Railway Good News: ಬೆಂಗಳೂರು-ಕಲಬುರಗಿ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
Bengaluru-Kalaburagi Train: ಕರ್ನಾಟಕದಿಂದ ಹಬ್ಬಗಳ ಪ್ರಯುಕ್ತ ವಿಶೇಷ ರೈಲುಗಳ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಕರ್ನಾಟಕದ ವಿವಿಧ ಮೂಲಗಳವರೆಗೂ ರೈಲು ಸಾರಿಗೆ ಸಂಪರ್ಕ ಸಾಧಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನೈಋತ್ಯ ರೈಲ್ವೆ (SWR) ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ಆರಂಭಿಸಿದೆ.
ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ 6 ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸೇವೆ ಇದೇ ನವೆಂಬರ್ 22ರ ಶನಿವಾರದಿಂದ ಆರಂಭವಾಗಿದ್ದು ಡಿಸೆಂಬರ್ 28ರವರೆಗೆ ಸೇವೆ ಇರಲಿದೆ. ಈ ರೈಲುಗಳು ಕಲಬುರಗಿ-ಬೆಂಗಳೂರು-ಕಲಬುರಗಿವರೆಗೆ ಸಂಚಾರ ಮಾಡಲಿವೆ. ಒಟ್ಟು ಆರು ಟ್ರಿಪ್‌ಗಳ ಸೇವೆ ಇದಾಗಿದೆ. ಪ್ರಯಾಣಿಕರ ಹೆಚ್ಚಿದ ಬೇಡಿಕೆ ಗಮನದಲ್ಲಿಟ್ಟುಕೊಂಡು ಈ ವಿಶೇಷ ಸೇವೆಗೆ ಅನುಮೋದನೆ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು (06207) ನವೆಂಬರ್ 22ರಿಂದ ಡಿಸೆಂಬರ್ 27ರವರೆಗೆ ಪ್ರತೀ ಶನಿವಾರ ರಾತ್ರಿ 7:20 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಡುತ್ತದೆ. ಮರುದಿನ ದಿನ ಬೆಳಗ್ಗೆ 7:30ಕ್ಕೆ ಕಲಬುರಗಿಗೆ ತಲುಪುತ್ತದೆ. ಅದೇ ರೀತಿ ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು (06208) ನವೆಂಬರ್ 23ರಿಂದ ಡಿಸೆಂಬರ್ 28ರವರೆಗೆ ಪ್ರತೀ ಭಾನುವಾರ ಬೆಳಗ್ಗೆ 9:35 ಕ್ಕೆ ಕಲಬುರಗಿಯಿಂದ ಹೊರಡುತ್ತದೆ. ಅದೇ ದಿನ ರಾತ್ರಿ 8:30 ಕ್ಕೆ ಬೆಂಗಳೂರು ನಿಲ್ದಾಣ ಬಂದು ತಲುಪುತ್ತದೆ.
ಈ ರೈಲುಗಳು ಮಾರ್ಗ ಮಧ್ಯ ಎರಡು ಬದಿಯಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುತ್ತಾಕಲ್, ಯಾದಗಿರಿ, ರೈಚೂರು, ರಾಯಚೂರು ಈಸ್ಟ್ ಆದೆಂತಹ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿವೆ. ಪ್ರಯಾಣಿಕರಿಗೆ ಸುಗಮ ಸಂಚಾರ ಒದಗಿಸುವ ಉದ್ದೇಶದಿಂದ 22 ಕೋಚ್‌ಗಳನ್ನು ಹೊಂದಿರುವ ಈ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ರೈಲುಗಳ ಪ್ರಯಾಣಿಕರು ನಿಖರ ಸಮಯ ಮತ್ತು ನಿಲ್ದಾಣ ಮಾಹಿತಿ ಪಡೆಯಲು NTES ಆಪ್, 139 ಸೇವೆ, ಅಥವಾ www.enquiry.indianrail.gov.in ವೆಬ್‌ಸೈಟ್ ಬಳಕೆ ಮಾಡುವಂತೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications