Get Updates
Get notified of breaking news, exclusive insights, and must-see stories!

Karnataka Rails: ಗುಡ್‌ನ್ಯೂಸ್: ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರೈಲು ಸಂಚಾರ...SWR

South Western Railway: ಜನರು ದಸರಾ ಹಬ್ಬ ನಂತರ ದೀಪಾವಳಿ ಆಚರಣೆಗೆ ಸಜ್ಜಾಗುತ್ತಿದ್ದಾರೆ. ಈ ಹಬ್ಬಗಳ ಪ್ರಯುಕ್ತ ತಮ್ಮ ಊರುಗಳಿಗೆ ತೆರಳುವ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚಾಗುತ್ತದೆ. ಈ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ದಕ್ಷಿಣ ಪಶ್ಚಿಮ ರೈಲು ಮಂಡಳಿ ಹಲವು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಈ ರೈಲುಗಳು ಮೈಸೂರು-ರಾಮೇಶ್ವರಂ, ಮೈಸೂರು-ತಿರುನಲ್ವೇಲಿ ಹಾಗೂ ಮೈಸೂರು-ಕಟ್ಪಾಡಿ ಮಾರ್ಗಗಳಲ್ಲಿ ಸಂಚರಿಸಲಿವೆ. ಯಾವುವು ರೈಲುಗಳು, ಸಂಖ್ಯೆ ಸಂಚಾರದ ಸಮಯ, ವೇಳಾಪಟ್ಟಿ ಇಲ್ಲಿದೆ.

* ಮೈಸೂರು-ರಾಮೇಶ್ವರಂ ಮಾರ್ಗದಲ್ಲಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 27 ರವರೆಗೆ ಪ್ರತೀ ಸೋಮವಾರ (06237) ಮೈಸೂರು-ರಾಮೇಶ್ವರಂ ವಿಶೇಷ ರೈಲು ಸಂಜೆ 6.35ಕ್ಕೆ ಹೊರಡುತ್ತದೆ. ಮರುದಿನ ಮಂಗಳವಾರ ಬೆಳಗ್ಗೆ 10.00ಕ್ಕೆ ತಲುಪಲಿದೆ. ಹಿಂತಿರುಗುವ ರೈಲು (06238) ರಾಮೇಶ್ವರಂ-ಮೈಸೂರು ರೈಲು ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 28 ರವರೆಗೆ ಪ್ರತೀ ಮಂಗಳವಾರ ಮಧ್ಯಾಹ್ನ 3.10ಕ್ಕೆ ಹೊರಟು, ಬುಧವಾರ ಬೆಳಿಗ್ಗೆ 7.45ಕ್ಕೆ ಮೈಸೂರಿಗೆ ತಲುಪಲಿದೆ.

SWR Will Operation Special Train from Mysuru in This route for Dasara Diwali Rush

* ಮೈಸೂರು-ತಿರುನಲ್ವೇಲಿ ಮಾರ್ಗದಲ್ಲಿ ಸೆಪ್ಟೆಂಬರ್ 15ರಿಂದ ನವೆಂಬರ್ 24ರವರೆಗೆ ಪ್ರತೀ ಸೋಮವಾರ (06239) ಮೈಸೂರು-ತಿರುನಲ್ವೇಲಿ ರೈಲು ರಾತ್ರಿ 8.15ಕ್ಕೆ ಹೊರಟು, ಮಂಗಳವಾರ ಬೆಳಿಗ್ಗೆ 10.50ಕ್ಕೆ ತಲುಪಲಿದೆ. ಹಿಂತಿರುಗುವ ರೈಲು (06240) ತಿರುನಲ್ವೇಲಿ-ಮೈಸೂರು ರೈಲು ಸೆಪ್ಟೆಂಬರ್ 16 ರಿಂದ ನವೆಂಬರ್ 25 ರವರೆಗೆ ಪ್ರತೀದಿನ ಮಂಗಳವಾರ ಬೆಳಿಗ್ಗೆ 5.40ಕ್ಕೆ ಹೊರಟು, ಬುಧವಾರ ಬೆಳಿಗ್ಗೆ 11.50ಕ್ಕೆ ಮೈಸೂರಿಗೆ ಬಂದು ಸೇರಲಿದೆ.

* ಇದೇ ರೀತಿಯಲ್ಲಿ, ಮೈಸೂರು-ಕಟ್ಪಾಡಿ ಮಾರ್ಗದಲ್ಲಿ ಸೆಪ್ಟೆಂಬರ್ 18ರಿಂದ ನವೆಂಬರ್ 29ರವರೆಗೆ ಪ್ರತೀ ಗುರುವಾರ (06243) ಮೈಸೂರು-ಕಟ್ಪಾಡಿ ರೈಲು ರಾತ್ರಿ 9.20ಕ್ಕೆ ಹೊರಟು, ಶುಕ್ರವಾರ ಬೆಳಗ್ಗೆ 11.00ಕ್ಕೆ ತಲುಪಲಿದೆ. ಹಿಂತಿರುಗುವ (06244) ಕಟ್ಪಾಡಿ-ಮೈಸೂರು ರೈಲು ಸೆಪ್ಟೆಂಬರ್ 19 ರಿಂದ ನವೆಂಬರ್ 29 ರವರೆಗೆ ಪ್ರತೀ ಶುಕ್ರವಾರ ಸಂಜೆ 6.45ಕ್ಕೆ ಹೊರಟು, ಶನಿವಾರ ಬೆಳಿಗ್ಗೆ 7.45ಕ್ಕೆ ಮೈಸೂರಿಗೆ ತಲುಪಲಿದೆ.

* ಈ ವಿಶೇಷ ರೈಲುಗಳ ಮೂಲಕ ಪ್ರಯಾಣಿಕರಿಗೆ ಹಬ್ಬದ ದಿನಗಳಲ್ಲಿ ಹೆಚ್ಚುವರಿ ಸೌಲಭ್ಯ ದೊರೆಯಲಿದೆ. ರೈಲು ಮತ್ತು ಆಸನ ಲಭ್ಯತೆ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ www.enquiry.indianrail.gov.in , http://www.enquiry.indianrail.gov.in ಅಥವಾ NTES ಮೊಬೈಲ್ ಆಪ್ ಮೂಲಕ ಮಾಹಿತಿ ತಿಳಿದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+