ದಿನಕ್ಕೊಂದು ಬಿಜೆಪಿಯ ಅಸಮಾಧಾನದ ಕತೆಗಳು: ಕಾಂಗ್ರೆಸ್‌ ಲೇವಡಿ

ಬೆಂಗಳೂರು, ಆಗಸ್ಟ್ 29: ಕರ್ನಾಟಕ ವಿಧಾನಸಭೆಯಲ್ಲಿ ಹೀನಾಯ ಸೋಲಿನ ಬಳಿಕ ಬಿಜೆಪಿ ಕೇಂದ್ರ ನಾಯಕರ ಬಗ್ಗೆ ರಾಜ್ಯದ ಶಾಸಕರು ಹಾಗೂ ನಾಯಕರ ಅಸಮಾಧಾನದ ಮಾತುಗಳು ಇನ್ನು ನಿಲ್ಲುತ್ತಿಲ್ಲ. ಈಗ ಮತ್ತೊಬ್ಬ ಮಾಜಿ ಸಚಿವರು ಕೇಂದ್ರ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಡೆಯನ್ನು ಕಾಂಗ್ರೆಸ್‌ ಲೇವಡಿ ಮಾಡಿದೆ.

ಮಾಜಿ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ಅವರು ನಿನ್ನೆ ಹಿಂದೆ ತಪ್ಪಾಗಿದ್ದು, ಮುಂದೆ ತಪ್ಪಾಗದಂತೆ ನಡೆದುಕೊಳ್ತೀನೆ ಅಂತ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಯಾವುದೇ ಸ್ಥಾನಮಾನ ಕೊಡದ ಬಗ್ಗೆ ಅತೃಪ್ತಿ ಇದೆ. ಮೊನ್ನೆ ಗ್ರಾಮ ಪಂಚಾಯತಿ ಸದಸ್ಯರ ಸನ್ಮಾನ ಸಮಾರಂಭದಲ್ಲೂ ಕಡೆಗಣನೆ ಮಾಡಲಾಯ್ತು ಎಂದು ಪರೋಕ್ಷವಾಗಿ ಪ್ರಹ್ಲಾದ್ ಜೋಶಿ ವಿರುದ್ಧ ಬೇಸರ ಹೊರ ಹಾಕಿದ್ದರು.

ex-minister-shankar-patils-remarks

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ಚುನಾವಣೆಗೂ ಮೊದಲು ನಾನೇ ಸಿಎಂ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಂಡಿದ್ದ ಪ್ರಹ್ಲಾದ್‌ ಜೋಶಿ ವಿರುದ್ಧ ಬಿಜೆಪಿ ಶಾಸಕರೇ ಕಿಡಿಕಾರುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಮಕಾಡೆ ಮಲಗಿಸಿದ ಜೋಶಿಯವರು ಚುನಾವಣೆಯ ನಂತರವೂ ಬಿಜೆಪಿಯನ್ನು ಮುಗಿಸುವ ಕೆಲಸ ಮುಂದುವರೆಸಿದ್ದಾರೆ. ಆಲ್ ದ ಬೆಸ್ಟ್ ಜೋಶಿಯವರೇ ಎಂದು ಎಕ್ಸ್‌ ಮಾಡಿ ಕಾಲೆಳೆದಿದೆ.

ಕಾಂಗ್ರೆಸ್ ಸೇರುತ್ತಾರೆ ಅನ್ನೋ ವದಂತಿ ಬೆನ್ನಲ್ಲೇ ಇಂದುಮ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹುಬ್ಬಳ್ಳಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರ್ ಪಾಟೀಲ್ ಮುನೇನಕೊಪ್ಪ, ಯಾವ ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ ಮತ್ತು ಸದ್ಯ ಬಿಜೆಪಿ ತೊರೆಯಲ್ಲ. ನಾನು ಸದ್ಯಕ್ಕೆ ಕಾಂಗ್ರೆಸ್ ಗೆ ಹೋಗಲ್ಲ ಹಾಗೂ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗುವ ಇಚ್ಛೆಯೂ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ನನ್ನ ಬೆಳವಣಿಗೆಯಲ್ಲಿ ಶೆಟ್ಟರ್ ಮಹತ್ವದ ಕಾರ್ಯವಿದೆ. ದಿ. ಅನಂತಕುಮಾರ್ ಇದ್ದರೆ ನನಗೆ ಈ ರೀತಿ ಆಗ್ತಿರಲಿಲ್ಲ. ಜನವರಿ ತಿಂಗಳಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್ ನವರು ನನ್ನ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ಪಕ್ಷಾಂತರ ವಿಚಾರದ ಬಗ್ಗೆ ಮುಂದೆ ತೀರ್ಮಾನಿಸುತ್ತೇನೆ ಎಂದು ಹೇಳಿದರು.

ವೈಯಕ್ತಿವಾಗಿ ಜೋಶಿ ಅವರ ಜೊತೆಗೆ ಒಳ್ಳೆ ಸಂಬಂಧವಿದೆ. ಆದರೆ ರಾಜಕೀಯವಾಗಿ ಕೆಲವೊಂದು ಭಿನ್ನಾಭಿಪ್ರಾಯಗಳಿವೆ. ಲೋಕಸಭೆ ಗೆ ಸ್ಪರ್ಧೆಸೋ ವಿಚಾರ ಬಂದಾಗ ಮುಂದೆ ತೀರ್ಮಾನ ಮಾಡುತ್ತೇನೆ. ನಾನು ಮಂತ್ರಿ ಇದ್ರೂ ನಾಯಕರನ್ನೇ ಕೇಳಿ ನಿರ್ಧಾರ ಕೈಗೊಳ್ಳಬೇಕಾಗಿತ್ತು. ನನ್ನ ಸೋಲಿಗೆ ಏನು ಕಾರಣ ಅಂತ ಪಕ್ಷದ ವೇದಿಕೆಯಲ್ಲಿ ಚರ್ಚಿಸಿದ್ದೇನೆ. ವ್ಯಕ್ತಿಗೆ ಹೆದರಿ ಮನೆಯಲ್ಲಿ ಕೂತ ವ್ಯಕ್ತಿ ನಾನಲ್ಲ. ಆದ್ರೆ ಹಿರಿಯರಿಗೆ ಗೌರವ ಕೊಡಬೇಕೆಂದು ಸುಮ್ಮನಿದ್ದೇನೆ ಎಂದು ತಮ್ಮ ಬೇಸರ ಹೊರ ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+