ಸಿಂಡಿಕೇಟ್ ಬ್ಯಾಂಕಿನಲ್ಲಿ 400 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ನ.11: ಸಿಂಡಿಕೇಟ್ ಬ್ಯಾಂಕಿನಲ್ಲಿ 400 ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಜೊತೆಗೆ ಮುಖ್ಯ ಗ್ರಾಹಕ ಸೇವಾ ಅಧಿಕಾರಿ ಹುದ್ದೆ ಕೂಡಾ ಖಾಲಿಯಿದೆ. ಅರ್ಹ ಆಸಕ್ತರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಜ್ಯೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್/ ಸ್ಕೇಲ್ 1 ಅಡಿಯಲ್ಲಿ 400 ಪ್ರೊಬೇಷನರಿ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಗೊಂಡವರಿಗೆ ಮಣಿಪಾಲ್ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಇನ್ Banking and Finance ವಿಷಯದಲ್ಲಿ 1 ವರ್ಷಗಳ ಕಾಲದ ಪೂರ್ಣಾವಧಿ ಕಲಿಕೆಗೆ ದಾಖಲಿಸಲಾಗುವುದು. ಅಭ್ಯರ್ಥಿಗಳು 18/11/2014ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ:
ಪ್ರೊಬೇಷನರಿ ಅಧಿಕಾರಿ ಜ್ಯೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್/ ಸ್ಕೇಲ್ 1
1. ಮೀಸಲಾತಿ ರಹಿತ: 202 ಹುದ್ದೆಗಳು
2. ಒಬಿಸಿ: 108
3. ಎಸ್ ಸಿ: 60
4. ಎಸ್ ಟಿ: 30
ವಯೋಮಿತಿ: 1/10/2014ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 20 ರಿಂದ 30 ವರ್ಷ ಒಳಗಿರಬೇಕು. ಅಭ್ಯರ್ಥಿಗಳು 2/10/1984 ರಿಂದ 1/10/1994 ರಿಂದ ರೊಳಗೆ ಜನಿಸಿರಬೇಕು.
ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ಯಾವುದೇ ವಿವಿಯಿಂದ ಶೇ 60 ಅಂಕಗಳೊಂದಿಗೆ ಯಾವುದೇ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಅರ್ಜಿ ಶುಲ್ಕ: ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 50 ರು ಹಾಗೂ ಇತರೆ ಅಭ್ಯರ್ಥಿಗಳಿಗೆ 500 ರು. ಮಾಸ್ಟರ್/ ವೀಸಾ ಡೆಬಿಟ್ ಕಾರ್ಡ್ ಬಳಸಿ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಆನ್ ಲೈನ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?:
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಭಾವಚಿತ್ರ ಹಾಗೂ ಹಸ್ತಾಕ್ಷರದ ಸ್ಕ್ಯಾನ್ ಕಾಪಿ ಹೊಂದಿರಬೇಕು.
* www.syndicatebank.in. ವೆಬ್ ಸೈಟ್ ಗೆ ಭೇಟಿ ಕೊಡಿ
* Recruitment ಅಡಿಯಲ್ಲಿ ಬೇಕಾದ ಹುದ್ದೆಯನ್ನು ಆಯ್ಕೆ ಮಾಡಿ
* ಅರ್ಜಿ ತುಂಬಿರಿ, ಸೇವ್ ಮಾಡಿ ಸ್ಕ್ಯಾನ್ ಕಾಪಿಯನ್ನು ಅಪ್ ಲೋಡ್ ಮಾಡಿ ಅಂತಿಮವಾಗಿ ಸಬ್ಮೀಟ್ ಬಟನ್ ಒತ್ತಿ
* ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ಆನ್ ಲೈನ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಿ ಇ ರಸೀತಿ ಪಡೆದುಕೊಳ್ಳಿ
ಅರ್ಜಿ ಹಾಗೂ ಶುಲ್ಕ ಸಲ್ಲಿಸಲು ಕೊನೆ ದಿನಾಂಕ: 18/11/2014
ಪರೀಕ್ಷೆಯ ಕಾಲ್ ಲೆಟರ್ ಡೌನ್ ಲೋಡ್ ಮಾಡಲು ಕೊನೆ ದಿನಾಂಕ : 16/12/2014
ಆನ್ ಲೈನ್ ಪರೀಕ್ಷೆ 27/12/2014ರಂದು ನಡೆಯುವ ಸಾಧ್ಯತೆಯಿದೆ.
ಹುದ್ದೆ 2: Chief Customer Service Officer
ವಯೋಮಿತಿ: 30/6/2014ಕ್ಕೆ ಅನ್ವಯವಾಗುವಂತೆ 62 ವರ್ಷ ವಯಸ್ಸಾಗಿರಬೇಕು.
ವಿದ್ಯಾರ್ಹತೆ: ವಾಣಿಜ್ಯ ಬ್ಯಾಂಕ್,ಸಿಂಡಿಕೇಟ್ ಬ್ಯಾಂಕ್ ಹೊರತುಪಡಿಸಿ ಸಾರ್ವಜನಿಕ ವಲಯ ಬ್ಯಾಂಕ್ ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ರೀತಿ: ಸೂಕ್ತ ದಾಖಲೆ ಹಾಗೂ ಸ್ವವಿವರಗಳುಳ್ಳ ತುಂಬಿದ ಅರ್ಜಿಯನ್ನು 24/11/2014ರೊಳಗೆ ಸಿಂಡಿಕೇಟ್ ಬ್ಯಾಂಕಿಗೆ ತಲುಪಿಸಬೇಕು. ಅರ್ಜಿ ಲಕೋಟೆ ಮೇಲೆ "Application for appointment of Chief Customer Service Officer on contract basis 2014″ ಎಂದು ಬರೆಯತಕ್ಕದ್ದು. ಪ್ರತಿ ತಿಂಗಳಿಗೆ ಸಂಬಳ ಸುಮಾರು 50,000 ರು ನಷ್ಟು ಸಿಗಲಿದೆ.












Click it and Unblock the Notifications