Cauvery Water Dispute: ತಮಿಳುನಾಡಿಗೆ ಪ್ರತಿ ದಿನ 5,000 ಕ್ಯೂಸೆಕ್ಸ್ ನೀರು ಬಿಡಲು ಆದೇಶ
Cauvery Water Dispute: ಬೆಂಗಳೂರು, ಸೆಪ್ಟೆಂಬರ್ 21: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಯಥಾವತ್ತಾಗಿ ಪಾಲಿಸುವಂತೆ ಸುಪ್ರೀಂ ಕೋರ್ಟ್ ನ್ಯಾ. ಬಿ.ಆರ್. ಗವಾಯಿ ನೇತೃತ್ವದ ಮೂವರು ಸದಸ್ಯರ ಪೀಠದಿಂದ ಆದೇಶ ಹೊರಡಿಸಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಲಾಗಿತ್ತು. ನಾವು 2,500 ಕ್ಯೂಸೆಕ್ಸ್ ನೀರನ್ನು ಮಾತ್ರವೇ ಬಿಡುಗಡೆ ಮಾಡಲು ಸಾಧ್ಯವಿದೆ. ಕಳೆದ ಎರಡು ತಿಂಗಳಿನಿಂದ ಮಳೆ ಕೊರತೆ ಇದೆ. ಆದ್ದರಿಂದ ನೀರು ಬಿಡಲಾಗಲ್ಲ ಎಂದು ಕರ್ನಾಟಕದ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದ್ದರು.

ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ಇದೆ, ರೈತರು ಎಲ್ಲೆಡೆ ನೀರಿನ ಅಭಾವವಿದೆ. ನಮಗೆ ಕುಡಿಯವ ನೀರಿನ ಅಭಾವವಿದೆ ಆದ್ದರಿಂದ ತಮಿಳುನಾಡಿನ ಬೆಳೆಗಳಿಗೆ ನೀರನ್ನು ಕೊಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು. ಆದರೆ ತಮಿಳುನಾಡು ಪರ ಮುಕುಲ್ ರೋಹ್ಟಗಿ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಆದೇಶ ಪಾಲಿಸಬೇಕು ಎಂದು ಹೇಳಿದ್ದರು.
ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ಇದೆ, ರೈತರು ಎಲ್ಲೆಡೆ ನೀರಿನ ಅಭಾವವಿದೆ. ನಮಗೆ ಕುಡಿಯವ ನೀರಿನ ಅಭಾವವಿದೆ ಆದ್ದರಿಂದ ತಮಿಳುನಾಡಿನ ಬೆಳೆಗಳಿಗೆ ನೀರನ್ನು ಕೊಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು. ಆದರೆ ತಮಿಳುನಾಡು ಪರ ಮುಕುಲ್ ರೋಹ್ಟಗಿ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಆದೇಶ ಪಾಲಿಸಬೇಕು ಎಂದು ಹೇಳಿದ್ದರು.
ತಮಿಳು ನಾಡಿಗೆ ಕಾವೇರಿ ನೀರು ಹರಿಸಿದರೆ ನಮ್ಮ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು. ಕುಡಿಯುವ ನೀರು ಅತ್ಯಂತ ಅಗತ್ಯವಾಗಿರುತ್ತದೆ. ನಮಗೆ 106 ಟಿಎಂಸಿ ನೀರು ಬೇಕಾಗುತ್ತದೆ. ಆದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆ ಮಳೆಯಾಗದಿರುವುದರಿಂದ ನಮ್ಮ ಡ್ಯಾಂಗಳಲ್ಲಿ ನೀರು ಬಹಳ ಕಡಿಮೆಯಾಗಿದೆ. ಬರ ಪರಿಸ್ಥಿತಿ ಕೂಡ ಉಂಟಾಗಬಹುದು. ನಮ್ಮಲ್ಲಿ ಈಗ 52 ಟಿಎಂಸಿ ನೀರು ಇದೆ, ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಕರ್ನಾಟಕ ಹೇಳಿತ್ತು.
ಗುರುವಾರವಷ್ಟೇ ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಕಾವೇರಿ ಜಲ ವಿವಾದ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಗಜೇಂದ್ರ ಸಿಂಗ್ ಶೇಖಾವತ್ ನಿವಾಸದಲ್ಲಿ ಭೇಟಿಯಾಗಿ ನೀರು ಹಂಚಿಕೆ ವಿವಾದದ ಕುರಿತು ಮಾತುಕತೆ ನಡೆಸಿದ್ದರು.
ಇಂದು ಗುರುವಾರ ಅರ್ಜಿ ವಿಚಾರಣೆ ನಡೆದು ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶವನ್ನು ಎತ್ತಿಹಿಡಿಯಲಾಗಿದೆ. 15 ದಿನ ಪ್ರತಿನಿತ್ಯ 5,000 ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶವನ್ನು ನೀಡಲಾಗಿದೆ. ತಮಿಳುನಾಡಿನ ಕುರುವೈ ಬೆಳೆಗೆಳಿಗೆ ನೀರು ಬಿಡಬೇಕು ಎಂದು ವಾದ ಮಾಡಲಾಯಿತು, ಆದರೆ ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆಯಿಂದ ನೀರು ಇಲ್ಲ. ನೀರು ಬಿಟ್ಟಿದ್ದೇ ಆದರೆ ನಮಗೆ ನೀರಿನ ಹಾಹಾಕಾರ ಬರುತ್ತದೆ ಎಂದು ಹೇಳಲಾಗಿತ್ತು.
ನಮ್ಮಲ್ಲಿ ಮುಂಗಾರು ಈ ಬಾರಿ ಸಮರ್ಪಕ ಪ್ರಮಾಣದಲ್ಲಿ ಅಗಿಲ್ಲ ಎಂದು ತಿಳಿಸಲಾಗಿತ್ತು. ಅಲ್ಲದೆ ಕಳೆದ ಒಂದು ತಿಂಗಳಿಂದ ಮಂಡ್ಯ ಸೇರಿದಂತೆ ಹಲವೆಡೆ ಕಾವೇರಿ ನೀರು ಬಿಡಬಾರದು ಎಂದು ರೈತರು, ಕನ್ನಡಪರ ಸಂಘಟನೆಗಳು, ನಟರು, ಹಲವಾರು ರಾಜಕೀಯ ನಾಯಕರು ಒತ್ತಾಯಿಸಿದ್ದರು.












Click it and Unblock the Notifications