, ಕಿತ್ತೂರು ಕರ್ನಾಟಕ ವಿಭಾಗದಲ್ಲಿ ಹಾವೇರಿ ಹಾಗೂ ಉತ್ತರ ಕನ್ನಡ ( ಕಾರವಾರ) ಇಂಜಿನಿರಿಂಗ್ ಕಾಲೇಜು, ಮೈಸೂರು ವಿಭಾಗದಲ್ಲಿ ಕೆ.ಆರ್.ಪೇಟೆ ಹಾಗೂ ಕೊಡುಗು , ಬೆಂಗಳೂರು ವಿಭಾಗದಲ್ಲಿ ಎಸ್ ಕೆ ಎಸ್ ಜೆ ಟಿ ಐ ಹಾಗೂ ರಾಮನಗರದ ಇಂಜಿನಿಯರಿಂಗ್ ಕಾಲೇಜನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Task Force to upgrade 7 Engineering Colleges on the lines of IITs: CM instructs

5. ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂದಿನ ವರ್ಷದೊಳಗೆ ಎನ್ ಐ ಟಿ ಮಟ್ಟಕ್ಕೆ ಅಭಿವೃದ್ಧಿಯಾಗಬೇಕು. ಕಾಲೇಜುಗಳಲ್ಲಿ ವಿಷಯವಾರು ಕಲಿಕಾ ಉತ್ಕೃಷ್ಟ ಕೇಂದ್ರಗಳನ್ನಾಗಿ ಪರಿವರ್ತಿಸಲು ಪ್ರಾಶಸ್ತ್ಯ ನೀಡಬೇಕು.

6. ಕೆಐಟಿಗಳ ನಿರ್ಮಾಣಕ್ಕೆ ವೈಜ್ಞಾನಿಕ ಚಿಂತನೆ ಅಗತ್ಯ. ಆರ್ ಎಂಡ್ ಡಿ ಹಾಗೂ ಉದ್ಯೋಗಾವಕಾಶಗಳಿಗೆ ಇಲ್ಲಿ ಪ್ರಾಮುಖ್ಯತೆ ನೀಡಬೇಕು.

7. ಕೆಐಟಿಗಳಿಗಾಗಿ ಇಂಜಿನಿಯರಿಂಗ್ ಕಾಲೇಜುಗಳ ಆಯ್ಕೆ, ಲೋಗೋ, ಬ್ರ್ಯಾಡಿಂಗ್ ಉತ್ತಮ ರೀತಿಯಲ್ಲಿ ಆಗಬೇಕು.

English summary
Chief Minister Basavaraj Bommai has instructed for setting up a Task Force to upgrade 7 Engineering Colleges on the lines of Indian Institutes of Technology(IITs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X