ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಚಿಕೆಗೇಡಿನ ಸಂಗತಿ: ತೈಲ ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ಅರ್ಥಗರ್ಭಿತ ಟ್ವೀಟ್

|
Google Oneindia Kannada News

ಬೆಂಗಳೂರು, ಮಾರ್ಚ್ 9: ಶತಕದಂಚಿನಲ್ಲಿರುವ ಪೆಟ್ರೋಲ್ ಬೆಲೆ ಮತ್ತು ತೈಲ ಉತ್ಪನ್ನಗಳ ಬೆಲೆ ಏರಿಕೆಯ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಾಲುಸಾಲು ಟ್ವೀಟ್ ಮಾಡಿ, ಬಿಜೆಪಿ ಸರಕಾರದ ಕಿವಿಹಿಂಡಿದ್ದಾರೆ.

ಅವರು ಮಾಡಿರುವ ಸರಣಿ ಟ್ವೀಟ್ ಹೀಗಿದೆ, "ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮುಖ್ಯ ಕಾರಣ. ಈ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷ್ಕರುಣೆಯಿಂದ ಹೇರುತ್ತಿರುವ ತೆರಿಗೆಗಳು ಕಾರಣ. @BJP4India ದುರಾಡಳಿತಕ್ಕೆ ಸಿಕ್ಕಿ ದೇಶದ ಜನ ನರಳಾಡುತ್ತಿದ್ದಾರೆ".

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಶಾಸಕಾಂಗ ಸಭೆ ನಿರ್ಣಯಗಳು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಶಾಸಕಾಂಗ ಸಭೆ ನಿರ್ಣಯಗಳು

"ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 125 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ 57 ರೂಪಾಯಿ ಇತ್ತು. ಈಗ ಕಚ್ಚಾತೈಲ ಬೆಲೆ ಬ್ಯಾರಲ್ ಗೆ ಕೇವಲ 54.77 ಡಾಲರ್ ಇರುವಾಗ ಪೆಟ್ರೋಲ್ ಬೆಲೆ 94ರಿಂದ 100 ರೂಪಾಯಿ ಆಗಿದೆ. @BJP4Karnataka ಇದೆನಾ ನಿಮ್ಮ ಅಚ್ಚೇ ದಿನ್?".

"ಕಳೆದ ವರ್ಷ ಇದೇ ದಿನ ದೇಶದಲ್ಲಿ ಪೆಟ್ರೋಲ್‌ಗೆ ರೂ.75 ಹಾಗೂ ಡೀಸೆಲ್‌ಗೆ ರೂ.67 ಇತ್ತು. ಒಂದೇ ವರ್ಷದಲ್ಲಿ ಸುಮಾರು ರೂ.20 ಏರಿದೆ. ಮನಮೋಹನ್ ಸಿಂಗ್ ನೇತ್ರತ್ವದ ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಸು ಏರಿಕೆಯಾದರೂ ಪ್ರತಿಭಟಿಸುತ್ತಿದ್ದ @BJP4Karnataka ನಾಯಕರು ಈಗೆಲ್ಲಿ ಅಡಗಿ ಕೂತಿದ್ದಾರೆ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯರನ್ನು ವಿಪಕ್ಷದಲ್ಲಿ ಕೂರಿಸದೇ ಹೋದರೆ ನಾನು ಯಡಿಯೂರಪ್ಪನೇ ಅಲ್ಲ!ಸಿದ್ದರಾಮಯ್ಯರನ್ನು ವಿಪಕ್ಷದಲ್ಲಿ ಕೂರಿಸದೇ ಹೋದರೆ ನಾನು ಯಡಿಯೂರಪ್ಪನೇ ಅಲ್ಲ!

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕಾರಣ ಎಂದು ಸಬೂಬು ಕೊಡುವ @BJP4Karnataka ನಾಯಕರು, ಮೋದಿ ಅಧಿಕಾರಕ್ಕೆ ಬಂದರೆ ಡಾಲರ್ ಮೌಲ್ಯವನ್ನು ರೂ.20 ಕ್ಕೆ ಇಳಿಸ್ತೀವಿ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ @nalinkateel ಅವರ ಮಾತನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ.

ಪ್ರಧಾನಿ ಮೋದಿಯವರ ದುರಾಡಳಿತಕ್ಕೆ ಸಾಕ್ಷಿಯಲ್ಲವೇ?

ಪ್ರಧಾನಿ ಮೋದಿಯವರ ದುರಾಡಳಿತಕ್ಕೆ ಸಾಕ್ಷಿಯಲ್ಲವೇ?

2013 ರಲ್ಲಿ ಒಂದು ಡಾಲರ್ ಮೌಲ್ಯ 54.94 ರೂಪಾಯಿಯಾಗಿತ್ತು. ಇಂದು ಡಾಲರ್ ಮೌಲ್ಯ 73 ರೂಪಾಯಿಯಾಗಿದೆ. 2014 ರ ನಂತರ ರೂಪಾಯಿ ಮೌಲ್ಯ ಕುಸಿಯಲು ಪ್ರಧಾನಿ @narendramodi ಅವರ ದುರಾಡಳಿತ ಕಾರಣವಲ್ಲವೇ?

ಕೇಂದ್ರ ಸರ್ಕಾರ 2015 ರಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮೇಲೆ ರೂ.9.20 ಹಾಗೂ ಡೀಸೆಲ್ ಮೇಲೆ ರೂ.3.45 ಅಬಕಾರಿ ಸುಂಕ ವಿಧಿಸುತ್ತಿತ್ತು. ಈ ವರ್ಷ ಪೆಟ್ರೋಲ್ ಮೇಲೆ ರೂ.32.98 ಹಾಗೂ ಡೀಸೆಲ್ ಮೇಲೆ ರೂ.31.84 ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಹಾಗಾದರೆ ಪೆಟ್ರೋಲ್ ಬೆಲೆ ಏರಿಕೆಗೆ ಹಿಂದಿನ ಸರ್ಕಾರ ಕಾರಣವೋ ಅಥವಾ ತೆರಿಗೆ ಹಚ್ಚಳವೋ?

ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯಂ ಸ್ವಾಮಿ

ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯಂ ಸ್ವಾಮಿ

ಪೆಟ್ರೋಲ್ ಬೆಲೆ ರಾಮನ ಭಾರತದಲ್ಲಿ ರೂ.93, ಸೀತೆಯ ನೇಪಾಳದಲ್ಲಿ ರೂ.53 ರಾವಣನ ಲಂಕೆಯಲ್ಲಿ ರೂ.51 ಇದೆ ಅಂತ ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯಂ ಸ್ವಾಮಿ ಅವರೇ ತಮ್ಮ ಟ್ವೀಟ್‌ನಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆ ಇದೆಯಾ?

Recommended Video

ನನ್ನ ವಿರುದ್ಧ ತೆವಲಿಗೆ ಮಾತನಾಡುವುದು ನಿಲ್ಲಿಸಬೇಕು-ಹೆಚ್ ಡಿಕೆಗೆ ಪರೋಕ್ಷವಾಗಿ ಕಲ್ಲಹಳ್ಳಿ ಟಾಂಗ್ | Oneindia Kannada
ವಿದೇಶಿ ಅವಲಂಬನೆ ಕಡಿಮೆ ಮಾಡಲು ಈವರೆಗೆ ಮಾಡಿದ್ದಾದರೂ ಏನು?

ವಿದೇಶಿ ಅವಲಂಬನೆ ಕಡಿಮೆ ಮಾಡಲು ಈವರೆಗೆ ಮಾಡಿದ್ದಾದರೂ ಏನು?

2013-14 ರಲ್ಲಿ ಭಾರತ 184 ಮಿಲಿಯನ್ ಟನ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿತ್ತು, ಇದು 2019-20 ರಲ್ಲಿ 228 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ. ಕಚ್ಚಾತೈಲ ಆಮದಿನಲ್ಲಿ ಶೇ.10 ಕಡಿಮೆಯಾದರೂ ದೇಶ ಅಭಿವೃದ್ಧಿಯಾಗಿಬಿಡುತ್ತೆ ಅಂದಿದ್ದ ಮೋದಿಯವರು ಕಚ್ಚಾತೈಲಕ್ಕಾಗಿ ವಿದೇಶಿ ಅವಲಂಬನೆ ಕಡಿಮೆ ಮಾಡಲು ಈವರೆಗೆ ಮಾಡಿದ್ದಾದರೂ ಏನು?

English summary
Summary: Steep Hike In The Petroleum Products, Karnataka Assembly Opposition Leader Siddaramaiah Tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X