ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ ತರುವ ಹುಣಸೆ: ತುಮಕೂರಿನ ತೋವಿನಕೆರೆಯಲ್ಲಿ ಫೆಬ್ರವರಿ 23ಕ್ಕೆ ಹುಣಸೆ ಕಾರ್ಯಾಗಾರ
ತುಮಕೂರು: ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ ತರುವ ಶಕ್ತಿ ಹುಣಸೆ ಬೆಳೆಗಿದೆ ಎನ್ನುವ ಮಾತು ಗ್ರಾಮೀಣ ಪ್ರದೇಶಗಳಲ್ಲಿ ಇದೆ. ಇದು ಹುಣಸೆ ಸಾವಿರಾರು ರೈತರಿಗೆ ಬದುಕು ರೂಪಿಸಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹುಣಸೆ ಬೆಳೆ ಬೆಳಯುವ ರೈತರಿಗೆ ಸಹಕಾರ, ನೆರವು ಬೇಕಿದೆ. ಇದೀಗ ಭಾರತೀಯ ತೋಟಗಾರಿಕ ಸಂಶೋಧನ ಕೇಂದ್ರ (ಹೆಸರಘಟ್ಟ)ದ ನೇತೃತ್ವದಲ್ಲಿ ತುಮಕೂರಿನಲ್ಲಿ ಒಂದು ದಿನದ ವಿಶೇಷ ಹುಣಸೆ ಕಾರ್ಯಾಗಾರ ನಡೆಯುತ್ತಿದೆ. ಇದರಲ್ಲಿ 10ಕ್ಕೂ ಹೆಚ್ಚು ಜಿಲ್ಲೆಯ ರೈತರು ಭಾಗವಹಿಸುವ ಸಾಧ್ಯತೆ ಇದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಮಳೆ ಆಶ್ರಯದ ಬೆಳೆಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಹುಣಸೆ ಗುರುತಿಸಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹುಣಸೆ ಕೃಷಿಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ದಿನೇ ದಿನೇ ಬೆಲೆ ಕಡಿಮೆಯಾಗುತ್ತಿದ್ದೆ. ಹಲವು ವರ್ಷ ಮಳೆ ಬರದಿದ್ದರೂ ಬದುಕುವ ಹಾಗೂ ಫಸಲು ಕೊಡುವ ತಾಕತ್ತು ಹುಣಸೆ ಮರಕ್ಕೆ ಇದೆ. ಆದರೆ ಹುಣಸೆ ಮೌಲ್ಯವರ್ಧನೆ ಹಾಗೂ ಸಂಸ್ಕರಣೆಗೆ ಕೃಷಿ ಇಲಾಖೆ ಹಾಗೂ ಸರ್ಕಾರದ ನೆರವು ಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಹುಣಸೆ ಮರವನ್ನು ಹತ್ತುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಮಳೆ ಬಂದರೆ ಬೆಳೆ ಹಾನಿಯಾಗುತ್ತಿದ್ದು, ಹುಣಸೆ ಬಣ್ಣ ಮಾಸುವಂತೆ ರೈತರ ನಗುವೂ ಮಾಸುತ್ತಿದೆ. ಈ ಸಮಸ್ಯೆಗಳ ಪರಿಹಾರದ ನಿರೀಕ್ಷೆಯಲ್ಲಿ ರೈತರಿದ್ದು, ಒಂದು ದಿನದ ಕಾರ್ಯಗಾರ ರೈತರಲ್ಲಿ ಭರವಸೆ ಮೂಡಿಸಿದೆ.

ಒಂದು ದಿನದ ಕಾರ್ಯಾಗಾರ
ಹುಣಸೆ ಬೆಳಗಾರರಿಗಾಗಿ ತುಮಕೂರು ಜಿಲ್ಲೆ ತೋವಿನಕೆರೆಯ ಸೋಮವಾರ ಚಂದ್ರನಾಥ ಸ್ವಾಮಿ ಜೈನ ದಿಗಂಬರ ಮಂದಿರದ ಭವನದಲ್ಲಿ ಫೆಬ್ರವರಿ 23ರಂದು ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಹುಣಸೆ ಕೃಷಿ ಮಾಡುವ ಬಗ್ಗೆ, ಕೃಷಿ ಸಂಸ್ಕರಣೆ, ಹುಣಸೆ ಕೃಷಿಯಲ್ಲಿ ಯಂತ್ರಗಳ ಬಳಕೆ ಹಾಗೂ
ಹುಣಸೆ ಮಾರುಕಟ್ಟೆ ಮತ್ತು ಸಂವಾದ ಸೇರಿದಂತೆ ಹಲವು ವಿಷಯಗಳ ಮೇಲೆ ಚರ್ಚೆ ನಡೆಯಲಿದೆ. ಲಕ್ಷ್ಮಣ ಹುಣಸೆ ತಳಿಯ ಹಣ್ಣು, ಬೀಜ ಸೇರಿದಂತೆ ವಿಶೇಷ ತಳಿಗಳ ಪ್ರದರ್ಶನ ಇರಲಿದೆ. ಕೃಷಿ ಕ್ಷೇತ್ರದ ತಜ್ಞರು ರೈತರಿಗೆ ಮಾಹಿತಿ ನೀಡಲಿದ್ದಾರೆ. ಅಲ್ಲದೆ ಹುಣಸೆ ಕಾರ್ಯಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಳೆಗಾರರು, ಮೌಲ್ಯ ವರ್ಧನೆ ಮಾರಾಟ ಮಾಡುತ್ತಿರುವವರು, ಸಂಸ್ಕರಣೆಗೆ ಯಂತ್ರಗಳ ಸಂಶೋಧನೆ ಮಾಡುತ್ತಿರುವವರು ಭಾಗವಹಿಸಲಿದ್ದಾರೆ.
ಹುಣಸೆ ಕೃಷಿಯಲ್ಲಿ ಸವಾಲು
ಬರಗಾಲದಲ್ಲೂ ಬಡವನಿಗೆ ಯುಗಾದಿ ಹಬ್ಬದ ಸಂಭ್ರಮ ಮೂಡಿಸುವ ಬೆಳೆ ಎನ್ನುವ ಖ್ಯಾತಿ ಗಳಿಸಿರುವ ಹುಣಸೆ ಬೆಳೆ ಕೃಷಿಯಲ್ಲಿ ಕೆಲವೊಂದು ಸವಾಲುಗಳು ಎದುರಾಗಿವೆ. ಕೆಲವೇ ವರ್ಷಗಳ ಹಿಂದೆ ಹುಣಸೆ ಹಣ್ಣಿನ ಬೆಲೆ ನೂರು ಕೆ.ಜಿಗೆ 20 ಸಾವಿರದಿಂದ 40 ಸಾವಿರ ದಾಟಿತ್ತು. ತೋವಿನಕೆರೆ ಪಂಚಾಯಿತಿ ವ್ಯಾಪ್ತಿ ಹಾಗೂ ಅಕ್ಕ ಪಕ್ಕದ ಹಳ್ಳಿಗಳ ರೈತರುಗಳಿಗೆ ಬಂದ ಹಣ ಬರೋಬ್ಬರಿ ನೂರು ಕೋಟಿ ಮುಟ್ಟಿತ್ತು. ಇನ್ನು ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯಲ್ಲಿ ಬೆಳೆದಿದ್ದ ಹುಣಸೆ ಸಸಿಗಳ ಒಟ್ಟು ಮಾರಾಟವೇ 5ರಿಂದ 6 ಲಕ್ಷ ರೂಪಾಯಿ ಮೀರಿತು. ಆದರೆ ಇದರ ಹೊರತಾಗಿಯೂ ಹುಣಸೆ ಕೃಷಿಯಲ್ಲಿ ಸವಾಲುಗಳು ಮುಂದುವರಿದಿದೆ.
ಅಡಿಕೆ ಬೆಳೆಯ ಅಬ್ಬರ, ಹುಣಸೆಯಲ್ಲಿ ಕೃಷಿ ಕಾರ್ಮಿಕರ ಕೊರತೆ, ಸಂಸ್ಕರಣೆಗೆ ಸಂಶೋಧನೆಯಾಗದ ಯಂತ್ರಗಳು, ಮರದಿಂದ ಬಿದ್ದು ಕೃಷಿಕರು ಸಾವನ್ನಪ್ಪುತ್ತಿರುವುದು ಹಾಗೂ ಅವರಿಗೆ ನೀಡಲೇಬೇಕಾದ ಪರಿಹಾರ, ಅನುಭವಿ ಕೃಷಿ ಕಾರ್ಮಿಕರ ಕೊರತೆ, ದಿನದಿಂದ ದಿನಕ್ಕೆ ಕುಸಿಯುತ್ತಿರುವ ಹುಣಸೆ ಬೆಲೆ ಹೀಗೆ ಸಾಲು ಸಾಲು ಸಮಸ್ಯೆಗಳು ಹುಣಸೆ ಕೃಷಿಯಲ್ಲಿ ಎದುರಾಗಿದೆ. ಈ ವಿಚಾರಗಳ ಬಗ್ಗೆ ಒಂದು ದಿನದ ಹುಣಸೆ ಕಾರ್ಯಾಗಾರದಲ್ಲಿ ಚರ್ಚೆ ಆಗಲಿದೆ.
ಹುಣಸೆ ಕಾರ್ಯಗಾರ ಸಹಕಾರ ಹಾಗೂ ಆಯೋಜಕರು
ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಹೆಸರುಘಟ್ಟ ನೇತೃತ್ವದಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರಕ್ಕೆ ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿ,
ಇಕ್ರಾ ಸಂಸ್ಥೆ ಬೆಂಗಳೂರು, ಅಕ್ಷಯ್ಯ ಕಲ್ಪ ತಿಪಟೂರು, ಧಾನ್ಯ ಸಂಸ್ಥೆ ತುಮಕೂರು, ಸನ್ಮಿತ್ರ ಸಹಕಾರ ವೇದಿಕೆ ತೋವಿನಕೆರೆ, ಶ್ರಮಿಕ ಸಿರಿ ಹಾಗೂ ಮಹಿಳಾ ಸಿರಿ ತೋವಿನಕೆರೆ ಅವರ ಸಹಕಾರವಿದೆ.
ಐಐಎಚ್ಆರ್ ಕೇಂದ್ರ ಹೆಸರುಘಟ್ಟದ ನಿರ್ದೇಶಕರಾದ ಡಾ.ತುಷಾರ ಕಾಂತಿ ಬೆಹರ, ಹಿರೇಹಳ್ಳಿಯ ಡಾ.ಜಿ.ಕರುಣಾಕರನ್ ಇಕ್ರಾ ಸಂಸ್ಥೆಯ ಗಾಯಿತ್ರಿ, ಸಹಜ ಆರ್ಗ್ಯಾನಿಕ್ ಜಿ ಕೃಷ್ಣ ಪ್ರಸಾದ್, ಪ್ರಜಾವಾಣಿಯ ಹಿರಿಯ ವರದಿಗಾರರಾದ ಗಾಣದಾಳ ಶ್ರೀಕಂಠ, ಕೃಷಿ ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ, ಕೊಪ್ಪಳದ ಅನಂದ ತೀರ್ಥ ಪ್ಯಾಟಿ ಮತ್ತು ತಂಡ, ಕೂಡ್ಲಗಿಯಿಂದ ಹತ್ತಕ್ಕೂ ಹೆಚ್ಚು ಜನ ಸೇರಿದಂತೆ ಹಲವಾರು ಮಾರ್ಗದರ್ಶಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗೆ
ಎಚ್.ಜೆ.ಪದ್ಮರಾಜು, ತೋವಿನಕೆರೆ: 9945323787
ಮಲ್ಲಿಕಾರ್ಜುನ, ಹೊಸಪಾಳ್ಯ: 96861 94641
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್ಸೈಟ್ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್ಬುಕ್ ಮತ್ತು ಟ್ವಿಟರ್ನಲ್ಲೂ ಮೈಖೇಲ್ ಫಾಲೊ ಮಾಡಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications