ಕರ್ನಾಟಕದಲ್ಲಿ Thug Life ರಿಲೀಸ್‌ಗೆ ಗ್ರೀನ್‌ಸಿಗ್ನಲ್: ಕನ್ನಡಿಗರ ನಡೆಗೆ ಸುಪ್ರೀಂಕೋರ್ಟ್ ಹೇಳಿದ್ದೇನು?
ಕನ್ನಡದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಮಲ್ ಹಾಸನ್ ಅವರು ಕ್ಷಮೆ ಕೇಳುವವರೆಗೆ ಕರ್ನಾಟಕದಲ್ಲಿ ಅವರ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಬಾರದು ಎಂದು ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು. ಕರ್ನಾಟಕ ಹೈಕೋರ್ಟ್ ಕೂಡ ಕ್ಷಮೆ ಕೇಳುವಂತೆ ಕಮಲ್‌ಗೆ ಹೇಳಿತ್ತು. ಆದರೂ ಮೊಂಡಾಟ ಮುಂದುವರಿಸಿದ್ದ ಕಮಲ್ ತಮ್ಮ ಸಿನಿಮಾ ಬಿಡುಗಡೆಗೆ ಅವಕಾಶ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂಕೋರ್ಟ್‌ನಲ್ಲಿ ಕನ್ನಡಿಗರಿಗೆ ತೀವ್ರ ಹಿನ್ನಡೆಯಾಗಿದೆ. ಈ ವಿಚಾರವಾಗಿ ಕರ್ನಾಟಕ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ತಮಿಳು ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರ "ಥಗ್ ಲೈಫ್" ಚಿತ್ರ ಬಿಡುಗಡೆಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ಗ್ರೀನ್‌ಸಿಗ್ನಲ್ ನೀಡಿದೆ. ಜೊತೆಗೆ ಗುಂಪು ಬೆದರಿಕೆಗಳಿಗೆ ಕಾನೂನಿನ ನಿಯಮವನ್ನು ಒತ್ತೆಯಾಗಿ ಇಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಚಿತ್ರಮಂದಿರಗಳಲ್ಲಿ ಏನು ಪ್ರದರ್ಶಿಸಬೇಕೆಂದು "ಗೂಂಡಾಗಳ ಗುಂಪುಗಳು" ನಿರ್ಧರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಚಿತ್ರದ ಪ್ರದರ್ಶನದ ಮೇಲಿನ ನ್ಯಾಯಾಂಗೇತರ ನಿಷೇಧದ ಬಗ್ಗೆ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠ ಕಳವಳ ವ್ಯಕ್ತಪಡಿಸಿದೆ. ಕಾನೂನಿನ ನಿಯಮದ ಪ್ರಕಾರ ಸಿಬಿಎಫ್‌ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಚಿತ್ರವನ್ನು ಬಿಡುಗಡೆ ಮಾಡಬೇಕು. ರಾಜ್ಯವು ಅದರ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ. ಯಾರಾದರೂ ಒಂದು ಹೇಳಿಕೆ ನೀಡಿದ್ದರೆ, ನೀವು ಇನ್ನೊಂದು ಹೇಳಿಕೆಯ ಮೂಲಕ ಅದನ್ನು ಎದುರಿಸುತ್ತೀರಿ. ಚಿತ್ರಮಂದಿರಗಳನ್ನು ಸುಡುವುದಾಗಿ ನೀವು ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದೂ ಪೀಠ ಎಚ್ಚರಿಸಿದೆ.
ಕರ್ನಾಟಕದ ಜನರು ಕಮಲ್ ಹಾಸನ್ ಅವರ ಹೇಳಿಕೆಯನ್ನು ಒಪ್ಪದೇ ಇರಲು ಸ್ವತಂತ್ರರು. ಆದರೆ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂದು ಕೋರ್ಟ್ ಹೇಳಿದೆ. ಕರ್ನಾಟಕ ಮತ್ತು ಬೆಂಗಳೂರಿನ ಪ್ರಬುದ್ಧ ಜನರು ಅವರ ಹೇಳಿಕೆ ತಪ್ಪು ಎಂದು ನಂಬಿದರೆ, ಅವರು ಹಾಗೆ ಹೇಳಿಕೆ ನೀಡಬಹುದು. ಆದರೆ ಚಿತ್ರಮಂದಿರಗಳನ್ನು ಸುಡುವುದಾಗಿ ಬೆದರಿಕೆ ಹಾಕುವುದು ಏಕೆ? ಎಂದು ತರಾಟೆಗೆ ತೆಗೆದುಕೊಂಡಿದೆ.

ಕ್ಷಮೆಯಾಚಿಸಿ ಎಂದು ಹೈಕೋರ್ಟ್ ಹೇಳಿದ್ದೇಕೆ?
ಒಬ್ಬ ವ್ಯಕ್ತಿ ಹೇಳಿಕೆ ನೀಡಿದಾಗ ಎಲ್ಲರೂ ಭಾಗಿಯಾಗುತ್ತಾರೆ, ಈ ವ್ಯವಸ್ಥೆಯಲ್ಲಿ ಏನೋ ತಪ್ಪಿದೆ. ಹೈಕೋರ್ಟ್ ಕ್ಷಮೆಯಾಚಿಸಿ ಎಂದು ಏಕೆ ಹೇಳಬೇಕು? ಅದು ಅದರ ಪಾತ್ರವಲ್ಲ ಎಂದೂ ಕರ್ನಾಟಕ ಹೈಕೋರ್ಟ್ ನಡೆಯನ್ನು ಸುಪ್ರೀಂಕೋರ್ಟ್ ಖಂಡಿಸಿದೆ. ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾ ರಿಲೀಸ್‌ಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಕಮಲ್ ಹಾಸನ್ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆಗ ಕಮಲ್ ಯಾಕೆ ಇನ್ನೂ ಕ್ಷಮೆ ಕೇಳಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಕೂಡ ಕೇಳಿತ್ತು. ಈ ವಿಚಾರವಾಗಿ ಸುಪ್ರೀಂಕೋರ್ಟ್, ಹೈಕೋರ್ಟ್ ನಡೆಯನ್ನು ಪ್ರಶ್ನಿಸಿದೆ. ಜೊತೆಗೆ ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾ ರಿಲೀಸ್‌ಗೆ ಗ್ರೀನ್‌ಸಿಗ್ನಲ್ ನೀಡಿದೆ. ಗಲಭೆಗೆ ಅನುವು ಮಾಡಿಕೊಡದಂತೆ ಅದು ಇದೇ ವೇಳೆ ಸೂಚಿಸಿದೆ.












Click it and Unblock the Notifications