ಪಿಯು ವಿದ್ಯಾರ್ಥಿಗಳ ಪಠ್ಯಪುಸ್ತಕ ಸಮಸ್ಯೆ ಬಗೆಹರಿಸಿದ ಶಿಖಾ
ಪಠ್ಯಪುಸ್ತಕ ಖರೀದಿ ಸಮಸ್ಯೆಯನ್ನು ಮುಗಿಸಲು ಪಿಯು ಬೋರ್ಡ್ ನಿರ್ದೇಶಕಿ ಸಿ ಶಿಖಾ ಅವರು ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳನ್ನು ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು
ಬೆಂಗಳೂರು, ಮೇ 08: ಪಠ್ಯಪುಸ್ತಕ ಖರೀದಿ ಸಮಸ್ಯೆಯನ್ನು ಮುಗಿಸಲು ಪಿಯು ಬೋರ್ಡ್ ನಿರ್ದೇಶಕಿ ಸಿ ಶಿಖಾ ಅವರು ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳು ಇ ಬುಕ್ ಆಗಿ ಬದಲಾಗಲಿದ್ದು, ವಿದ್ಯಾರ್ಥಿಗಳು, ಇ-ಪಠ್ಯಪುಸ್ತಕಗಳನ್ನು ಇಲಾಖೆ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್ ಸಿಇ ಆರ್ ಟಿ) ಮಾದರಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮೊದಲ ಬಾರಿಗೆ ಪಠ್ಯ ಪುಸ್ತಕಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ತೀರ್ಮಾನಿಸಿದೆ ಈ ಮೂಲಕ ಪಬ್ಲಿಷರ್ಸ್ ಹಾಗೂ ದರ ಏರಿಳಿಕೆ ಗೊಂದಲಕ್ಕೆ ಮುಕ್ತಾಯ ಹಾಡಲಾಗುತ್ತದೆ ಎಂದು ಸಿ ಶಿಖಾ ತಿಳಿಸಿದರು.

ಎಲ್ಲಾ ಇ ಪುಸ್ತಕ ರೂಪದಲ್ಲಿರಲಿದೆ: ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕೋರ್ಸ್‌ಗೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನು ಈ ಬಾರಿಯ ಶೈಕ್ಷಣಿಕ ವರ್ಷ ಆರಂಭ ಆಗುವುದರೊಳಗೆ ಅಧಿಕೃತ ವೆಬ್‌ಸೈಟಿಗೆ (http://www.pue.kar.nic.in) ಹಾಕಲಾಗುತ್ತದೆ.
ಇಂಗ್ಲಿಷ್ ಪುಸ್ತಕಗಳನ್ನು ಎನ್‌ಸಿಇಆರ್‌ಟಿ ಮೂಲಕವೇ ಖರೀದಿಸಲಾಗುತ್ತದೆ. ಅಲ್ಲದೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಈ ಪುಸ್ತಕಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಕನ್ನಡಕ್ಕೆ ಭಾಷಾಂತರಿಸಿದ್ದು, ಅವುಗಳನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘ ಮುದ್ರಿಸುತ್ತಿದೆ.
ವಿಜ್ಞಾನ ಕೋರ್ಸ್‌ನ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಹಾಗೂ ಜೀವ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಎನ್‌ಸಿಇಆರ್‌ಟಿ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಇನ್ಮುಂದೆ ವಾಣಿಜ್ಯ ವಿಷಯ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.












Click it and Unblock the Notifications