ಸ್ಮಾರ್ಟ್‌ಸಿಟಿಗೆ ಕನ್ನಡ ಹೆಸರು ಸೂಚಿಸಿ, ಬಹುಮಾನ ಗೆಲ್ಲಿ
ಬೆಂಗಳೂರು, ಅಕ್ಟೋಬರ್ 05 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಯೋಜನೆಗೆ ಕರ್ನಾಟಕದ 6 ನಗರಗಳು ಆಯ್ಕೆಯಾಗಿವೆ. ಕನ್ನಡದಲ್ಲಿ ಸ್ಮಾರ್ಟ್ ಸಿಟಿಗಳಿಗೆ ಏನೆಂದು ಹೇಳಬೇಕು? ಎಂದು ನೀವು ಹೆಸರು ಸೂಚಿಸಿ, ಬಹುಮಾನ ಗೆಲ್ಲಬಹುದಾಗಿದೆ.
ಸ್ಮಾರ್ಟ್ ಸಿಟೀಸ್ ಇಂಡಿಯಾ ಫೌಂಡೇಶನ್ (ಎಸ್‌ಸಿಐಎಫ್) ಈ ಸ್ಪರ್ಧೆಯನ್ನು ಆಯೋಜಿಸಿದೆ. 'ಸ್ಮಾರ್ಟ್ ಸಿಟಿ'ಗೆ ಕನ್ನಡದಲ್ಲಿ ಪರ್ಯಾಯ ಪದ ಸೂಚಿಸುವ ಸ್ಪರ್ಧೆ ಇದಾಗಿದ್ದು, ಹೆಸರು ಸೂಚಿಸಲು ಅಕ್ಟೋಬರ್ 10ರ ತನಕ ಕಾಲಾವಕಾಶ ನೀಡಲಾಗಿದೆ.

ಜನರು ಸೂಚಿಸುವ ಹೆಸರುಗಳಲ್ಲಿ ಎಸ್‌ಸಿಐಎಫ್ ರಚಿಸಿರುವ ತೀರ್ಪುಗಾರರ ತಂಡವು ಅತ್ಯುತ್ತಮವಾದ ಹೆಸರನ್ನು ಆಯ್ಕೆ ಮಾಡಲಿದೆ. ಉತ್ತಮ ಹೆಸರು ಕಳುಹಿಸಿದವರಿಗೆ 10 ಸಾವಿರ ರೂ. ನಗದು ಬಹುಮಾನವಿದೆ. [ಕರ್ನಾಟಕಕ್ಕೆ 6 ಸ್ಮಾರ್ಟ್ ಸಿಟಿ]
ಅಕ್ಟೋಬರ್ 10 ಹೆಸರು ಸೂಚಿಸಲು ಕೊನೆಯ ದಿನವಾಗಿದೆ ಎಂದು ಹೇಳಿರುವ ಎಸ್‌ಸಿಐಎಫ್ ಅಧ್ಯಕ್ಷ ಎ. ರವೀಂದ್ರ ಅವರು, ಹೆಚ್ಚಿನ ಮಾಹಿತಿಗೆ www.thescif.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ. [ಗ್ರಾಮ ದತ್ತು ಪಡೆದ ವೆಂಕಯ್ಯ ನಾಯ್ಡು]
ಅಂದಹಾಗೆ ಕರ್ನಾಟಕದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಮತ್ತು ತುಮಕೂರು ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆ ಆಯ್ಕೆ ಮಾಡಿಕೊಳ್ಳಲಾಗಿದೆ. ಉತ್ತರ ಪ್ರದೇಶದ 13, ತಮಿಳುನಾಡಿನ 12, ಮಹಾರಾಷ್ಟ್ರ 10, ಮಧ್ಯಪ್ರದೇಶ 7, ಗುಜರಾತ್ 6, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನ 4, ಬಿಹಾರ, ಪಂಜಾಬ್, ಆಂಧ್ರಪ್ರದೇಶದಲ್ಲಿ ತಲಾ 3 ನಗರಗಳನ್ನು ಆಯ್ಕೆ ಮಾಡಲಾಗಿದೆ. [ಹೆಸರು ಸೂಚಿಸಲು ಇಲ್ಲಿ ಕ್ಲಿಕ್ ಮಾಡಿ]












Click it and Unblock the Notifications