SWR: ವಿವಿಧ ಮಾರ್ಗದ ಕೆಲವು ರೈಲುಗಳ ಭಾಗಶಃ ರದ್ದತಿ ಮತ್ತೆ ವಿಸ್ತರಣೆ: ಹೊಸ ವೇಳಾಪಟ್ಟಿ, ನಿಲ್ದಾಣಗಳು
ಬೆಂಗಳೂರು, ಫೆಬ್ರವರಿ 26: ನೈಋತ್ಯ ರೈಲ್ವೆ (SWR) ವ್ಯಾಪ್ತಿಯಲ್ಲಿ ಕರ್ನಾಟಕದಿಂದ ಗೋವಾ, ಆಂಧ್ರಪ್ರದೇಶ ಸೇರಿದಂತೆ ಬೇರೆ ಬೆರೆ ಕಡೆಗೆ ಹೋಗುವ ಹಲವು ರೈಲುಗಳನ್ನು ರದ್ದುಗೊಳಿಸಲಾಗಿತ್ತು. ವಿವಿಧ ರೈಲ್ವೆ ಕಾರ್ಯಾಚರಣೆ ಮುಂದುವರಿಕ ಕಾರಣದಿಂದಾಗಿ ಈಗಾಗಲೇ ತಾತ್ಕಾಲಿಕವಾಗಿ ರದ್ದುಗೊಂಡಿರುವ ರೈಲು ಸೇವೆಗಳ ರದ್ದತಿಯನ್ನು ದಕ್ಷಿಣ ಮಧ್ಯ ರೈಲ್ವೆಯು ಮತ್ತೆ ವಿಸ್ತರಣೆ ಮಾಡಿದೆ ಎಂದು SWR ತಿಳಿಸಿದೆ.
ಹಾಗಾದರೆ ಕರ್ನಾಟಕ, ಹುಬ್ಬಳ್ಳಿ, ಬೆಂಗಳೂರು, ತಿರುಪತಿ, ಗೋವಾ ಹೀಗೆ ವಿವಿಧ ಮಾರ್ಗಗಳಲ್ಲಿ ರದ್ದು ವಿಸ್ತರಣೆಯಾದ ರೈಲುಗಳು ಯಾವುವು, ಸಂಖ್ಯೆ ವಿವರ ಇಲ್ಲಿದೆ.

ರದ್ದು ವಿಸ್ತರಣೆಯಾದ ರೈಲುಗಳ ಪಟ್ಟಿ
* ತಿರುಪತಿ-ಕದಿರಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ರೈಲು (ಸಂಖ್ಯೆ 57405) 2025ರ ಮಾರ್ಚ್ 7 ರವರೆಗೆ ಮತ್ತೆ ತಾತ್ಕಾಲಿಕವಾಗಿ ರದ್ದುಗೊಳ್ಳಲಿದೆ. ಈ ರೈಲನ್ನು ಮೊದಲು ಫೆಬ್ರವರಿ 28 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು,
* ಕದಿರಿದೆವರಪಲ್ಲಿ ತಿರುಪತಿ ಡೈಲಿ ಪ್ಯಾಸೆಂಜರ್ ರೈಲು (ಸಂಖ್ಯೆ 57406) ಮಾರ್ಚ್ 8 ರವರೆಗೆ ರದ್ದುಗೊಳ್ಳಲಿದೆ. ಈ ರೈಲು ಮೊದಲು ಮಾರ್ಚ್ 1, 2025 ರವರೆಗೆ ಮಾತ್ರ ರದ್ದಾಗಿತ್ತು.
* ತಿರುಪತಿ-ಎಸ್ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲು (ಸಂಖ್ಯೆ 57401) ಮಾರ್ಚ್ 7ರವರೆಗೆ ರದ್ದಾಗಿರುತ್ತದೆ. ಈ ರೈಲು ಮೊದಲು ಫೆಬ್ರವರಿ 28, 2025 ರವರೆಗೆ ಮಾತ್ರವೇ ರದ್ದಾಗಿತ್ತು, ಇದೀಗ ಅದು ವಿಸ್ತರಣೆಗೊಂಡಿದೆ.
* ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ಡೈಲಿ ಪ್ಯಾಸೆಂಜರ್ ರೈಲು (ಸಂಖ್ಯೆ 57402) ಮಾರ್ಚ್ 8 ರವರೆಗೆ ರದ್ದಾಗಿರುತ್ತದೆ. ಈ ರೈಲು ಈ ಮೊದಲು ಮಾರ್ಚ್ 1ರವರೆಗೆ ರದ್ದುಗೊಳಿಸಿ ಅದೇಶಿಸಲಾಗಿತ್ತು.
ಮಿರಜ್-ಕ್ಯಾಸಲ್ ರಾಕ್ ರೈಲುಗಳ ಭಾಗಶಃ ರದ್ದತಿ ವಿಸ್ತರಣೆ
ಹುಬ್ಬಳ್ಳಿ ರೈಲ್ವೆ ವಿಭಾಗದ ಕ್ಯಾಸಲ್ ರಾಕ್-ಲೋಂಡಾ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ವಿದ್ಯುದೀಕರಣ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳಿಂದಾಗಿ, ಈ ಕೆಳಗಿನ ರೈಲು ಸೇವೆಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ. ವಿವರ ಇಲ್ಲಿದೆ.
* ಮಿರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17333) 2025 ರ ಮಾರ್ಚ್ 31 ರವರೆಗೆ ಲೋಂಡಾ-ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.
* ಕ್ಯಾಸಲ್ ರಾಕ್-ಮಿರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17334) ಮಾರ್ಚ್ 31 ರವರೆಗೆ ಕ್ಯಾಸಲ್ ರಾಕ್-ಲೋಂಡಾ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದ ಈ ರೈಲು ಹೊರಡಲಿದೆ. ಮೊದಲು ರೈಲು ಫೆಬ್ರವರಿ 28, 2025 ರವರೆಗೆ ಭಾಗಶಃ ರದ್ದುಗೊಳಿಸಲಾಗಿತ್ತು, ಅದನ್ನೀಗ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ.
11 ದಿನಗಳ ಕಾಲ ಬೆಳಗಾವಿ-ಮಿರಜ್ ವಿಶೇಷ ರೈಲು ರದ್ದು
* ಕುಡಚಿ-ಉಗಾರ ಖುರ್ದ್ ನಿಲ್ಯಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಿಮಿತ್ತ, ಈ ಕೆಳಗಿನ ರೈಲುಗಳನ್ನು 11 ದಿನಗಳ ಕಾಲ ಕುಡಚಿ-ಮಿರಜ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 07303 ಬೆಳಗಾವಿ ಮಿರಜ್ ಡೈಲಿ ಕಾಯ್ದಿರಿಸದ ವಿಶೇಷ ರೈಲು ಫೆಬ್ರವರಿ 27 ರಿಂದ ಮಾರ್ಚ್ 9, 2025 ರವರೆಗೆ ಕುಡಚಿ ಮಿರಜ್ ನಡುವ ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಕುಡಚಿಯಲ್ಲಿ ತನ್ನ ಪ್ರಯಾಣ ಅಂತ್ಯಗೊಳಿಸುತ್ತದೆ.
* ಬೆಳಗಾವಿ-ಮಿರಜ್ ಡೈಲಿ ಕಾಯ್ದಿರಿಸಿದ ವಿಶೇಷ ರೈಲು (ಸಂಖ್ಯೆ 07303) ಫೆಬ್ರವರಿ 27 ರಿಂದ ಮಾರ್ಚ್ 9 ರವರೆಗೆ, ಕುಡಚಿ-ಮಿರಜ್ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಕುಡಚಿಯಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
* ಮಿರಜ್-ಬೆಳಗಾವಿ ಡೈಲಿ ಕಾಯ್ದಿರಿಸಿದ ವಿಶೇಷ ರೈಲು (ಸಂಖ್ಯೆ 07304) ಫೆಬ್ರವರಿ 27 ರಿಂದ ಮಾರ್ಚ್ 9 ರವರೆಗೆ ಮಿರಜ್-ಕುಡಚಿ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಮಿರಜ್ ಬದಲಿಗೆ ಕುಡಚಿಯಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.












Click it and Unblock the Notifications