SWR: ಕೊಲ್ಲೂರು ಮೂಕಾಂಬಿಕೆ ಭಕ್ತರಿಗೆ ಗುಡ್‌ನ್ಯೂಸ್: ರೈಲು ನಿಲುಗಡೆಗೆ ಆದೇಶ: ವಿ.ಸೋಮಣ್ಣ
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳುವವರಿಗೆ ಕರ್ನಾಟಕ ರೈಲ್ವೆ ಖಾತೆ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ. ಈ ಭಾಗದಿಂದ ಕೊಲ್ಲೂರಿಗೆ ಪ್ರಯಾಣಿಸುವ ಕರ್ನಾಟಕದ ಭಕ್ತರಿಗೆ ಹಾಗೂ ನೆರೆಯ ರಾಜ್ಯದ ಭಕ್ತರಿಗೆ ಅನುಕೂಲವಾಗಲಿದೆ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮೂಕಾಂಬಿಕಾ ರೋಡ್ ಬೈಂದೂರಿನಲ್ಲಿ ನೂತನ ನಿಲುಗಡೆ ನೀಡಲಿದೆ ಎಂದು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿ ದರ್ಶನಕ್ಕಾಗಿ ಪ್ರಯಾಣಿಸುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಹಿತದೃಷ್ಠಿಯಿಂದ ಗೋವಾದ ಮಡಗಾಂವ್‌ನಿಂದ ಕೇರಳದ ಎರ್ನಾಕುಲಂವರೆಗೆ ಚಲಿಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 10215/10216) ಇನ್ನು ಮುಂದೆ ಮೂಕಾಂಬಿಕಾ ರೋಡ್ ಬೈಂದೂರಿನಲ್ಲಿ ನೂತನ ನಿಲುಗಡೆ ನೀಡಲಿದೆ. ತತಕ್ಷಣದಿಂದಲೇ ಅನ್ವಯವಾಗುವಂತೆ ಆದೇಶಿಸಲಾಗಿದೆ. ಈ ಭಾಗದ ಪ್ರಯಾಣಿಕರು ಈ ರೈಲು ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.

ಮಡಗಾಂವ್, ಗೋವಾ - ಎರ್ನಾಕುಲಂ, ಕೇರಳ ರೈಲು ನಿಲ್ದಾಣವರೆಗೆ ಸೇವೆ ನೀಡುತ್ತದೆ. ಗೋವಾದ ಮಡಗಾಂವ್ (MAO) ನಿಂದ ಕೇರಳದ ಎರ್ನಾಕುಲಂ ಜಂಕ್ಷನ್ (ERS) ವರೆಗಿನ ಈ ಎರಡು ನಿಲ್ದಾಣಗಳ ಮಧ್ಯ ಒಟ್ಟು 850 ಕಿ.ಮೀ ದೂರ ಇದೆ. ಸುಮಾರು 13 ಗಂಟೆ 20 ನಿಮಿಷ ತೆಗೆದುಕೊಳ್ಳುತ್ತದೆ. ಈ ಪ್ರಯಾಣವು ಸುರಂಗಗಳು ಮತ್ತು ಸೇತುವೆಗಳಿಗೆ ಹೆಸರಾದ ಸುಂದರವಾದ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಾದು ಹೋಗುತ್ತದೆ.
ಮಡಗಾಂವ್ ನಿಂದ ಹೊರಟು ಕಾರವಾರ ಮೂಲಕ ಕರ್ನಾಟಕದ ಕರಾವಳಿಯ ಪ್ರಮುಖ ಪ್ರದೇಶಗಳಾದ ಭಟ್ಕಳ, ಉಡುಪಿ, ಮಂಗಳೂರು ಜಂಕ್ಷನ್ ಹಾದು ಕಾಸರಗೋಡು, ಕಣ್ಣೂರು, ಕೋಝಿಕೋಡ್, ತಿರುರು, ಶೋರನೂರ್ ಜಂಕ್ಷನ್, ತ್ರಿಶೂರ್ , ಆಲುವಾ, ಎರ್ನಾಕುಲಂ ಜಂಕ್ಷನ್ ತಲುಪುತ್ತದೆ. ಈ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತಿದೆ. ಇದೀಗ ಹೆಚ್ಚುವರಿಯಾಗಿ ಮೂಕಾಂಬಿಕಾ ರೋಡ್ ಬೈಂದೂರಿನಲ್ಲಿ ನಿಲುಗಡೆ ನೀಡಲಿದೆ.
ಮಡ್ಗಾಂವ್ - ಎರ್ನಾಕುಲಂ SF ಎಕ್ಸ್‌ಪ್ರೆಸ್‌ನ ರೈಲು (10215) ಜೊತೆಗೆ ಇತರ ರೈಲುಗಳು ಸಹ GIMB NCJ EXP (16335), BVC KCVL EXP (19260), KERLA S KRANTI (12218), ಮತ್ತು TEN FESTIVAL SPL (09424) ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸಲಿವೆ. ಎರ್ನಾಕುಲಂ ಜಂಕ್ಷನ್ (ERS) 6 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಕೇರಳದ ಪ್ರಮುಖ ರೈಲು ನಿಲ್ದಾಣವಾಗಿದೆ.
ಸದ್ಯ ಈ ಹೆಚ್ಚುವರಿ ರೈಲು ನಿಲುಗಡೆಯಿಂದಾಗಿ ಕೊಲ್ಲೂರಿಗೆ ಉಡುಪಿ, ಮಂಗಳೂರು, ಕಾರವಾರ ಹಾಗೂ ಉತ್ತರ ಕರ್ನಾಟಕ, ಮಲೆನಾಡಿನಿಂದ ಆಗಮಿಸುವ ಭಕ್ತಾಧಿಕಾರಿಗಳಿಗೆ ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ರೈಲ್ವೆ ಇಲಾಖೆ ತಿಳಿಸಿದೆ.












Click it and Unblock the Notifications