SWR: ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣೆ ಪುನರಾರಂಭ: ಮಂಗಳೂರಿನಿಂದ ವಿಶೇಷ ರೈಲು ಸೇವೆ

ಹುಬ್ಬಳ್ಳಿ/ಮಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಮಂಗಳೂರು ಸೆಂಟ್ರಲ್‌ನಿಂದ ಶಕೂರ್ ಬಸ್ತಿಗೆ ಏಕಮುಖ ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲು ಕಾರ್ಯಾಚರಣೆ ನಡೆಸಲಿದೆ. ಇದರೊಂದಿಗೆ ತಿನೈಘಾಟ್ ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣಿಕೆ ಪುನರಾರಂಭಿಸುವ ಮೂಲಕ ವ್ಯಾಪಾರ ಉತ್ತೇಜನ ಹೆಚ್ಚಿಸಲಾಗುವುದು ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಅವರು ತಿಳಿಸಿದರು.

ತಿನೈಘಾಟ್ ನಿಲ್ದಾಣ: ಕಬ್ಬಿಣದ ಅದಿರು ಸಾಗಣಿ ಪುನರಾರಂಭ

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿರುವ ತಿನೈಘಾಟ್ (TGT) ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣಿಕೆಯ ಕಾರ್ಯಾಚರಣೆ ಪುನರಾರಂಭವಾಗಿದೆ. ಈ ಸೌಲಭ್ಯವು ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಲಭ್ಯವಿರಲಿದೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು ಅಧಿಸೂಚನೆ ಹೊರಡಿಸಿದ್ದಾರೆ.

SWR Resumes Iron Ore Loading

ಈ ಸೌಲಭ್ಯದ ಪುನರಾರಂಭದಿಂದ ಕಬ್ಬಿಣದ ಅದಿರು ವ್ಯಾಪಾರಿಗಳು, ಕೈಗಾರಿಕೆಗಳು ಹಾಗೂ ಸರಕು ಸಾಗಣೆ ನಿರ್ವಾಹಕರಿಗೆ ತಮ್ಮ ಸರಕುಗಳನ್ನು ರೈಲಿನ ಮೂಲಕ ಸಾಗಿಸಲು ಉತ್ತಮ ಅವಕಾಶ ಲಭಿಸಲಿದೆ. ಆದ್ದರಿಂದ, ಕಬ್ಬಿಣದ ಅದಿರು ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು ತಿನೈಘಾಟ್ ರೈಲು ನಿಲ್ದಾಣದಲ್ಲಿ ಲಭ್ಯವಿರುವ ಈ ರೈಲ್ವೆ ಸಾಗಣಿಕೆ ಸೌಲಭ್ಯ ಸದುಪಯೋಗ ಮಾಡಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಕ್ರಮದಿಂದ ರೈಲ್ವೆ ಮೂಲ ಸೌಕರ್ಯದ ಸಮರ್ಪಕ ಬಳಕೆಗೆ ಉತ್ತೇಜನ ದೊರೆಯುವುದರ ಜೊತೆಗೆ, ಸರಕು ಸಾಗಣೆಗೆ ಅಗತ್ಯವಿರುವ ವ್ಯಾಗನ್‌ಗಳ ಲಭ್ಯತೆಯನ್ನು ಸುಧಾರಿಸಲು ಹಾಗೂ ಸರಕು ಸಾಗಣೆ ಕಾರ್ಯಾಚರಣೆಗಳ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಎಕ್ಸ್‌ಪ್ರೆಸ್ ವಿಶೇಷ ರೈಲು (06262) ಸಂಚಾರ

ಮಂಗಳೂರು ಸೆಂಟ್ರಲ್ - ಶಕೂರ್ ಬಸ್ತಿ ಎಕ್ಸ್‌ಪ್ರೆಸ್ ವಿಶೇಷ ರೈಲು (06262 ಏಕಮುಖ ಸಂಚಾರ) ಸೋಮವಾರ ಪ್ರಯಾಣ ಆರಂಭಿಸಿದೆ. ಈ ರೈಲು ಇಂದು ಬೆಳಗ್ಗೆ 09:30 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು, ಅಕ್ಟೋಬರ್ 14 ರಂದು ಬುಧವಾರ ಸಂಜೆ 16:30 ಗಂಟೆಗೆ ಶಕೂರ್ ಬಸ್ತಿಯನ್ನು ತಲುಪಲಿದೆ.

ನಿಲುಗಡೆ ನಿಲ್ದಾಣಗಳು ಯಾವುವು?

ಮಂಗಳೂರು ಸೆಂಟ್ರಲ್- ಶಕೂರ್ ಬಸ್ತಿ ಎಕ್ಸ್‌ಪ್ರೆಸ್ ವಿಶೇಷ ರೈಲು ಮಾರ್ಗ ಮಧ್ಯೆ ಉಡುಪಿ, ಕುಂದಾಪುರ, ಕಾರವಾರ, ಮಡಗಾಂವ್, ತಿವಿಮ್, ರತ್ನಗಿರಿ, ಚಿಪ್ಲುನ್, ಪನ್ವೆಲ್, ಕಲ್ಯಾಣ್, ನಾಸಿಕ್ ರೋಡ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ ಪುರ್, ಕಟ್ನಿ, ಸತ್ನಾ, ಚಿತ್ರಕೂಟಧಾಮ ಕರ್ವಿ, ಬಂದಾ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಮತ್ತು ಆಗ್ರಾ ಕಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ರೈಲು 5 ಸಾಮಾನ್ಯ ದ್ವಿತೀಯ ದರ್ಜೆಯ ಚೇರ್ ಕಾರ್‌ಗಳು, 11 ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು ಮತ್ತು ದಿವ್ಯಾಂಗ ಸ್ನೇಹಿ ಬೋಗಿಗಳು, 2 ದ್ವಿತೀಯ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರಲಿದೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+