Train Cancellation: ರೈಲ್ವೆ ಕಾಮಗಾರಿ, ಕರ್ನಾಟಕದಲ್ಲಿ ವಿವಿಧ ರೈಲುಗಳ ಸಂಚಾರ ಸೇವೆ ರದ್ದು
South Western Railways: ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಲೆಂದು ಹಾಗೂ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಮಧ್ಯೆ ಬಳ್ಳಾರಿ ಮತ್ತು ತೋರಣಗಲ್ಲು ಯಾರ್ಡ್‌ಗಳಲ್ಲಿ ಥಿಕ್ ವೆಬ್ ಸ್ವಿಚ್‌ಗಳ ಕಾಮಗಾರಿಗಾಗಿ ಲೈನ್ ಬ್ಲಾಕ್ ಮಾಡಲಾಗುತ್ತಿದೆ. ಈ ತುರ್ತು ನಿರ್ವಹಣೆ ಪ್ರಯುಕ್ತ ಸೆಪ್ಟೆಂಬರ್ 03 ಈ ಕೆಳಗಿನ ರೈಲು ಸೇವೆಗಳಲ್ಲಿ ವ್ಯತ್ಯವಾಗಿದ್ದು, ಸಂಚಾರ ರದ್ದಾಗಿದೆ ಎಂದು SWR ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.
ಗಣೇಶ ಹಬ್ಬ ಮುಗಿಸಿ ಮುಂದಿನ ವಾರ ಮರಳಿ ಬರುವವರಿಗೆ, ದೈನಂದಿನ ರೈಲು ಪ್ರಯಾಣಿಕರಿಗೆ ಈ ರದ್ದಾದ ರೈಲು ಸೇವೆಗಳನ್ನು ಗಮನಿಸಿ ಪ್ರಯಾಣವನ್ನು ಪ್ಲಾನ್ ಮಾಡಿಕೊಳ್ಳಬೇಕು. ಯಾವೆಲ್ಲ ಮಾರ್ಗದ ರೈಲುಗಳು ರದ್ದಾಗಿವೆ ಎಂಬ ಪಟ್ಟಿ ಮುಂದಿದೆ.

ರದ್ದಾದ ರೈಲುಗಳ ಪಟ್ಟಿ, ಮಾರ್ಗಗಳು
* ಗಂತಕಲ್ - ಚಿಕ್ಕಜಾಜೂರು ಪ್ಯಾಸೆಂಜರ್ ರೈಲು (ಸಂಖ್ಯೆ 57415) & ಚಿಕ್ಕಜಾಜೂರು-ಗಂತಕಲ್ ಪ್ಯಾಸೆಂಜರ್ (57416) ಮತ್ತು ಹೊಸಪೇಟೆ - ಬಳ್ಳಾರಿ ಡೆಮು ವಿಶೇಷ (07397) ರೈಲುಗಳ ಸಂಚಾರವು ಸೆಪ್ಟೆಂಬರ್ 3, 2025 ರಂದು ಸಂಚಾರವನ್ನು ರದ್ದುಗೊಳಿಸಲಾಗಿದೆ.
* ಸೆಪ್ಟೆಂಬರ್ 2 ರಂದು ತಿರುಪತಿಯಿಂದ ಹೊರಡುವ ತಿರುಪತಿ - ಕದಿರಿದೇವರಪಲ್ಲಿ ಪ್ಯಾಸೆಂಜರ್ ರೈಲು (57405) ಗಂತಕಲ್ ಮತ್ತು ಕದಿರಿದೇವರಪಲ್ಲಿ ನಡುವೆ ಸ್ಥಗಿತಗೊಂಡಿದೆ. ಇದು ಗಂತಕಲ್‌ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಸೆಪ್ಟೆಂಬರ್ 3 ರಂದು ಕದಿರಿದೇವರಪಲ್ಲಿಯಿಂದ ಹೊರಡಬೇಕಿದ್ದ ರೈಲು (57406) ಕದಿರಿದೇವರಪಲ್ಲಿ - ತಿರುಪತಿ ಪ್ಯಾಸೆಂಜರ್ ರೈಲು ಸಂಚಾರವನ್ನು ಕದಿರಿದೇವರಪಲ್ಲಿ ಮತ್ತು ಗಂತಕಲ್ ಮಧ್ಯೆ ರದ್ದುಗೊಳಿಸಲಾಗಿದೆ. ಇದು ತನ್ನ ನಿಗದಿತ ಸಮಯಕ್ಕೆ ಕದಿರಿದೇವರಪಲ್ಲಿಯ ಬದಲಾಗಿ ಗಂತಕಲ್‌ನಿಂದ ತನ್ನನ್ನು ಪ್ರಾರಂಭಿಸಲಿದೆ.
* ಬಳ್ಳಾರಿಯಿಂದ ಹೊರಡಬೇಕಿದ್ದ ಬಳ್ಳಾರಿ - ದಾವಣಗೆರೆ ಡೆಮು ವಿಶೇಷ ರೈಲು (07395) ಬಳ್ಳಾರಿ ಮತ್ತು ಸೆಪ್ಟೆಂಬರ್ ಹೊಸಪೇಟೆ ನಡುವೆ ರದ್ದುಗೊಂಡಿದೆ. ಇದು ತನ್ನ ನಿಗದಿತ ಸಮಯಕ್ಕೆ ಬಳ್ಳಾರಿಯ ಬದಲಾಗಿ ಹೊಸಪೇಟೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ.
* ಸೆಪ್ಟೆಂಬರ್ 3 ರಂದು ಸಂಚರಿಸುವ ಎಸ್‌ಎಸ್‌ಎಸ್ ಹುಬ್ಬಳ್ಳಿ - ಗಂತಕಲ್ ಪ್ಯಾಸೆಂಜರ್ ರೈಲು (ಸಂಖ್ಯೆ 56911) ಮುನಿರಾಬಾದ್ ಮತ್ತು ಗಂತಕಲ್ ನಡುವೆ ಸಂಚಾರ ರದ್ದುಗೊಂಡಿದೆ. ಇದು ಮುನಿರಾಬಾದ್‌ನಲ್ಲಿ ತನ್ನ ಪ್ರಯಾಣ ಅಂತ್ಯಗೊಳಿಸಲಿದೆ.
* ಸೆಪ್ಟೆಂಬರ್ 3 ರಂದು ಗುಂತಕಲ್ ನಿಂದ ಹೊರಡಬೇಕಿದ್ದ ಗುಂತಕಲ್-SSS ಹುಬ್ಬಳ್ಳಿ ಪ್ಯಾಸೆಂಜರ್ ರೈಲು
(56912) ಗುಂತಕಲ್ ಮತ್ತು ಮುನಿರಾಬಾದ್ ನಡುವೆ ರದ್ದುಗೊಳಿಸಲಾಗಿದೆ. ಇದು ಗುಂತಕಲ್ ಬದಲಾಗಿ ಮುನಿರಾಬಾದ್‌ನಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
* ಇನ್ನೂ ಸೆಪ್ಟೆಂಬರ್ 3 ರಂದು ಹೊರಡುವ SSS ಹುಬ್ಬಳ್ಳಿ - ತಿರುಪತಿ ಪ್ಯಾಸೆಂಜರ್ ರೈಲು (57402) ಮಾರ್ಗ ಮಧ್ಯೆ 90 ನಿಮಿಷಗಳು ಕಾಲ ವಿಳಂಬವಾಗಿ ಸಂಚಾರ ಮಾಡಲಿದೆ ಎಂದು ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications