ಮೂಡಬಿದಿರೆ : ಕಳುವಾಗಿದ್ದ ಮೂರ್ತಿಗಳು ಮಠಕ್ಕೆ ವಾಪಸ್

ಮೂಡಬಿದಿರೆ, ಡಿ.22 : 2013ರಲ್ಲಿ ಸಿದ್ಧಾಂತ ದರ್ಶನ ಮಂದಿರದಿಂದ ಕಳುವಾಗಿದ್ದ ಕೋಟ್ಯಂತರ ರೂ.ಮೌಲ್ಯದ ಬೆಲೆ ಬಾಳುವ ತೀರ್ಥಂಕರರ 15 ಪ್ರತಿಮೆಗಳನ್ನು ಮೂಡುಬಿದಿರೆ ನ್ಯಾಯಾಲಯವು ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದೆ. ಮಂದಿರದಲ್ಲಿದ್ದ 52 ತೀರ್ಥಂಕರರ ಮೂರ್ತಿಗಳ ಪೈಕಿ 15 ಮೂರ್ತಿಗಳನ್ನು ಕಳವು ಮಾಡಲಾಗಿತ್ತು.

ಭಾನುವಾರ ಮೂರ್ತಿಗಳನ್ನು ಜೈನ ಮಠಕ್ಕೆ ತರಲಾಗಿದ್ದು ಮಠದಲ್ಲಿ ವಿಶೇಷ ಅಭಿಷೇಕ ಮಾಡಲಾಯಿತು. ಮೂರ್ತಿಗಳು ತಮ್ಮ ವಶಕ್ಕೆ ಸಿಕ್ಕಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಶ್ರೀಗಳು ಮೂರ್ತಿಗಳು ಮಠಕ್ಕೆ ಮರಳಿ ಬಂದಿರುವುದು ದೇವರು ಬಂದಷ್ಟು ಸಂತೋಷವಾಗಿದೆ ಇವುಗಳನ್ನು ಸುರಕ್ಷಿತವಾಗಿಡಲಾಗುವುದು ಎಂದು ಹೇಳಿದ್ದಾರೆ. [ಜೈನ ವಿಗ್ರಹ ಕದ್ದವ ಸಿಕ್ಕಿಬಿದ್ದ]

Moodbidri

ಮಂದಿರದಲ್ಲಿ ಒಟ್ಟು 52 ತೀರ್ಥಂಕರರ ಮೂರ್ತಿಗಳ ಪೈಕಿ 15 ಮೂರ್ತಿಗಳನ್ನು 2013ರಲ್ಲಿ ಕಳವು ಮಾಡಲಾಗಿತ್ತು. ಚಂದ್ರನಾಥ, ಪಾರ್ಶ್ವನಾಥ ಸೇರಿದಂತೆ ಮೂರು ಬಂಗಾರ, ಎರಡು ನೀಲಿ ಕಲ್ಲಿನ, ಒಂದು ಪಚ್ಚೆ ಕಲ್ಲು, ಕುಳಿತ ಭಂಗಿಯ 2 ಇಂಚಿನ ಗೋಮಟೇಶ್ವರ ಮೂರ್ತಿ ಸೇರಿಂದತೆ 15 ಮೂರ್ತಿಗಳು ಕಳುವಾಗಿದ್ದವು. [ಮಠದ ವಿಗ್ರಹಗಳು ವಾಪಸ್]

ಪ್ರಕರಣದ ತನಿಖೆ ಆರಂಭಿಸಿದ ಮೂಡಬಿದಿರೆ ಪೊಲೀಸರು ಆರೋಪಿ ಸಂತೋಷ್ ದಾಸ್‌ನನ್ನು ಒರಿಸ್ಸಾದ ಭುವನೇಶ್ವರದಲ್ಲಿ ಬಂಧಿಸಿದ್ದರು. ಆತನಿಂದ ಮೂರು ವಿಗ್ರಹಗಳು ಹಾಗೂ ಮೂರ್ತಿಯ ಕರಗಿಸಿದ ಬಂಗಾರದ ಬಿಲ್ಲೆಯನ್ನು ವಶಪಡಿಸಿಕೊಳ್ಳಲಾಗಿತ್ತು. ಉಳಿದ ಮೂರ್ತಿಗಳನ್ನು ಪೊಲೀಸ್ ಕಮೀಷನರ್ ಕಚೇರಿಗೆ ಕೋರಿಯರ್ ಮೂಲಕ ತಲುಪಿದ್ದವು. [ಜೈನ ಬಸದಿಯಲ್ಲಿ ಮತ್ತೆ ಕಳವು]

ಎಲ್ಲಾ ಮೂರ್ತಿಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಮೂರ್ತಿಗಳನ್ನು ಯಾರ ವಶಕ್ಕೆ ಒಪ್ಪಿಸಬೇಕೆಂಬ ಬಗ್ಗೆ ವಿವಾದ ಉಂಟಾಗಿತ್ತು. ಸದ್ಯ ಶನಿವಾರ ಕೋರ್ಟ್ ಮೂರ್ತಿಗಳನ್ನು ಕೆಲವು ಷರತ್ತುಗಳೊಂದಿಗೆ ಜೈನ ಮಠಕ್ಕೆ ಒಪ್ಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+