• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಕ್ಕುಟ ಉದ್ಯಮದಲ್ಲಿ ಕ್ರಾಂತಿ ಮಾಡಲಿವೆ ಕೇರಳ ಮೂಲದ BB380 ಕೋಳಿಗಳು

|

ದಕ್ಷಿನ ಕನ್ನಡ, ಸಪ್ಟೆಂಬರ್ 29: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಪರಿಚಯಿಸಿರುವ ಹೊಸ ತಳಿಯ ಕೇರಳ ಮೂಲದ ಕೋಳಿಗಳು ಕೋಳಿ ಉದ್ದಿಮೆಗೆ ಹೊಸ ವೇಗ ತಂದುಕೊಡಲಿದೆ.

ಕೇರಳದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಬಿವಿ 380 ತಳಿಯ ಮೊಟ್ಟೆ ಇಡುವ ಕೋಳಿಗಳನ್ನು ಕರ್ನಾಟಕದಲ್ಲಿ ಮೊದಲಬಾರಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಪರಿಚಯಿಸಿದ್ದು, ಮೊದಲ ಪ್ರಯತ್ನದಲ್ಲೇ ಈ ಕೋಳಿಯ ಸಾಕಾಣಿಕೆ ಭಾರೀ ಲಾಭದಾಯಕವಾಗಿ ಪರಿಣಮಿಸುತ್ತಿದೆ. ಫಾರ್ಮ್ ಕೋಳಿ ಗಳ ಪೈಕಿ ಈ ಸಾವಯವ ಕೋಳಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ . ಇನ್ನೊಂದು ವಿಶೇಷತೆಯಂದರೆ ಈ ಕೋಳಿಗಳು 10 ತಿಂಗಳವರೆಗೆ ನಿರಂತರ ಮೊಟ್ಟೆ ಇಡುತ್ತವೆ!

ಆಪಲ್ ಸಂಸ್ಥೆಗೆ 68000 ಕೋಟಿ ರೂಪಾಯಿ ಕೊಡ್ತಿದೆ ಗೂಗಲ್!

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ಸ್ವಸಹಾಯ ಮತ್ತು ಪ್ರಗತಿ ಬಂಧು ಸಂಘದ ಸದಸ್ಯರಿಗೆ ಕುಕ್ಕುಟ ಉದ್ಯಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಾಯೋಗಿಕವಾಗಿ ಮಂಗಳೂರು ಹೊರವಲಯದ ಕಿನ್ನಿಗೋಳಿ ಮತ್ತು ಮೂಲ್ಕಿಯಲ್ಲಿ ಹೊಸ ತಳಿಗಳಾದ BB380 ತಳಿಗಳ ಸಾಕಾಣೆ ಪ್ರಾರಂಭ ಮಾಡಲಾಗಿದೆ.

5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

ಕೇರಳದಲ್ಲಿ ಯಶಸ್ವಿಯಾಗಿರುವ BB380 ತಳಿಯ ಕೋಳಿ

ಕೇರಳದಲ್ಲಿ ಯಶಸ್ವಿಯಾಗಿರುವ BB380 ತಳಿಯ ಕೋಳಿ

ಕೇರಳದಲ್ಲಿ ಯಶಸ್ಸು ಕಂಡಂತಹ BB380 ತಳಿಯ ಮೊಟ್ಟೆ ಇಡುವ ಕೋಳಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ರಾಜ್ಯದಲ್ಲಿ ಮೊದಲ ಬಾರಿ ಪರಿಚಯಿಸಿದೆ. ಶ್ರೀ ಕ್ಷೇತ್ರದ ಈ ಯೋಜನೆಗೆ ಕೇರಳದ ಎರ್ನಾಕುಲಂ ಜಿಲ್ಲೆಯ ಅಭಿಲಾಷ್ ಹ್ಯಾಚರೀಸ್ ಕಂಪನಿ ಕೋಳಿಗಳನ್ನು ಸರಬಾರಾಜು ಮಾಡುವ ಹೊಣೆ ಹೊತ್ತಿದೆ. ಈ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಕೋಳಿಗೂಡನ್ನು ನೀಡುತ್ತಿದ್ದು, ಇದುವರೆಗೆ ಒಟ್ಟು 200 ಕೋಳಿ ಗೂಡನ್ನು ವಿತರಿಸಲಾಗಿದೆ. ಕೋಳಿ ಗೂಡಿನ ಜೊತೆ 50 ಕೋಳಿ ಮತ್ತು 1.50 ಕಿಂಟ್ವಾಲ್ ಆಹಾರವನ್ನು ಒದಗಿಸಲಾಗುತ್ತಿದೆ. ಇದಕ್ಕೆ 35 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.

ನಿರಂತರ 10 ತಿಂಗಳು ಮೊಟ್ಟೆ ಇಡುತ್ತವೆ ಈ ಕೋಳಿಗಳು

ನಿರಂತರ 10 ತಿಂಗಳು ಮೊಟ್ಟೆ ಇಡುತ್ತವೆ ಈ ಕೋಳಿಗಳು

ಈ ಕೋಳಿ ಘಟಕಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆಯಿಂದಲೇ ಸಾಲ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಯೋಜನೆ ಅನ್ವಯ 120 ದಿನ ಪ್ರಾಯದ ಮೊಟ್ಟೆ ಇಡಲು ಸಿದ್ದವಾಗಿರುವ ಹೇಂಟೆಯನ್ನು ಫಲಾನುಭವಿಗಳಿಗೆ ಪೂರೈಸಲಾಗುತ್ತಿದ್ದು, ಪೂರಸಿದ ಒಂದೆರಡು ದಿನದಲ್ಲಿ ಕೋಳಿ ಮೊಟ್ಟೆ ಇಡಲು ಪ್ರಾರಂಬಿಸುತ್ತಿದೆ. ನಿರಂತರ 10 ತಿಂಗಳು ಮೊಟ್ಟೆ ಇಡುತ್ತದೆ. ಈ ಕೋಳಿಗಳು ಫರ್ಮ ಕೋಳಿಗಳಿಗಿಂತ ಭಿನ್ನವಾಗಿದ್ದು ನೋಡಲು ಊರ ನಾಟಿ ಕೋಳಿಯಂತೆ ಇವೆ.

ಹೊಸ ತಂತ್ರಜ್ಞಾನದ ಕೋಳಿ ಫಾರಂ

ಹೊಸ ತಂತ್ರಜ್ಞಾನದ ಕೋಳಿ ಫಾರಂ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪ್ರಾರಂಬಿಸಲಾದ ಈ ಘಟಕ ನೂತನ ತಂತ್ರಜ್ಞಾನದಿಂದ ಕೂಡಿದೆ, ಕೇರಳದಲ್ಲಿ ಯಶಸ್ಸು ಕಂಡಂತಹ ಈ ಘಟಕದಲ್ಲಿ , ಗೂಡಿನ ಹೊರ ಬಾಗದಲ್ಲಿ ಕೋಳಿಗೆ ಆಹಾರ ಹಾಕಲು ಒಂದು ಅರ್ಧಚಂದ್ರಾಕೃತಿಯ ಪೈಪ್ ನಂತಹ ಟ್ರೇ ಅಳವಡಿಸಲಾಗಿದೆ, ಗೋಡಿನ ಮೇಲ್ಭಾಗದಲ್ಲಿ ಒಂದು ಚಿಕ್ಕ ನೀರು ಸಂಗ್ರಹದ ಟ್ಯಾಂಕ್ ಅಳವಡಿಸಲಾಗಿದ್ದು, ಇದರಿಂದ ಗೋಡಿನ ಒಳಬಾಗಕ್ಕೆ ಪೈಪ್ ಮೂಲಕ ಸಂಪರ್ಕಿಸಿ ಒಂದು ನಾಬ್ ಅಳವಡಿಸಲಾಗಿದೆ, ಕೋಳಿ ತನಗೆ ಬೇಕದಾಗ ಈ ನಾಬ್ ಮೂಲಕ ನೀರು ಕುಡಿಯುತ್ತದೆ, ಕೋಳಿ ಮೊಟ್ಟೆ ಇಟ್ಟ ನಂತರ ಈ ಮೊಟ್ಟೆ ಗೂಡಿನಲ್ಲಿ ಅಳವಡಿಸಲಾಗಿದ್ದ ಪ್ರತ್ಯೇಕವಾದ ಟ್ರೇಗೆ ಬಂದು ಬೀಳುತ್ತದೆ, ಇದರಿಂದ ಮೊಟ್ಟೆ ಒಡೆದು ಹೋಗುದು ತಪ್ಪುತ್ತದೆ. ಕೋಳಿಯ ಮಲ ನೇರವಾಗಿ ನೆಲಕ್ಕೆ ಬೀಳುವಂತೆ ಈ ಘಟಕವನ್ನು ತಯಾರಿಸಲಾಗಿದೆ.

BB380 ಕೋಳಿ ಮೊಟ್ಟೆಗಳು ಸಾವಯವ ಗುಣಹೊಂದಿವೆ

BB380 ಕೋಳಿ ಮೊಟ್ಟೆಗಳು ಸಾವಯವ ಗುಣಹೊಂದಿವೆ

ಕೆಲ ವ್ಯಾಪಾರಿಗಳು ದುರಾಸೆಯಿಂದ ವಿಷಕಾರಿ ಹಾರ್ಮೋನ್ಸ್ ಗಳನ್ನು ನೀಡಿ ಬೆಳೆಸಿದ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ ಎನ್ನುವ ಆರೋಪಗಳಿಗೆ ಹಲವಾರು ಕಡೆ ಸಾಕ್ಷಿಗಳು ಸಿಕ್ಕಿವೆ . ಅಲ್ಲದೆ ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗಳು ಪಾರಂ ಕೋಳಿ ಮೊಟ್ಟೆಗಳಾಗಿದ್ದು, ಇದು ನಾಟಿ ಕೋಳಿ ಮೊಟ್ಟೆಗಳಷ್ಟು ಆರೋಗ್ಯಕ್ಕೆ ಉತ್ತಮವಲ್ಲ ಎಂಬ ನಂಬಿಕೆ ನರಲ್ಲಿದೆ. ಆದರೆ ಬಿವಿ 380 ತಳಿಯ ಕೋಳಿ ಮೊಟ್ಟೆಗಳು ಸಾವಯವ ಗುಣಮಟ್ಟವನ್ನು ಹೊಂದಿರುವ ಮೊಟ್ಟೆಗಳಾಗಿದೆ ಮಾತ್ರವಲ್ಲದೆ ರೋಗ ರುಜಿನಗಳಿಂದ ಮುಕ್ತವಾದ ಮತ್ತು ಹಾನಿಕಾರಕ ಹಾರ್ಮೋನ್ಸ್ ಗಳನ್ನು ಹೊಂದಿರದ ಮೊಟ್ಟೆಗಳಾಗಿದೆ ಇದು ಮಾನವ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮ ಇರೋಲ್ಲ ಎಂದು ಹೇಳಲಾಗಿದೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದಾಗಿದೆ

ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದಾಗಿದೆ

ಈ ಘಟಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತುಂಬಾ ಅನುಕೂಲವಾಗುತ್ತದೆ, ಈ ಘಟಕ್ಕೆ ಹೆಚ್ಚೇನು ಸ್ಥಳದ ಅವಶ್ಯಕತೆಯಿಲ್ಲ ಮನೆಯ ಹಿತಲಲ್ಲಿ, ಅಂಗಳದಲ್ಲಿ ಅಥವಾ ಮನೆಯ ಟ್ಯಾರಸಿನಲ್ಲಿ ಈ ಘಟಕವನ್ನು ಪ್ರಾರಂಭಿಸಬಹುದಾಗಿದೆ. ಎಲ್ಲಾ ಖರ್ಚು ವೆಚ್ಚಗಳು ಕಳೆದು ಒಂದು ಘಟಕದಿಂದ ವಾರಕ್ಕೆ ಸುಮಾರು 600 ರೂಪಾಯಿ ಲಾಭ ಗಳಿಸಬಹುದಾಗಿದೆ. ಸಾವಯವ ಮೊಟ್ಟೆಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದೆ . ಇದು ಕೇರಳದಿಂದ ಹೆಚ್ಚಾಗಿ ಬೇರೆ ದೇಶಗಳಿಗೆ ರಪ್ತು ಆಗುತ್ತಿದೆ.

ಇನ್ನಷ್ಟು dakshin kannada ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BV 380 hen poultry farming is introduced by Shri Kshethra Darmasthala Rural development project . Now it is very Successful in Dakshina Kannada District.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more