ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತುಗಳಿಗೆ ತಡೆ

ಬೆಂಗಳೂರು, ಮೇ 06; ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್‌ಗಳಲ್ಲಿ ತಂಬಾಕು ಹಾಗೂ ಪಾನ್ ಸೇವನೆಗೆ ಪ್ರಚೋದಿಸುವ ಜಾಹೀರಾತು ನೀಡದಂತೆ ಕೋರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಪತ್ರವನ್ನು ಬರೆದಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಗಳ ಅನ್ವಯ ಈ ಪತ್ರವನ್ನು ಬರೆದು ಮನವಿ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಕುರಿತು ಪತ್ರವನ್ನು ಬರೆಯಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯಾದ ಕೋಟ್ಟಾ -2003 (COTPA-2003) ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಸದರಿ ಕಾರ್ಯಕ್ರಮದ ಪ್ರಮುಖವಾದ ಉದ್ದೇಶವಾಗಿರುತ್ತದೆ ಎಂದು ಹೇಳಿದೆ.

Stop Tobacco Advertisement In KSRTC Bus

2016-17 Global Adult Tobacco Survey (GATS-2)ರಂತೆ ರಾಜ್ಯದಲ್ಲಿ ಶೇ 22.8ರಷ್ಟು ವಯಸ್ಕರು ಯಾವುದಾದರೂ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದು, ಶೇ 23.9 ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ ಸುಮಾರು 19.8 ವಯಸ್ಸಿಗೆ ರಾಜ್ಯದಲ್ಲಿ ಯುವಕರು ತಂಬಾಕು ಸೇವನೆಯನ್ನು ಪ್ರಾರಂಭಿಸುತ್ತಾರೆ ಎನ್ನುವ ಆಘಾತಕಾರಿ ವಿಷಯದ ವರದಿಯನ್ನು ಉಲ್ಲೇಖಿಸಿರುತ್ತಾರೆ ಎಂದು ತಿಳಿಸಿದೆ.

ಬಸ್ಸುಗಳಲ್ಲಿ ತಂಬಾಕು ಜಾಹೀರಾತು; ಇತ್ತೀಚೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲ ಉತ್ಪನ್ನಗಳ ಪ್ರಮುಖ ಬ್ರಾಂಡ್‌ಗಳಾದ ವಿಮಲ್, ಕೂಲ್ ಲಿಪ್, ಆರ್. ಎಮ್. ಡಿಗಳನ್ನು ಬಸ್ಸು ಬ್ರಾಂಡ್‌ಗಳ ಮೂಲಕ ಜಾಹೀರಾತು ಮಾಡುತ್ತಿರುವುದು ಕಂಡುಬಂದಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Stop Tobacco Advertisement In KSRTC Bus

ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು ನೀಡುವುದು ಕೋಟಾ ಕಾಯ್ದೆ-2003ರ ಸೆಕ್ಷನ್ 5 WHO FCTC 5.3 Article ರಾಜ್ಯ ನಿಯಮಾವಳಿಯ ಉಲ್ಲಂಘನೆಯಾಗಿರುತ್ತದೆ. ಪಾನ್ ಮಸಾಲ ಉತ್ಪನ್ನಗಳ ಜಾಹೀರಾತು ನೀಡುವುದರ ಅದೇ ತರಹದ ಪ್ಯಾಕೇಜುಗಳ ತಂಬಾಕು ಉತ್ಪನ್ನಗಳ ಪರೋಕ್ಷ ಜಾಹೀರಾತು ಬಸ್‌ ಬ್ರಾಂಡ್‌ಗಳ ಮೂಲಕ ನಡೆಯುತ್ತಿರುವುದು ಕಂಡುಬಂದಿರುತ್ತದೆ ಎಂದು ಹೇಳಿದೆ.

ಸಾಮಾನ್ಯವಾಗಿ ಯುವಕರು ಜಾಹೀರಾತುಗಳಿಂದ ಉತ್ತೇಜನಗೊಂಡು ಆರೋಗ್ಯಕ್ಕೆ ಹಾನಿಕಾರವೆಂದು ಸ್ವತಃ ಕಂಪೆನಿಯವರೆ ಘೋಷಣೆ ಮಾಡಿರುವ ಈ ಮಾದರಿ ಉತ್ಪನ್ನಗಳನ್ನು ಸೇವನೆ ಮಾಡಿ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದೆ.

ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಮುಖ ಭಾಗಿದಾರರಾದ ಸಾರಿಗೆ ಇಲಾಖೆ ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಂಡು, ತಂಬಾಕು ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ನೀಡಬಾರದೆಂದು ಈ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಮನವಿ ಮಾಡಿದ್ದಾರೆ.

ಬಸ್‌ಗಳಲ್ಲಿ ವಿಮಲ್ ಸೇರಿದಂತೆ ಹಲವು ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಹಾಕಲಾಗಿದೆ. ಈ ಜಾಹೀರಾತುಗಳಿಂದಲೂ ಕೆಎಸ್ಆರ್‌ಟಿಸಿಗೆ ಆದಾಯ ಬರುತ್ತದೆ. ಈ ಜಾಹೀರಾತುಗಳ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ತಂಬಾಕು ಉತ್ಪನ್ನಗಳ ಜಾಹೀರಾತು ಹಾಕದಂತೆ ಪತ್ರದಲ್ಲಿ ಮನವಿ ಮಾಡಿದೆ. ಕೆಎಸ್ಆರ್‌ಟಿಸಿ ಯಾವ ಮಾದರಿ ಜಾಹೀರಾತು ಇರಬೇಕು ಎಂಬ ಬಗ್ಗೆ ನಿಯಮ ರೂಪಿಸಿ, ಈ ತಂಬಾಕು ಉತ್ಪನ್ನಗಳ ಜಾಹೀರಾತು ತೆರವು ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+