Get Updates
Get notified of breaking news, exclusive insights, and must-see stories!

Sujatha Bhat: ಧರ್ಮಸ್ಥಳದಲ್ಲಿ ಅನನ್ಯಾ ಭಟ್ ಕಾಣೆ: ಕ್ಷಮಿಸಿ ನಾನು ಸುಳ್ಳು ಹೇಳಿದ್ದೇನೆ: ಸುಜಾತಾ ಭಟ್..Video

ಬೆಂಗಳೂರು, ಆಗಸ್ಟ್ 22: ಧರ್ಮಸ್ಥಳದಲ್ಲಿ ಸಾಕಷ್ಟು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ನಿಖೆ ನಡೆಯುತ್ತಿರುವಾಗಲೇ ನನ್ನ ಮಗಳು ಅನನ್ಯಾ ಭಟ್ ಸಹ 2003ರಲ್ಲಿ ಧರ್ಮಸ್ಥಳಕ್ಕೆ ಬಂದು ಕಾಣೆಯಾಗಿದ್ದಾಳೆ ಎಂದು ಸುಜಾತಾ ಭಟ್ ಎಂಬುವವರು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗಿದೆ. ಇಂದು ಶುಕ್ರವಾರ ಈ ರೀತಿಯಾಗಿ ನನ್ನ ಕಡೆಯಿಂದ ಮೂವರು ಹೇಳಿಸಿದ್ದಾರೆ. ಅನನ್ಯಾ ಭಟ್ ಎಂಬ ಅಸ್ತಿತ್ವವೇ ಇಲ್ಲ ಎಂಬುದನ್ನು ಸ್ವತಃ ಸುಜಾತಾ ಭಟ್ ಸತ್ಯ ಹೇಳಿದ್ದಾರೆ. ಕರ್ನಾಟಕದ ಜನರ ಮುಂದೆ ಧರ್ಮಸ್ಥಳ ವಿರುದ್ಧ ಯಾಕೆ ಈ ರೀತಿ ಸುಳ್ಳು ಹೇಳಿದ್ದೆ ಎಂಬುದನ್ನು ಅವರು ವಿವರಿಸಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಕರ್ನಾಟಕ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಧರ್ಮಸ್ಥಳಕ್ಕೆ ಸಂಬಂಧಿಸಿದ ಪ್ರಕರಣದ ಮೇಲೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ದಿನಕ್ಕೊಂದು ತಿರುವು ಪಡೆದಿದ್ದ ಪ್ರಕರಣದಲ್ಲಿ ತನಿಖೆ ಪ್ರಗತಿಯಲ್ಲಿರುವಾಗಲೇ ಸತ್ಯಗಳು ಒಂದೊಂದಾಗಿ ಹೊರ ಬರುತ್ತಿವೆ. ಕೊಟ್ಯಾನು ಕೋಟಿ ಧರ್ಮಸ್ಥಳ ಮಂಜುನಾಥನ ಭಕ್ತರ ಪ್ರಾರ್ಥನೆ ಫಲಿಸಿದೆ. ಆರೋಪಗಳ ಹಿಂದಿನ ಅಸಲಿ ಗುಟ್ಟು ಹೊರ ಬಿದ್ದಿದೆ. ಸದ್ಯ ಸುಜಾತಾ ಭಟ್ ತಪ್ಪೊಪ್ಪಿಕೊಂಡಿದ್ದಾರೆ. ತಮ್ಮಿಂದ ಒತ್ತಾಯಪೂರ್ವವಾಗಿ ಸುಳ್ಳು ಹೇಳಿಸಿದ್ದಾರೆ ಎಂದು ಸುಜಾತಾ ಭಟ್ ಕರುನಾಡಿನ ಜನರು ಹಾಗೂ ಧರ್ಮಸ್ಥಳ ಮುಂದೆ ಕ್ಷಮೆ ಯಾಚಿಸಿದ್ದಾರೆ. ಅನನ್ಯ ಭಟ್ ಎಂಬ ಮಗಳ ವಿಚಾರವೇ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ.

Sujatha Bhatt Admits False Claim in Dharmasthala Case Her Statement Video Viral

ಸುಜಾತಾ ಭಟ್ ಸತ್ಯ ಹೇಳಿದ್ದೇನು? ವಿಡಿಯೋದಲ್ಲೇನಿದೆ?

''ವಯೋವೃದ್ಧೆ ಈ ಸುಜಾತಾ ಭಟ್ ಅವರು, ಧರ್ಮಸ್ಥಳಕ್ಕೆ ನನ್ನ ಮಗಳು ಅನನ್ಯಾ ಭಟ್ ಬಂದಾಗ ಕಾಣೆಯಾಗಿದ್ದಳು ಎಂಬುದು ಸುಳ್ಳು. ಆಕೆಯ ಫೋಟೋ ತೋರಿಸುದ್ದು ನಿಜವಲ್ಲ. ಅದೆಲ್ಲವು ಸುಳ್ಳು. ನನಗೆ ಗಿರೀಶ್ ಮಟ್ಟೆಣ್ಣನವರ, ಜಯಂತ್ ಸೇರಿದಂತೆ ಮೂವರು ಬಂದು ಒತ್ತಾಯ ಪೂರ್ವಕವಾಗಿ ನನ್ನಿಂದ ಸುಳ್ಳು ಹೇಳಿಸಿದ್ದಾರೆ. ಆಸ್ತಿ ವಿಚಾರವಾಗಿ ನಾನು ಸುಳ್ಳು ಹೇಳಿದ್ದೇನೆ ಎಂದು ಸುಜಾತಾ ಭಟ್ ಸುದ್ದಿವಾಹಿನಿಯೊಂದಕ್ಕೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂದು, ನಿಜ ಹೇಳಿದ್ದಾರೆ.''

''ಅನನ್ಯಾ ಭಟ್ ಎಂಬುವ ಮಗಳು ನನಗೆ ಇಲ್ಲ. ಅವರು ಹೇಳಿಕೊಟ್ಟಿದ್ದಕ್ಕೆ ಮಗಳಿದ್ದಾಳೆ ಎಂದು ಸುಳ್ಳು ಹೇಳಿದ್ದೆ. ಅನನ್ಯ ಭಟ್ ಫೋಟೋ ರಿಲೀಸ್ ಮಾಡಿದ್ದೆಲ್ಲವು ನಕಲಿ. ಕರ್ನಾಟಕದ ಜನರಿಗೆ ಕ್ಷಮೇ ಕೇಳುತ್ತೇನೆ. ಧರ್ಮಸ್ಥಳಕ್ಕೂ ನಾನು ಕ್ಷಮೆ ಕೇಳುತ್ತೇನೆ ಎಂದು ಸುಜಾತ್ ಕ್ಷಮೆ ಕೋರಿದ್ದಾರೆ''.

''ನನಗೆ ಧರ್ಮಸ್ಥಳದ ಮೇಲಿನ ಸುಳ್ಳು ಆರೋಪ ವಿಚಾರ ಇಷ್ಟೊಂದು ದೊಟ್ಟ ಮಟ್ಟಕ್ಕೆ ಹೋಗುತ್ತದೆ. ಈ ಮಟ್ಟಕ್ಕೆ ಪ್ರಕರಣ ದೊಡ್ಡದಾಗುತ್ತೆ ಎಂದು ಕೊಂಡಿರಲಿಲ್ಲ. ಗಿರೀಶ್ ಮಟ್ಟೆಣ್ಣನವರ ಒಬ್ಬರೇ ಬಂದು ನನ್ನ ಭೇಟಿ ಮಾಡಿದ್ದರು. ನಾವು ನಿಮ್ಮ ಜೊತೆಗೆ ಇದ್ದೇವೆ. ಈ ರೀತಿ ಹೇಳುವಂತೆ ನನಗೆ ಒತ್ತಡ ಹೇರಿದ್ದರು. ನಾನು ಸುಳ್ಳು ಹೇಳಲು ಯಾವುದೇ ಹಣ ಪಡೆದಿಲ್ಲ. ಹಣದ ಆಮೀಷ ನನಗೆ ಒಡ್ಡಿಲ್ಲ'' ಎಂದು ಹಲವು ಸಂಗತಿಗಳನ್ನು ಸುಜಾತ್ ಬಿಚ್ಚಿಟ್ಟಿದ್ದಾರೆ.

ಗಿರೀಶ್ ಮಟ್ಟೆಣ್ಣನವರ ಬಂಧನ ಸಾಧ್ಯತೆ?

ಇದೇ ವಿಚಾರಕ್ಕಾಗಿ ಹೋರಾಡಿದ್ದ ಸರ್ಕಾರ ಹಾಗೂ ಧರ್ಮಸ್ಥಳ ವಿರುದ್ಧ ಮಾತನಾಡಿದ್ದ ಮಹೇಶ ಶೆಟ್ಟಿ ತಿಮರೊಡ್ಡಿ ಅವರು ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರ ಬಗ್ಗೆಯು ಮಾತನಾಡಿದ್ದರು. ಅದೇ ಕಾರಣಕ್ಕೆ ಅವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಧರ್ಮಸ್ಥಳ ಪ್ರಕರಣ ಹಾಗೂ ದೇವಸ್ಥಾನ ವಿಚಾರವಾಗಿ ಎಐ ವಿಡಿಯೋ ಬಳಸಿ ಸುಳ್ಳು ಹರಿಬಿಟ್ಟಿದ್ದ ಯೂಟ್ಯೂಬರ್ ಸಮೀರ್ ಎಂಡಿ ಬಂಧನ ಆಗಲಿದೆ ಎನ್ನಲಾಗಿತ್ತು. ಅಷ್ಟರಲ್ಲಿ ಸಮೀರ್‌ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ. ಇದೀಗ ಈ ಸುಜಾತಾ ಅವರ ಹೇಳಿಕೆ ಆಧಾರದಲ್ಲಿ ಗಿರೀಶ್ ಮಟ್ಟೆಣ್ಣನವರ್ ಅವರನ್ನು ಶನಿವಾರ ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+