ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ 'ಅವರಪ್ಪನಾಣೆಗೂ ಆಗಲ್ಲಾ' ಅಂದ್ರೆ, ಅದು ಆಗೋದು ಉಲ್ಟಾ

|
Google Oneindia Kannada News

Recommended Video

Lok Sabha Elections 2019 :ಈ ಮೂರು ಕ್ಷೇತ್ರಗಳನ್ನ ಕಾಂಗ್ರೆಸ್ ಬಿಟ್ಟುಕೊಡಲೆಂದು ಜೆಡಿಎಸ್ ಪಟ್ಟು ಹಿಡಿದಿರೋದ್ಯಾಕೆ?

ಮತ್ತೆ ಚುನಾವಣೆ ಎದುರಾಗುತ್ತಿದೆ, ರಾಜಕೀಯ ಮುಖಂಡರುಗಳ ಆರೋಪ, ಪ್ರತ್ಯಾರೋಪಗಳ ಇನ್ನೊಂದು ಧಾರವಾಹಿ ಆರಂಭವಾಗಿದೆ. ಆದರೆ, ಈ ಬಾರಿ, ಕಾಂಗ್ರೆಸ್ ಮತ್ತು ಜೆಡಿಎಸ್, ಒಬ್ಬರು ಇನ್ನೊಬ್ಬರನ್ನು ಟೀಕಿಸಲು ಹೋಗುವುದಿಲ್ಲ. ಯಾಕೆಂದರೆ, ಒಂದೋ ಇಬ್ಬರ ನಡುವೆ ದೋಸ್ತಿ, ಇಲ್ಲವೇ ಫ್ರೆಂಡ್ಲಿ ಫೈಟ್ ಎಂದು ಈಗಾಗಲೇ ಉಭಯ ಪಕ್ಷದ ಮುಖಂಡರು ಹೇಳಿದ್ದಾರೆ.

ಮಾಜಿ ಸಿಎಂ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಅವರ ಮಾತಿನ ಖದರ್ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹೇಗಿತ್ತೋ, ಅದೇ ರೀತಿ ಈಗಲೂ ಮುಂದುವರಿದಿದೆ. ಆದರೆ, ಈ ಬಾರಿ ಅವರ ಟಾರ್ಗೆಟ್ ಒನ್ & ಓನ್ಲೀ ಬಿಜೆಪಿ.

ಜೆಡಿಎಸ್‌ಗೆ 7 ಸೀಟು ಕೊಡಲು ಕಾಂಗ್ರೆಸ್ ತಂತ್ರ? ಸಿದ್ದು-ಗೌಡರ ಸಭೆಜೆಡಿಎಸ್‌ಗೆ 7 ಸೀಟು ಕೊಡಲು ಕಾಂಗ್ರೆಸ್ ತಂತ್ರ? ಸಿದ್ದು-ಗೌಡರ ಸಭೆ

ಕಳೆದ ಅಸೆಂಬ್ಲಿ ಚುನಾವಣೆಯ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯನ್ನೊಮ್ಮೆ ಅವಲೋಕಿಸಿದರೆ, ಅದೆಷ್ಟೋ ಬಾರಿ ' ಅವರಪ್ಪನಾಣೆಗೂ' ಪದವನ್ನು ಬಳಸಿದ್ದರು. ಅದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಹೊಸ ವಾಕ್ ಸಮರಕ್ಕೆ ನಾಂದಿ ಹಾಡಿತ್ತು.

ಕಾಂಗ್ರೆಸ್‌ ಮೇಲೆ ಸಿಟ್ಟಾದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್ಕಾಂಗ್ರೆಸ್‌ ಮೇಲೆ ಸಿಟ್ಟಾದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್

ಈಗ ಲೋಕಸಭಾ ಚುನಾವಣೆಯ ವೇಳೆ, ಸಿದ್ದರಾಮಯ್ಯ ಮತ್ತೆ ಆ ಪದವನ್ನು ಬಳಸಿದ್ದಾರೆ. ಅಂದು ಕುಮಾರಸ್ವಾಮಿ ವಿರುದ್ದ ಆ ಪದಪ್ರಯೋಗ ಮಾಡಿದ್ದ ಸಿದ್ದರಾಮಯ್ಯನವರು, ಈಗ ಪ್ರಧಾನಿ ಮೋದಿ ವಿರುದ್ದ 'ಅವರಪ್ಪನಾಣೆಗೂ' ಪದವನ್ನು ಬಳಸಿದ್ದಾರೆ.

ಯುವ ಕಾಂಗ್ರೆಸ್ ಘಟಕದ ಸಭೆಯನ್ನು ಉದ್ದೇಶಿಸಿ ಸಿದ್ದರಾಮಯ್ಯ

ಯುವ ಕಾಂಗ್ರೆಸ್ ಘಟಕದ ಸಭೆಯನ್ನು ಉದ್ದೇಶಿಸಿ ಸಿದ್ದರಾಮಯ್ಯ

ಮಂಗಳವಾರ (ಫೆ 19) ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಬಿಜೆಪಿ ತಿಪ್ಪರಲಾಗ ಹಾಕಿದರೂ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಆಗುವುದಿಲ್ಲ. ನರೇಂದ್ರ ಮೋದಿ ಅವರಪ್ಪನಾಣೆಗೂ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದಿದ್ದರು.

ದೇವೇಗೌಡ ಮತ್ತು ಕುಮಾರಸ್ವಾಮಿಯವರ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ

ದೇವೇಗೌಡ ಮತ್ತು ಕುಮಾರಸ್ವಾಮಿಯವರ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹೋದಲ್ಲಿ, ಬಂದಲೆಲ್ಲಾ, ಅದರಲ್ಲೂ ಪ್ರಮುಖವಾಗಿ, ಜೆಡಿಎಸ್ ಪ್ರಾಭಲ್ಯವಿರುವ ಕ್ಷೇತ್ರಗಳಲ್ಲಿ, ದೇವೇಗೌಡ ಮತ್ತು ಕುಮಾರಸ್ವಾಮಿಯವರ ವಿರುದ್ದ ಇನ್ನಿಲ್ಲದಂತೇ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿ ಕನಸು ಕಾಣುವುದನ್ನು ಬಿಡಲಿ, ಅವರು ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಎಂಡ್ ಟೀಂ, ಭಾರೀ ಮುಖಭಂಗವನ್ನು ಅನುಭವಿಸಿತ್ತು

ಸಿದ್ದರಾಮಯ್ಯ ಎಂಡ್ ಟೀಂ, ಭಾರೀ ಮುಖಭಂಗವನ್ನು ಅನುಭವಿಸಿತ್ತು

ಆದರೆ, ಆಗಿದ್ದೇನು. ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಸಿದ್ದರಾಮಯ್ಯ ಎಂಡ್ ಟೀಂ, ಭಾರೀ ಮುಖಭಂಗವನ್ನು ಅನುಭವಿಸಿತ್ತು. ಅವರಪ್ಪನಾಣೆಗೂ ಎಚ್ಡಿಕೆ ಸಿಎಂ ಆಗಲ್ಲ ಎಂದಿದ್ದ ಸಿದ್ದರಾಮಯ್ಯ, ತಾವೇ ಮುಂದೆ ನಿಂತು, ಕುಮಾರಸ್ವಾಮಿಯವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಬೇಕಾಯಿತು.

ಮೋದಿ ಒಬ್ಬ ಪ್ರಚಾರಪ್ರಿಯ. ಅವರಪ್ಪನಾಣೆಗೂ ಪ್ರಧಾನಿ ಆಗಲ್ಲ

ಮೋದಿ ಒಬ್ಬ ಪ್ರಚಾರಪ್ರಿಯ. ಅವರಪ್ಪನಾಣೆಗೂ ಪ್ರಧಾನಿ ಆಗಲ್ಲ

ಈಗ ಮೋದಿ ವಿರುದ್ದ ಗುಡುಗಿರುವ ಸಿದ್ದರಾಮಯ್ಯ, ಮೋದಿ ಒಬ್ಬ ಪ್ರಚಾರಪ್ರಿಯ. ಅವರಪ್ಪನಾಣೆಗೂ ಪ್ರಧಾನಿ ಆಗಲ್ಲ ಎಂದಿದ್ದಾರೆ. ಅಂದು ಕುಮಾರಸ್ವಾಮಿಗೆ ಹೇಳಿದ ಮಾತನ್ನು ಸಿದ್ದರಾಮಯ್ಯ ಈಗ ಮೋದಿಯವರಿಗೆ ಬಳಸುತ್ತಿದ್ದಾರೆ. ಸಿದ್ದರಾಮಯ್ಯ ಏನು ಹೇಳುತ್ತಾರೋ, ಅದರ ವಿರುದ್ದ ಮತದಾರ ನಡೆಯುತ್ತಾನೆ. ಹಾಗಾಗಿ, ಮೋದಿ ಮತ್ತೆ ಪ್ರಧಾನಿ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸೋತರೂ, ಇನ್ನೂ ಅವರಿಗೆ ಬುದ್ದಿ ಬಂದಿಲ್ಲ

ಚಾಮುಂಡೇಶ್ವರಿಯಲ್ಲಿ ಸೋತರೂ, ಇನ್ನೂ ಅವರಿಗೆ ಬುದ್ದಿ ಬಂದಿಲ್ಲ

ಸಿದ್ದರಾಮಯ್ಯ ಪದಬಳಕೆಯ ಬಗ್ಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಒಬ್ಬ ದುರಂಹಕಾರಿ. ಅವರಪ್ಪನಾಣೆಗೂ ಪದವನ್ನು ಕಳೆದ ಅಸೆಂಬ್ಲಿ ಚುನಾವಣೆಯಲ್ಲೂ ಬಳಸಿದ್ದರು. ಆದರೆ, ಎಚ್ಡಿಕೆ ಸಿಎಂ ಆದರು. ಈಗ ಮೋದಿ ವಿರುದ್ದ ಬಳಸಿದ್ದಾರೆ, ಹಾಗಾಗಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಚಾಮುಂಡೇಶ್ವರಿಯಲ್ಲಿ ಸೋತರೂ, ಇನ್ನೂ ಅವರಿಗೆ ಬುದ್ದಿಬಂದಿಲ್ಲ - ಜಗದೀಶ್ ಶೆಟ್ಟರ್

English summary
Swear on his father, Narendra Modi will not become Prime Minsiter again, Former CM and CLP Leader Siddaramaiah. He was using the same word during last assembly election against HD Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X